This is my translation of Gopalakrishna Adiga`s Kannada poem "Kupamanduka". It was first published in Vagartha, no. 18, now defunct literary quarterly edited by Prof. Meenakshi Mukherjee, well-known critic, and author of Twice-born Fiction. Vagartha-18 focussed on Adiga`s poetry. It contained, along with this translation, an article on Adiga`s poetry by K. V. Tirumalesh, and translations of "Bhuta" ("Pasts and Ghosts"), "Prarthane" ("A Prayer"), and "Enadaru Madutiru Tamma" ("Do Something Brother") by A. K. Ramanujan and M. G. Krishnamurthi.
"Kupamanduka", written in December 1963, was first published in 1964 in Lahari, a Kannada poetry-quarterly, edited by Purnchandra Tejasvi and B. N. Shriram. It is interpreted variously as a poem addressed to a friend or God, lover, one`s own creative or better self. The original poem has a profound sadness--a deeply felt visada-- in it, and a capacity to haunt the reader`s mind.
This is the poem:
Where are you now? Once hand in hand with me
You blew the sail, plump and round,
Got clearance at the checkposts, led me to distant lands, far off islands,
And then suddenly slipped out, and escaped.
You flew into the vast blue sky
Deserting me before I could open my eyes;
Halfway through the belching orchard I tripped and fell
On the shore of the lake drunk to the brim.
Burdened by my body, I lie here , an orphan;
Flower and creeper, plant and thicket, tree and bush
Mockingly gaze, turn away their face, and laugh:
Cruel jokes and constant watch.
The jack fruit tree, with yellow leaves, drunk in sun`s rays,
Stands lame, stuck in the ground;
The banana tree with overripened fruits rottens
Sucking life from its own offsprings.
Grain is ripe after the dread of thunder and rain,
Streams from well and lake are choked with moss,
The circling bull with wounded neck pressed to the yoke
Cries this is the end of the race.
Endless labour pain was the reward
For my endless faith in you.
Should I remain a dry well? Touch me,
Wake me up, open the choked springs boiling far beneath.
I go back, I want a magic blanket
to be wrapped around me;
Winding it tight I slide below the valleys,
I leap and run to the call of the sea.
2
I was at the sea shore every morning
Anxiously waiting at the sand`s edge;
The gold ray shovelling the ocean foam
Marched forward the chariot`s pinnacle.
You playfully rowed the toy boat
With the small sail, and then
The boat suddenly hit the shore, you bent,
Stretched your arms, lifted me up up and hugged me.
Riding over the waves of seven seas
We spent the day gasping, lolling and lazing;
Cargo of rainbow, coloured beads and domes
Weighed heavily on the boat, we touched the shore.
In the dark ocean, in a lonely house on an island,
We played naked , diving deep;
We were one, laid the golden eggs,
Egg after egg had your stamp alone.
Every moment was festive; at the ropes of the chariot
Mine were the arms, yours the chant;
The strength of a thousnad voices and arms
Originated from our mating.
Yet you are a rogue, I know:
In the village school, when the teacher was away,
You were the Bhagavata, beating castanets,
I, mighty Bhima, entering the battlefield,
Whilred the ruler like a mace;
Twentyfive toe-leaps and the mudpot was smashed,
The class roared in laughter, welt marks on back
Remind me of the story even today.
We, both the cheats, sat on the sea-saw;
You were slightly lighter, still,
Now and then the keel evened, I did not feel
The heaviness of my body pulling down my end.
3
The time has come when the ripened fruits fall and rot,
The roots of the green is eaten by the termites,
The chariot is slowly devoured by the insects,
The rope is old, it dries and breaks.
Heaviness grows everyday; my end
of the sea-saw rests in mud, your end
Is in the depths of the sky,
I, forty, bespectacled, cannot trace your ways and norms.
Still I hear your voice like a hundred water-falls,
A hundred roots go deep whereever I sit;
The buds wither the moment they sprout
Dissociated from your prime essence.
4
I am an ancient frog; I have drunk the water
Of seven ponds; to hop and keep hopping is my nature;
From ground to the pond below, from pond to the ground above,
I vacillated between the two.
I flopped on the groud, panting and swelling, swelling and panting.
At least now I should get down into the well;
I will hide myself in the womb of the clay,
Until I know myself when the swelling is done.
Then the body, light as air, yellow as gold
Will jig up and down in the water of the lake.
I will lean back on the green grass of the bank and croak;
Then the boat will approach, touch me and console me.
If I eat a fly, does that put the estate in order?
Does life come back to the banana tree?
Is the palmtree sad if I sink, or the jack tree depresed?
I spent much effort realizing this.
The jasmine which flowers your smile,
The mango grove whose shade displays your love,
The mud at the bottom of the pool which shows your affection,
I will play among these--this is my new resolution.
Friday, October 22, 2010
Saturday, October 16, 2010
ಜಯದೇವನ ಗೀತಗೋವಿಂದ
ಜಯದೇವ ಸುಮಾರು ಹನ್ನೆರಡನೇ ಶತಮಾನದ ಹೊತ್ತಿಗೆ ಈಗಿನ ಒರಿಸ್ಸಾದ ಒಂದು ಹಳ್ಳಿಯಲ್ಲಿ ಹುಟ್ಟಿದ. ಅಲ್ಲಿಯೇ ಅಧ್ಯಾಪಕ ಆಗಿದ್ದ ಎನ್ನುತ್ತಾರೆ. ಅವನ ಜೀವನದ ವಿವರಗಳು ಇಂಟರ್ನೆಟ್ಟಿನಲ್ಲಿ ಸಿಗುವುದರಿಂದ ಯಾರಾದರೂ ಸುಲಭವಾಗಿ ನೋಡಿಕೊಳ್ಳಬಹುದು. ನಾನದನ್ನು ಪುನರುಚ್ಚರಿಸಬೇಕಾಗಿಲ್ಲ.
ಇಂಟರ್ನೆಟ್ಟಿನಲ್ಲಿ ಇಲ್ಲದ, ಆದರೆ ಯಾವುದೋ ಒಂದು ಪುಸ್ತಕದಲ್ಲಿ ಓದಿದ ಒಂದು ವಿವರ ನನಗೆ ಕುತೂಹಲ ಹುಟ್ಟಿಸಿತು. ಅದೆಂದರೆ, ಅವನೂ ಅವನ ಹೆಂಡತಿ ಪದ್ಮಾವತಿಯೂ ಸೇರಿ ಗೀತ ಗೋವಿಂದವನ್ನು ಒರಿಸ್ಸಾದ ದೇವಸ್ಥಾನಗಳಲ್ಲಿ ಗೀತರೂಪಕವಾಗಿ ಆಡುತ್ತಿದ್ದರು ಎಂಬುದು. ಹೌದಾಗಿದ್ದರೆ, ಒಂದು ಕಾವ್ಯವನ್ನು ನೃತ್ಯರೂಪಕವಾಗಿ ಆಡಿದ ಪ್ರಥಮ ದಾಖಲೆಗಳಲ್ಲಿ ಇದೊಂದು. ಗೀತಗೋವಿಂದವೂ ನೃತ್ಯರೂಪಕಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತಿದೆ. ನೃತ್ಯ ವಿದುಷಿ ಪದ್ಮಾ ಸುಬ್ರಹ್ಮಣ್ಯಂ ಇದನ್ನು ನರ್ತಿಸುತ್ತಾರೆ. ಇದನ್ನೊಂದು ನಾಟಕವಾಗಿಯೂ ರೂಪಿಸಬಹುದು.
ಇದು ವೈಷ್ಣವ ಭಕ್ತಿಯನ್ನು ವ್ಯಕ್ತಪಡಿಸುವ ಕಾವ್ಯವೆಂದು ಹೆಸರಾಗಿದೆ. ಆದರೆ ಇದನ್ನು ಎರಡು ಪ್ರೇಮಿಗಳ ಭಾವನೆ/ವರ್ತನೆಗಳನ್ನು ವ್ಯಕ್ತ ಪಡಿಸುವ ಅತ್ಯಂತ ಮಾನವೀಯ ಕವನ ಎಂದು ನೋಡುವುದು ನನಗೆ ಹೆಚ್ಚು ಇಷ್ಟವಾದ ಓದು. ಕೃಷ್ಣನನ್ನು ದೇವರಲ್ಲ, ಒಂದು ಜೀವಮಾನದಲ್ಲಿ ವಿವಿಧ ಅವಸ್ಥಾಂತರಗಳನ್ನು ಹಾದು ಬಂದ ಒಬ್ಬ ಮಹಾ ಮಾನವನೆಂದು ನಾನು ತಿಳಿದಿರುವುದು ಈ ಬಗೆಯ ಓದು ಹೆಚ್ಚು ಇಷ್ಟವಾಗಲು ಕಾರಣವಾಗಿದೆ. ಈ ಕಾವ್ಯ ಪ್ರೇಮಿಗಳಾಗಿ ಅವನ ಮತ್ತು ರಾಧೆಯ ಮನಸ್ಥಿತಿ/ವರ್ತನೆಗಳನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ. ಭಗವದ್ಗೀತೆಯಲ್ಲಿ ನಾವು ಕಾಣುವ ಕೃಷ್ಣನ ಮನಸ್ಥಿತಿ ಇದಕ್ಕೆ ವಿರುದ್ಧವಾದದ್ದು. ಅಲ್ಲಿ ಅವನು ತತ್ವಜ್ಞಾನಿ. ನಿರಪೇಕ್ಷವಾಗಿ ಕ್ರಿಯೆಯಲ್ಲಿ ತೊಡಗು ಎಂದು ಅರ್ಜುನನಿಗೆ ಉಪದೇಶಿಸುವ ಕೃಷ್ಣ ಭಗವದ್ಗೀತೆಯ ಮೊದಲ ಮೂರು ಅಧ್ಯಾಯಗಳಲ್ಲ್ಲಿ ಬಹಳ ಗಾಢ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತುತ್ತಾನೆ. ಆ ಪ್ರಶ್ನೆಗಳು, ವ್ಯಕ್ತಪಡಿಸುವ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಎಂದೇ ಅದು ಈಗಲೂ ಪ್ರಭಾವಶಾಲಿಯಾಗಿ ಉಳಿದುಕೊಂಡಿದೆ.
ಗೀತಗೋವಿಂದ ಶಬ್ದಸಂಗೀತಗಳ ಕಾವ್ಯ. ಶಬ್ದಸಂಗೀತ ಅರ್ಥಾನುಸಾರಿಯಾಗಿದೆ ಎನ್ನುವುದೇ ಈ ಕಾವ್ಯದ ಉತ್ಕೃಷ್ಟತೆಗೆ ಕಾರಣವಾಗಿದೆ. ಬೇಂದ್ರೆ "ನಾದಲೀಲೆ", "ತುಂ ತುಂ ತುಂ ತುಂ"ನಂಥಾ; ಅಡಿಗರು "ಮೋಹನ ಮುರಲಿ", "ವರ್ಧಮಾನ", "ಇದನ್ನು ಬಯಸಿರಲಿಲ್ಲ"ದ ಎರಡನೇ ಭಾಗ ಮೊದಲಾದಂಥ ತಮ್ಮ ಕೆಲವು ಅತ್ಯುತ್ತಮ ಕವನಗಳಲ್ಲಿ ಇದೇ ಮಟ್ಟದ ಅರ್ಥಾನುಸಾರಿಯಾದ ಶಬ್ದಸಂಗೀತವನ್ನು ಸಾಧಿಸುತ್ತಾರೆ.
ನನ್ನದು ನೇರ ಅನುವಾದ ಅಲ್ಲ. ಗೀತಗೋವಿಂದದ ಕೆಲವು ಸ್ಟಾನ್ಸಾಗಳನ್ನು ಆಧರಿಸಿ ಮಾಡಿಕೊಂಡ ಮುಕ್ತ ಮರುರಚನೆ.
ಶ್ರೀ ಭಾಗವತದ ಕೆಲವು ವಿವರಗಳನ್ನೂ ಇದರಲ್ಲಿ ಬಳಸಿದ್ದೇನೆ. ಇದನ್ನು ನಾನು ನನ್ನ ನಾಟಕ ಕೊಳಲು ಮತ್ತು ಶಂಖಕ್ಕಾಗಿ ಮೊದಲು ಮಾಡಿಕೊಂಡೆ. ಕೊಳಲು ಮತ್ತು ಶಂಖ ಕೃಷ್ಣಾವಸಾನ ಕುರಿತ ನಾಟಕ. ಕೃಷ್ಣ ಗೋಕುಲದಲ್ಲಿದ್ದಷ್ಟು ಕಾಲ ದನ ಮೇಯಿಸುತ್ತಾ ಕೊಳಲು ನುಡಿಸುತ್ತಾ ಇದ್ದ. ಬಿಲ್ಲ ಹಬ್ಬಕ್ಕಾಗಿ ಮಥುರೆಗೆ ಹೋದ ಮೇಲೂ ಅವನು ಒಂದು ಮುಖವಾದ್ಯವನ್ನೇ ಬಳಸುತ್ತಾನೆ__ಅದು ಶಂಖ. ಹೀಗೆ ಅವನ ಜೀವನದುದ್ದಕ್ಕೆ ಎರಡು ಮುಖವಾದ್ಯಗಳು ಅವನ ಸಂಗಾತಿಗಳಾಗಿ ಬರುತ್ತವೆ--ಕೊಳಲು ಮತ್ತು ಶಂಖ. ಹಾಗೆಯೇ, ಸಂಗೀತ ಮತ್ತು ಯುದ್ಧ, ಪ್ರೇಮಿಗಳು ಮತ್ತು ಯೋಧರು ಜೀವನದುದ್ದಕ್ಕೆ ಅವನ ಸಂಗಾತಿಗಳು. ಆದರೆ ಶಂಖದ ಬಳಕೆ ಸಂಗೀತಕ್ಕಾಗಿ ಅಲ್ಲ, ಯುದ್ಧಕ್ಕೆ ಕರೆಯುವುದಕ್ಕಾಗಿ. ಸ್ವಂತದ ಅಭಿವ್ಯಕ್ತಿಗಾಗಿ ಅವನು ಬಳಸುವುದು ಕೊಳಲನ್ನು ಮತ್ತು ತಾತ್ತ್ವಿಕ ಜಿಜ್ಞಾಸೆಗಳನ್ನು. ಈ ತಾತ್ತ್ವಿಕ ಜಿಜ್ಞಾಸೆ ಭಗವದ್ಗೀತೆಗೆ ಸೀಮಿತವಲ್ಲ. ಕೊನೆಯಲ್ಲಿ ಅವನ ಬಾಲ್ಯಸ್ನೇಹಿತ ಉದ್ಧವನ ಜೊತೆಗೆ ಅವನು ಮತ್ತೆ ತಾತ್ತ್ವಿಕ ಜಿಜ್ಞಾಸೆಯಲ್ಲಿ ಮಗ್ನನಾಗುತ್ತಾನೆ.
ನನ್ನ ನಾಟಕ ಯಾದವ ಕಲಹ ಮುಗಿದ ನಂತರ ಬೇಡನ ಬಾಣದಿಂದಾಗಿ ಕಾಲಿಗೆ ಪೆಟ್ಟಾದ ಘಟನೆಯಿಂದ ಪ್ರಾರಂಭವಾಗುತ್ತದೆ. ಈಗ, ಈ ಕೊನೆಗಳಿಗೆಯಲ್ಲಿ, ತಾನು ಬಾಲ್ಯದಲ್ಲಿ ಗೋಕುಲದಲ್ಲಿ ಬಿಟ್ಟು ಬಂದ ಕೊಳಲಿನ ಮತ್ತು ಆಗಿನ ರಾಗಗಳ ನೆನಪು ಕೃಷ್ಣನಿಗೆ ಮತ್ತೆ ಆಗುತ್ತಿದೆ; ಹಿಂದೆ ಕಲಿತಿದ್ದ ರಾಗಗಳನ್ನು ನುಡಿಸುತ್ತಾ ರಾಧೆಯ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಆ ಸಂದರ್ಭದಲ್ಲಿ ಈ ಕೆಳಗಿನ ಸಾಲುಗಳು ನಾಟಕದಲ್ಲಿ ಬರುತ್ತವೆ. ಇವುಗಳನ್ನು ಆ ನಾಟಕದ ಭಾಗವೆಂದಲ್ಲದೆ ಸ್ವತಂತ್ರವಾಗಿ ಸಹಾ ಓದಬಹುದಾದ್ದರಿಂದ ಇಲ್ಲಿ ಕೊಡುತ್ತಿದ್ದೇನೆ.
ಲವಂಗ ಪೊದೆಗಳ ಮೇಲಿಂದ ಮೆಲ್ಲನೆ ಮೆಲ್ಲನೆ ಬೀಸುವ ತಂಗಾಳಿ
ಕೋಗಿಲೆ ಕೂಗು ದುಂಬಿಯ ಝೇಂಕಾರ ಹೂವಿನ ಪರಿಮಳವು;
ವಸಂತ ಮಾಸವು--ಬೃಂದಾವನದಲಿ ಯುವತೀ ಜನರೊಡಗೂಡಿ
ಕೃಷ್ಣನು ವಿಹರಿಸುತಿರುವನು--ಸಖಿ ಇದ ರಾಧೆಗೆ ತಿಳಿಸುವಳು.
ತಮಾಲ ಚಿಗುರಿದೆ; ಮನ್ಮಥ ಉಗುರಿನ ಹಾಗಿದೆ ಮುತ್ತುಗವು;
ಥರ ಥರ ಹೂಗಳು ಎಲ್ಲೆಡೆ ಅರಳಿವೆ ವಿರಹಿಯ ನೋಡುತಿವೆ;
ನೋಡುತ ನಗುತಿವೆ ಹೃದಯವ ಸೀಳುತ ಈಟಿಯ ಥರದಲ್ಲಿ;
ಮಾವಿನ ಮರವೂ ಕಂಪಿಸುತಿಹುದು ಮಲ್ಲಿಗೆ ಬಯಕೆಯಲಿ.
ನೀಲಿಯ ಮೈ ಬಣ್ಣ ಪೂಸಿರೆ ಚಂದನ ಧರಿಸಿರೆ ಹೂವಿನ ಮಾಲೆ
ಮಣಿಕುಂಡಲಗಳು ಕೆನ್ನೆಗೆ ಮುತ್ತಿಡೆ ಮುಖದಲಿ ತುಂಬಿರೆ ಹಾಸ
ದಪ್ಪನೆ ಮೊಲೆಗಳ ಗೋಪಿಕೆ ಒಬ್ಬಳು ಅಪ್ಪುತ ಉಲಿಯುತ ಇರಲು
ಕೃಷ್ಣನು ವಿಹರಿಸುತಿರುವನು ವಿಲಾಸವತಿಯರ ಸಂಗಡ ಇರುಳು.
ಏನೋ ಗುಟ್ಟನು ಹೇಳುವ ನೆವದಲಿ ಇನ್ನೊಬ್ಬ ಗೋಪಿಕೆಯು
ಕೃಷ್ಣನ ಕಿವಿ ಬಳಿ ತುಟಿಯನ್ನಿಡುವಳು ಮೆಲ್ಲನೆ ಕಚ್ಚುವಳು.
ಮತ್ತೊಬ್ಬ ಗೋಪಿಕೆ ಯಮುನೆಲಿ ಆಡುವ ಆಸೆಯು ಜಿನುಗುತಿರೆ
ಬಕುಳದ ಪೊದೆಗಳ ಮರೆಯಲಿ ಕೃಷ್ಣನ ಬಟ್ಟೆಯ ಸೆಳೆಯುವಳು.
ಮಗುದೊಬ್ಬ ಗೋಪಿಕೆ ಕೃಷ್ಣನ ಮುರಲಿಯ ನಾದಕೆ ಸರಿದೊರೆಯಾಗಿ
ಕೈಗಳ ಬಳೆಯನು ಗಿಲ್ ಗಿಲ್ ಎನ್ನುತ ಹೊಂದಿಸಿ ನುಡಿಸಿದಳು.
ಇಂಥಾ ಯುವತೀ ಜನ ಸಮ್ಮರ್ದನು
ನನ್ನನು ನೆನೆಯುವನೇ?--
ರಾಧೆಯು ಸಖಿಯನು ಕೇಳುತ ಇಲ್ಲ
ಎನ್ನುತ ಕೊರಗುವಳು.
ಆದರೆ ಸಖಿಯೇ ಮನಸೋ ಆತನ
ಮತ್ತೂ ಸ್ಮರಿಸುತಿದೆ;
ಪೀತಾಂಬರವನು ಧರಿಸಿದ ಅವನನು
ನೆನೆಸುತ ಭ್ರಮಿಸುತಿದೆ;
ದೋಷವ ಎಣಿಸದೆ ಬರಿದೇ ಗುಣವನು
ಮಾತ್ರವೆ ಕಾಣುತಿದೆ;
ಸಿಟ್ಟೇ ಇಲ್ಲದೆ ಅವನನು ಮತ್ತೂ
ಮತ್ತೂ ನೆನೆಯುತಿದೆ.
ಆದರೆ ಯುವತೀ ಜನ ಸಮ್ಮರ್ದನು
ನನ್ನನು ನೆನೆಯುವನೇ?--
ರಾಧೆಯು ಸಾಧ್ಯತೆ ಶಂಕಿಸಿ ಕುಗ್ಗುತ
ಒಳ ಒಳ ಕೊರಗುವಳು.
ಆದರೆ ಇತ್ತಲೊ ಕೃಷ್ಣನು ರಾಧೆಯ
ನೆನಸುತ ದುಃಖಿಸುವ:
ಗೋಪೀ ಜನ ಜೊತೆ ಚೆಲ್ ಚೆಲ್ ಆಡುತ
ರಾಧೆಯ ನೋಯಿಸಿದೆ;
ಅವಳಿಲ್ಲದ ಮನೆ, ಅವಳಿಲ್ಲದ ಹಣ,
ಅವಳಿಲ್ಲದ ಬದುಕೇ ವ್ಯರ್ಥ;
ಸಿಟ್ಟಾದ ರಾಧೆಯ ಮತ್ತೆಂತು ಒಲಿಸಲಿ
ಮನ್ಮಥ, ಹೇಳು ಸಮಸ್ತ--
ಅವಳಾ ಹುಬ್ಬನು ಬಿಲ್ಲನು ಮಾಡಿರೆ
ಕಣ್ನೋಟ ಹೂಡಿದ ಬಾಣ;
ಆ ಬಾಣದ ಮೊನೆ ತಾಗಿದೆ ಒಳ ಮನೆ
ಮನ್ಮಥ, ಹೇಳು ಸಮಸ್ತ--
ಎನ್ನುತ ಕೃಷ್ಣನು ಪುಬ್ಬಲಿ ಗಿಡಗಳ
ಪೊದೆಯಲಿ ಸುಯ್ಯುತ ಇರಲು
ರಾಧೆಯ ಸಖಿ ಇದ ರಾಧೆಗೆ ಎಂದಳು
ಹಬ್ಬಿದೆ ಒಲಿಯುವ ಇರುಳು;
ರತಿಸುಖ ಸಾರವ ಪಡೆಯಲು ಗಮನವ
ವಿಳಂಬ ಮಾಡದೆ ತೆರಳು;
ಯಮುನಾ ತೀರದಿ ಧೀರ ಸಮೀರವು
ಕರೆಯುವ ಕೃಷ್ಣನ ಕೊಳಲು.
ಇಂಥಾ ಸಮಯದಿ ಚಂದ್ರನು ಹುಟ್ಟಿದ
ಹಬ್ಬಿತು ತಿಂಗಳ ಬೆಳಕು;
ಬೆಳ್ಳಿ ಮುಲಾಮನು ತೊಟ್ಟಿತು ಮರ ಗಿಡ
ಬೆಳೆಸುತ ಪ್ರೇಮದ ಸೆಳಕು.
ಅಂದುಗೆ ಶಬ್ದವು ಖಣಿ ಖಣಿರೆನ್ನಲು
ಜಘನದ ಒಡ್ಯಾಣ ಸಡಿಲಾಗಲು
ಕೊರಳಿನ ಹಾರವು ಕುಚ ಕುಂಭ ಮೇಲಾಡೆ
ರಾಧೆಯು ಕೃಷ್ಣನು ಸೇರಿದರು.
ಹೂವಿನ ಹಾಸಿಗೆ ಕುಂಜ ಕುಟೀರದಿ
ದುಂಬಿಯ ದನಿಗಳ ಸಂಗೀತವು;
ಪರಸ್ಪರ ತೋಳಲ್ಲಿ ಕರಗುನ ತನುಗಳು
ಕೃಷ್ಣನು ರಾಧೆಯು ಸೇರಿದರು.
ಇಂಥಾ ಹೊತ್ತಲ್ಲಿ ಪ್ರಕೃತಿಯ ಪ್ರತಿಯೊಂದು
ಖಗ ಮೃಗ ಗಿಡ ಮರ ಲತೆಗೆ
ಪ್ರತಿಯೊಂದು ಜೀವಿಗು ಸೃಷ್ಟಿಯ ಸಂಭ್ರಮ
ಯಮುನೆಯು ಹರಿವಳು ಸಮುದ್ರದೆಡೆ.
ಲವಂಗ ಪೊದೆಗಳ ಮೇಲಿಂದ ಮೆಲ್ಲನೆ
ಮೆಲ್ಲನೆ ಬೀಸುವ ತಂಗಾಳಿ;
ಕೋಗಿಲೆ ಕೂಗು ದುಂಬಿಯ ಝೇಂಕಾರ
ಹೂವಿನ ಪರಿಮಳವು;
ತಮಾಲ ಚಿಗುರಿದೆ; ಮನ್ಮಥ ಉಗುರಿನ
ಹಾಗಿದೆ ಮುತ್ತುಗವು;
ಥರ ಥರ ಹೂಗಳು ಎಲ್ಲೆಡೆ ಅರಳಿವೆ
ವಿರಹಿಯ ನೋಡುತಿವೆ;
ನೋಡುತ ನಗುತಿವೆ ಹೃದಯವ ಸೀಳುತ
ಈಟಿಯ ಥರದಲ್ಲಿ;
ಮಾವಿನ ಮರವೂ ಕಂಪಿಸುತಿಹುದು
ಮಲ್ಲಿಗೆ ಬಯಕೆಯಲಿ.
**********
ಸೂಚನೆ: ನನ್ನ ಸಮಗ್ರ ನಾಟಕಗಳು, ಸಂಪುಟ 2 (ಬೆಲೆ ರೂ60.00) ಮತ್ತು ಸಂಪುಟ 3 (ಬೆಲೆ ರೂ75.00) ಈಗ ಬೋಧಿ ಟ್ರಸ್ಟಿನಿಂದ ಪ್ರಕಟವಾಗಿವೆ. ಸಂಪುಟ 2ರಲ್ಲಿ ಪುಟ್ಟಿಯ ಪಯಣ ಮತ್ತು ಸುದರ್ಶನ--ಈ ಎರಡು ನಾಟಕಗಳಿವೆ. ಸಂಪುಟ 3ರಲ್ಲಿ ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ. ಕೊಳಲು ಮತ್ತು ಶಂಖ ಇರುವುದು ಸಮಗ್ರ ನಾಟಕಗಳು ಸಂಪುಟ 1ರಲ್ಲಿ. ಇದರ ಪ್ರತಿಗಳು ಮುಗಿದಿವೆ.
ಈ ಪುಸ್ತಕಗಳ ವಿತರಕರು:
1. ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್)
ನಂ. 27, 21ನೇ ಮೇನ್ ರಸ್ತೆ, ಬಿ ಡಿ ಎ ಕಾಂಪ್ಲೆಕ್ಸ್ ಎದುರು
ಬನಶಂಕರಿ ಎರಡನೇ ಹಂತ, ಬೆಂಗಳೂರು 560070.
ಫೋನ್: 080 26711329
premierpublishingco@yahoo.in
2. ಅತ್ರಿ ಬುಕ್ ಸೆಂಟರ್
ಶರಾವತಿ ಬಿಲ್ಡಿಂಗ್, ಬಲ್ಮಠ ರಸ್ತೆ,
ಮಂಗಳೂರು 1
0824 2425161

Wednesday, October 6, 2010
ಶೇಕ್ಸ್ಪಿಯರ್ ಸಾನೆಟ್ಟುಗಳು
ನಾನು ಇತ್ತೀಚೆಗೆ ಶೇಕ್ಸ್ಪಿಯರ್ ಇಂಗ್ಲಿಷಿನಲ್ಲಿ ಬರೆದ 154 ಸಾನೆಟ್ಟುಗಳಲ್ಲಿ 120 ಸಾನೆಟ್ಟುಗಳನ್ನು ಅನುವಾದಿಸಿದ್ದೇನೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ. ಸಂಖ್ಯೆ ಮೂಲ ಸಾನೆಟ್ಟನ್ನು ಸೂಚಿಸುತ್ತದೆ.
1
ಚೆಲುವು, ಚೆಲು ಜೀವಿಗಳು ವೃದ್ಧಿಸಲೆಂದು ಬಯಸುವೆವು--
ಚೆಲು ಗುಲಾಬಿ ಎಂದೆಂದು ಅಳಿಯದೆಯೆ ಉಳಿಯಲಿ ಎಂದು;
ಕಳೆದಂತೆ ಕಾಲ ಹಣ್ಣಾದ್ದು ಮುಂದಿನ ಚಿಗುರು
ಗತದ ಚಹರೆಯ ಗುರುತ ಹೊತ್ತು ಬಾಳಲಿ ಎಂದು.
ಆದರೆ ನೀನು ನಿನ್ನ ಕಣ್ಣಿನ ತೇಜದಲ್ಲಿ ಕುರುಡಾದವನು.
ನಿನ್ನ ಬೆಳಕಿನ ಕುಡಿಯ ನಿನ್ನ ಒಳಗಿನ ಎಣ್ಣೆ ಹೊಯ್ದು ಉರಿಸುತ್ತಿರುವಿ.
ಸಮೃದ್ಧಿ ಇರುವಲ್ಲಿ ಬರಗಾಲ ಇದರ ಪರಿಣಾಮ
ನಿನಗೆ ನೀನೇ ಶತ್ರು, ನಿನ್ನ ಹಿತ ವ್ಯಕ್ತಿತ್ವಕ್ಕೆ ನೀನೆ ನಿಷ್ಠುರಿ ಕ್ರೂರಿ.
ಇದ್ದರೂ ನೀನಿಂದು ಈ ಜಗತ್ತಿನ ಹೊಸತು ಆಭರಣ,
ವರ್ಣ ವೈವಿಧ್ಯಮಯ ವಸಂತದ ಬರವ ಸಾರುವವ,
ನಿನ್ನ ಸತ್ತ್ವವ ನಿನ್ನ ಮುಗುಳಲ್ಲೆ ಹುಗಿಯುತ್ತಿರುವಿ,
ಬೋಸ, ಕಂಜೂಸ, ಎಳಸ, ಬಚ್ಚಿಟ್ಟು ಹುಳಿಯುತ್ತಿರುವಿ.
ಇರಲಿ ಸಹಾನುಭೂತಿ ಜಗತ್ತಿನ ಬಗ್ಗೆ; ಇಲ್ಲವಾದರೆ ಜಗದ ಹಕ್ಕಿನ ಫಲವ
ನೊಣೆವ ಬಕಾಸುರ ಬುದ್ಧಿ ನಿನ್ನ ಬಳಿ ಗೋರಿ ಬಳಿ.
2
ನಲವತ್ತು ಚಳಿಗಾಲ ನಿನ್ನ ಮುಖ ಮೇಲೆ ದಾಳಿಯ ಮಾಡಿ
ನಿನ್ನ ಚೆಲು ನೆಲೆಯಲ್ಲಿ ಆಳ ಕಾಲುವೆಯ ತೋಡುವ ಸಮಯ
ಇಂದು ಎಲ್ಲರು ಕಣ್ಣು ನೆಟ್ಟು ನೋಡುತ್ತಿರುವ ನಿನ್ನ ಯವ್ವನ ರೂಪ
ಹೆಚ್ಚೇನು ಬೆಲೆಯಿರದ ಚಿಂದಿ ಕಳೆ ಆಗುವುದು. ಆಗ
ಕೇಳಿದರೆ ಎಲ್ಲಿ ನೆಲೆಸಿದೆ ನಿನ್ನ ಹಳೆ ದಿನದ ಚೆಲುವೆಂದು
ನಿನ್ನ ಯವ್ವನ ಮದದ ಉನ್ಮತ್ತ ಸಂಪದವೆಂದು
ಒಳ ಕಂತಿರುವ ಮಸಕು ಮಸಕು ಬೆಳಕಿನ ಕಣ್ಣ ಒಳಗೆಂದು ಹೇಳುವುದು
ಮರ್ಯಾದೆ ಹೋಗುವ ಮಾತು, ಅರ್ಥವಿಲ್ಲದ ಡಂಭ.
ನಿನ್ನ ಸೌಂದರ್ಯಕ್ಕೆ ಎಂಥ ಬೆಲೆ ಬಂದೀತು
ಹೇಳಿದರೆ ನೀನಾಗ: "ಈ ನನ್ನ ಚೆಲು ಕಂದ
ನನ್ನ ಲೆಕ್ಕವ ಚುಕ್ತ ಮಾಡುವುದು, ನನ್ನ ಮುದಿತನಕ್ಕೆ ಪ್ರತಿ ನಿಂದು."
--ಸಾಧಿಸಿ ತೋರಿ ಅವನ ಸೌಂದರ್ಯ ಉತ್ತರದಲ್ಲಿ ನಿನ್ನದು ಎಂದು.
ಹೊಸತಾಗಬೇಕಿದೆ ನೀನು ಹಳಬ ಆಗುತ್ತಿರಲು
ಬಿಸಿಯಾಗಬೇಕಿದೆ ರಕ್ತ ತಣಿಯುತ್ತ ಬರುತ್ತಿರಲು.
27
ದಣಿದು ಸುಸ್ತಾಗಿ ಹಾಸಿಗೆಗೆ ಧಾವಿಸುವೆ
ಪಯಣಿಸಿ ಸೋತ ಅಂಗಾಂಗ ವಿಶ್ರಾಂತಿ ಪಡೆಯಲಿ ಎಂದು.
ಆದರೆ ಆಗ, ದೇಹವು ದುಡಿದು ಸೋತಾಗ
ಮನಸ್ಸ ಒಳಗಿನ ಪಯಣ ಮನಸ್ಸ ದುಡಿಸುವುದಕ್ಕೆ ತೊಡಗುವುದು.
ಪರಿಣಾಮ--ಇದ್ದರೂ ನಾನು ನನ್ನಷ್ಟಕ್ಕೆ ಎಷ್ಟೋ ದೂರ
ನನ್ನ ಯೋಚನೆ ಯಾತ್ರೆ ತೊಡಗುವುದು ನಿನ್ನ ಕಡೆ
ಮುಚ್ಚಲೆಳಸುವ ರೆಪ್ಪೆ ಮುಚ್ಚಲು ಬಿಡದೆ ತುಸು ಕೂಡ
ದಿಟ್ಟಿಸುತ ಅನಿಮೇಷ ಪ್ರತಿ ದಿಟ್ಟಿಸುವ ಎದುರಿನ ಇರುಳ.
ವ್ಯತ್ಯಾಸ ಒಂದೇ ಒಂದು--ನನ್ನ ಕಲ್ಪಿತ ದೃಷ್ಟಿ
ನಿನ್ನ ಪ್ರತಿಮೆಯ ನನ್ನ ಮನಸ್ಸಲ್ಲಿ ಬೆಳೆಸುವುದು; ಅದು,
ಭಯಾನಕ ನಿಶೆಯ ಚೆಲು ಮಾಡಿ, ಹೊಳೆಯಿಸಿ ಅದರ ಕಪ್ಪು ಮುಖ,
ಭೀಕರದ ಇರುಳಲ್ಲಿ ರತ್ನದ ಹಾಗೆ ತೂಗುವುದು.
ಹೀಗೆ, ಹಗಲಲ್ಲಿ ನನ್ನ ಮೈ, ಇರುಳಲ್ಲಿ ಮನಸ್ಸು
ನಿನಗಾಗಿ ನನಗಾಗಿ ಅವಿಶ್ರಾಂತ ದುಡಿಯುವುವು.
29
ಅದೃಷ್ಟದ ಮತ್ತು ಜನರ ಕಣ್ಣಲ್ಲಿ ನಾ ನತದೃಷ್ಟ ಅನ್ನಿಸಿದಾಗ
ನನ್ನ ಈ ಪರಿತ್ಯಕ್ತ ಸ್ಥಿತಿಗಾಗಿ ದುಃಖಿಸಿಕೊಂಡು ನನ್ನಷ್ಟಕ್ಕೆ
ಕಿವುಡು ಸ್ವರ್ಗವ ನನ್ನ ನಿರರ್ಥ ಕರೆಯಿಂದ ತಿವಿಯುತ್ತ
ನನ್ನ ಪರಿಸ್ಥಿತಿಗೆ ಪರಿತಪಿಸಿ ವಿಧಿ ಶಪಿಸಿ ಭವಿಷ್ಯದ ಬಗ್ಗೆ
ಆಶಾವಾದಿ ಆಗಿದ್ದರೆಷ್ಟು ಚೆಂದ ಇತ್ತೆಂದು ಯೋಚಿಸಿಕೊಂಡು
ಅವನ ಚೆಲುವನ್ನು ಇವನಂಥ ಬಂಧು ಸ್ನೇಹಿತರ
ಆ ಅವನ ಕಲೆಯ, ಈ ಇವನು ಪಡೆದ ಅವಕಾಶಗಳ
ಕಾಣದೆಯೆ ತೃಪ್ತಿ ಸುಖಿಸದೆಯೆ ಕಳೆವೆ ಇರುವ ದಿನಮಾನಗಳ.
ಇಂತಾಗಿ ನನ್ನ ನಾನೇ ಧಿಕ್ಕರಿಸಿ ಇರುವಾಗ
ಫಕ್ಕ ಮೂಡುವಿ ನೀನು ಮನಸ್ಸ ಒಳ; ಆಗ ಸ್ಥಿತಿ ನಂದು
ಮುಂಜಾನೆ ಮಬ್ಬು ಮುಸುಕಿರುವ ಬುವಿ ಮೇಲೆ ಹಾಡುತ್ತ
ಆಗಸದ ಬೆಳಕಿಗೆ ನೆಗೆವ ಬಾನಾಡಿ ಥರ ಉಜ್ಜುಗಿಸಿ ಏಳುವುದು.
ನಿನ್ನ ಪ್ರೀತಿಯ ನೆನಪು ನನಗಾಗ ನೀಡುವುದು ಸಂಪದವ
ಬದಲಿಸೆನು ನನ್ನ ಸ್ಥಿತಿ ನೀಡಿದರು ಚಕ್ರವರ್ತಿಯ ಪದವ.
66
ಸುಸ್ತಾಗಿ ಇದರಿಂದೆಲ್ಲ ಕೊನೆ ವಿಶ್ರಾಂತಿಗಾಗಿ ಹಂಬಲ ಪಡುವೆ--
ಎಂಥ ಎಂಥದ್ದೆಲ್ಲ ನೋಡುವುದು--ಯೋಗ್ಯ ಅಸವಡೆಯುವುದ,
ಏನೂ ಅಲ್ಲದವನೊಬ್ಬ ವಿಜೃಂಭ ವೈಭವದಲ್ಲಿ ಮೆರೆಯುವುದ,
ಧರ್ಮಭೀರುವ ಧರ್ಮ ನಿಂದಕನಂತೆ ತೋರುವುದ,
ಸುವರ್ಣ ಬಹುಮಾನ ಯಾರೋ ನಾಮರ್ದನಿಗೆ ನೀಡುವುದ,
ಗುಣನಿಧಿಯಾದ ಕನ್ನಿಕೆಯ ಸೂಳೆಯ ಮಾಡಿ ಮಾರುವುದ,
ಅರೂಪ ಮಾಡುವುದ ಸಂಪೂರ್ಣ ಪರಿಪೂರ್ಣವಾದದ್ದ,
ಅದಕ್ಷ ಅಧಿಕಾರಿ ನಿಸ್ಸಹಾಯ ಪಡಿಸುವುದು ಶಕ್ತನ್ನ,
ಕಲೆಯ ದನಿ ದರ್ಪಿಷ್ಟ ಬಲಶಾಲಿ ಘರ್ಜನೆಗೆ ಉಡುಗುವುದ,
ನಿಗ್ರಹಿಸುವುದ ಭಂಡ ಜಾಣನ್ನ ವೇಷವ ತೊಟ್ಟು ತಿಳಿದವನ,
ಪರಮ ಸತ್ಯವ ಪೆದ್ದುತನವೆಂದು ತಿಳಿಯುವುದ,
ಸೆರೆ ಸಿಕ್ಕ ಒಳ್ಳೆತನ ಕೇಡು ಮುಖಂಡನಿಗೆ ಶರಣು ಹೋಗುವುದ.
ಸುಸ್ತಾಗಿ ಇದರಿಂದೆಲ್ಲ ದೂರ ಹೋಗಬೇಕೆನಿಸುವುದು;
ಸತ್ತಲ್ಲಿ ಹಾಗೆಂದು ಅವಳೊಬ್ಬಳೇ ಕಾಲ ಎಳೆಯಬೇಕಾಗುವುದು.
73
ಇತ್ತೀಚೆಗಷ್ಟೇ ಹಕ್ಕಿಗಳು ಕೂತು ಮೇಳ ಸಂಗೀತ ಹಾಡಿದ್ದ
ಮರದ ಕೊಂಬೆಗಳು ಚಳಿಗೆ ನಡುಗುತ್ತ ಎಲೆಗಳು ಉದುರಿ
ಅಥವಾ ಒಂದೆರಡು ಹಳದಿ ಎಲೆಗಳು ತೂಗಿ ಅಥವಾ ಅವೂ ಇಲ್ಲ
ಎಂಬಂಥ ಋತುವ ಸ್ಥಿತಿಯನು ನೀನು ನನ್ನಲ್ಲಿ ಕಂಡೀಯ.
ಕಂಡೀಯ ನನ್ನಲ್ಲಿ ಇದನ್ನೂ ಕೂಡ: ಪಶ್ಚಿಮದಲ್ಲಿ ದೇವ ಕಂತಿದ ಮೇಲೆ
ಸಾವಿನ ಎರಡನೆಯ ಆತ್ಮದ ಹಾಗೆ ಪ್ರತಿಯೊಂದ ನುಂಗಿ ಮುಗಿಸುವ
ಕಡು ಇರುಳ ದಾಳಿಗೆ ಮೊದಲ ಮುಸ್ಸಂಜೆ ದಿವಸದ ತೇಜ ಮಸಳಿಸಿದ ಬಳಿಕ
ಉಳಿವ ಅಂತಿಮ ಬೆಳಕ ಮರಣ ಮುನ್ನದ ಥರದ ಮಿಣ ಮಿಣವ.
ಯವ್ವನದ ಬೂದಿಯ ಮೇಲೆ ಹೊಳೆಯುತ್ತಿರುವ ಕಿಡಿ ಬೆಂಕಿ
ತನ್ನ ಕೊನೆಗಾಲ ತನ್ನ ಪೋಷಿಸಿದ ಶಯ್ಯೆ ಮೇಲೆಯೆ ಕಳೆದು
ತನ್ನನ್ನು ಉರಿಸಿದ್ದೆ ತನ್ನನ್ನು ನುಂಗುವ ಥರ ಆಗಿ ಮುಗಿವಂಥ
ದಿನಮಾನ ಕಂಡೀಯ ಕಂಡೀಯ ನೀನು ನನ್ನಲ್ಲಿ ಮುಂದೊಮ್ಮೆ.
ತಿಳಿದದ್ದೆ ಇದು ನಿನಗೆ, ನಿನ್ನ ಪ್ರೀತಿಯ ಅದು ಮಾಡುವುದು ಗಟ್ಟಿ;
ಬಿಡಲೆ ಬೇಕಾದ್ದ ಪ್ರೀತಿಸಬೇಕು ಮನಸ್ಸನ್ನು ಚೆದುರದ ಹಾಗೆ ಕಟ್ಟಿ.
94
ನೋಯಿಸುವ ಅಧಿಕಾರ ಉಳ್ಳವರು ನೋಯಿಸರು;
ಕೆಲಸ ಮಾಡುವ ಹಾಗೆ ತೋರುವ ಜನರು ನಿಷ್ಕ್ರಿಯರು;
ಉಳಿದವರ ಚಲಿಸಬಲ್ಲವರು ತಾವು ಕಲ್ಲಿನಂತುಳಿಯುವರು
ಅಲ್ಲಾಡದೆಯೆ, ತಣ್ಣ, ಸ್ಥಿತಪ್ರಜ್ಞ, ಕೆರಳದೆಯೆ ಚುಚ್ಚಿದರು.
ಅಂಥವರು ಸ್ವರ್ಗದ್ದು ಕೃಪೆಯನ್ನು ಪಡೆಯುವರು,
ಪ್ರಕೃತಿ ಸಂಪತ್ತನ್ನು ಹಾಳು ಮಾಡದೆಯೆ ಉಳಿಸುವರು;
ಮುಖ ಮೇಲೆ ಪ್ರಭು ಹಿಡಿತ ಉಳ್ಳವರು ಅಂಥ ಜನ
ಉಳಿದವರು ಅವರ ಉನ್ನತಿ ಕೆಳಗೆ ಬದುಕುವರು;
ವಸಂತದ ಹೂವು ಅದರಷ್ಟಕ್ಕೆ ಬದುಕಿದ್ದು ಸತ್ತರೂ
ವಸಂತದ ಗಂಧ ವಸಂತದಲ್ಲೆಲ್ಲ ಕಡೆ ಬೀರುವುದು;
ಅಂಥಾ ಹೂವು ಕಳಪೆ ಒಂದರ ಜೊತೆಗೆ ಸೇರಿದರೆ
ಅಂಥಾ ಕಳಪೆ ವಸಂತದ ಮಿಗಿಲು ಪದ ಏರುವುದು.
ಚೆಲುವಾದ ವಸ್ತುಗಳು ತಮ್ಮ ಕೆಲಸಗಳಿಂದ ಹಾಳು ಆಗುವುವು;
ಕೊಳೆವ ಲಿಲ್ಲಿಯ ಹೂವು ಕಳಪೆ ಗಿಡಕ್ಕಿಂತ ಹೆಚ್ಚು ನಾರುವುದು.

Saturday, October 2, 2010
ಡೊಂಕು ಪ್ರಗಾಥ
ನಾನು ಡೊಂಕು ಎಂಬವರೊಬ್ಬರನ್ನು ಭೇಟಿಯಾಗಿದ್ದೇನೆ. ಒಂದು ಸಲ ಭೇಟಿಯಾದ ಮೇಲೆ ಇವರ ಬಗ್ಗೆ ಆಸಕ್ತಿ ಹುಟ್ಟಿ ಆಗಾಗ ಭೇಟಿಯಾಗುತ್ತಾ ಇವರ ಚಟುವಟಿಕೆಗಳನ್ನು ಗಮನಿಸುತ್ತಾ ಇದ್ದೇನೆ. ಇವರು ಡೊಂಕು ಎಂದಲ್ಲದೆ ಡೊಂಕ, ಡೊಂಕೇಶ, ಡೊಂಕುರಾಯ, ಡೊಂಕು ರಾವ್, ಡೊಂಕುಜಿ, ಡೊಂಕಪ್ಪ, ಡೊಂಕಯ್ಯ, ಮಿ. ಡೊಂಕು, ಶ್ರೀಮಾನ್ ಡೊಂಕು ಎಂಬಿತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕಾಣಿಸಿಕೊಳ್ಳುವುದಿದೆ. ಒಂದೇ ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕಾಣಿಸಿಕೊಳ್ಳುವುದೂ ಇದೆ. ಕೆಲವು ಸಲ ಇವರ ಶ್ರೀಮತಿಯವರಾದ ಶ್ರೀಮತಿ ಡೊಂಕಿಣಿಯೂ ಕಾಣಲಿಕ್ಕೆ, ಮಾತಾಡಲಿಕ್ಕೆ ಸಿಗುವುದಿದೆ. ಇವರೂ ಡೊಂಕಮ್ಮ, ಡೊಂಕಕ್ಕ, ಡೊಂಕವ್ವ, ಡೊಂಕಿತಿ, ಡೊಂಕಾವತಿ, ಡೊಂಕುಶ್ರೀ, ಡೊಂಕುಮತಿ, ಡೊಂಕಾಂಬೆ, ಡೊಂಕೇಶ್ವರಿ ಎಂಬಿತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಇವರ ಬಗ್ಗೆ fascination ಆಗಿ ಇವರನ್ನು ನನ್ನ ಶಕ್ತ್ಯಾನುಸಾರ ಅಧ್ಯಯನ ಮಾಡಿ ಕೆಲವು ಪದ್ಯ ಬರೆದಿದ್ದೇನೆ. ಅವುಗಳಲ್ಲಿ ಒಂದು ಪದ್ಯ ಕೆಳಗೆ ಕೊಟ್ಟಿದ್ದೇನೆ. ಇನ್ನುಳಿದ ಪದ್ಯಗಳನ್ನು ಮುಂದೊಂದು ದಿನ ಕೊಡುತ್ತೇನೆ. ನೀವೂ ಶ್ರೀಮಾನ್ ಡೊಂಕುವನ್ನು ಭೇಟಿಯಾಗಿರುವ ಸಾಧ್ಯತೆಯಿದೆ__ಈ ಪದ್ಯಗಳಲ್ಲಿ ಇಲ್ಲದ ಡೊಂಕು/ಡೊಂಕಿಣಿ ಸಾಹೇಬರ, ಅವರ ವಂಶಸ್ಥರ ಅನೇಕ ಹೊಸ ಗುಣಗಳು ನಿಮಗೆ ಗೊತ್ತಿರಬಹುದು. ಹಾಗಿದ್ದರೆ ಸೂಕ್ತ ಸಮಯದಲ್ಲಿ ನೋಟ್ಸ್ ಹೋಲಿಸಿಕೊಳ್ಳಬಹುದು.
"ಡೊಂಕು ಪ್ರಗಾಥ" ಮೊದಲು ನನ್ನ ಕವನ ಸಂಗ್ರಹ ಇಂದ್ರಪ್ರಸ್ಥ (1994)ದಲ್ಲಿ, ಆ ನಂತರ ನನ್ನ 1964-2003ರ ಸಮಗ್ರ ಕಾವ್ಯ ಮಾತಾಡುವ ಮರ (2003)ದಲ್ಲಿ ಪ್ರಕಟವಾಗಿದೆ.
ಡೊಂಕು ಪ್ರಗಾಥ
ಡೊಂಕು ಬಂದನೋ ಅಂಕು ಡೊಂಕು ಬಂದನೋ
ಅಂಕು ಡೊಂಕು ಸಂಕಪಾಲ ಡೊಂಕು ಬಂದನೋ
ಒಮ್ಮೆ ಕಣ್ಣ ಅತ್ತ ಕಡೆಗೆ ತಿರುಗಿ ಕಣ್ಣ ಇತ್ತ ಕಡೆಗೆ
ನೆತ್ತಿ ಕಡೆಗೆ ಆಗ ಈಗ ಕೊಂಕು ಬಂದನೋ
ಕೊಂಕು ಬಂದನೋ ಅಂಕು ಡೊಂಕು ಬಂದನೋ
ಡೊಂಕು ಬಂದನೋ ಪಾಂಕು ಹಿಡಿದು ಬಂದನೋ
ಬಾಲವನ್ನು ಕಿವಿಗೆ ಸೆಕ್ಕಿ ಮೆದುಳ ಪುಕುಳಿ ಒಟ್ಟೆಗಿಕ್ಕಿ
ಢುರ್ರ ಡುರ್ರ ಹೂಸು ಬಿಟ್ಟು ಡೊಂಕು ಬಂದನೋ
ಡೊಂಕು ಹೂಸು ಪರಿಮಳ, ಡೊಂಕು ಹೂಸು ಪರಿಮಳ
ಎಂದು ಮೆರೆದು ಹರಿದು ತರಿದು ಡೊಂಕು ಬಂದನೋ
ಕೆಲವು ಸಲ ಅತ್ತು ಬಿಡುವ, ಕೆಲವು ಸಲ ಬರಿದೆ ನಗುವ
ಕೆಲವು ಸಲ ಧ್ಯಾನಿಯಂತೆ ಕೂತು ಹೆಂಡ ಕುಡಿಯುವ
ಕೆಲವು ಸಲ ದುಡ್ಡು ಕೊಡುವ, ಕೆಲವು ಸಲ ಊಟ ಕೊಡುವ,
ಏನು ಕೊಡದೆ ಇದ್ದರೂನು ಕೊಟ್ಟೆನೆಂದು ಹೇಳಿಕೊಳುವ
ಡೊಂಕು ಬಂದನೋ ಅಂಕು ಡೊಂಕು ಬಂದನೋ
ಯಂಕು ಮಂಕು ಜೊತೆಗೆ ಸೇರಿ ಡೊಂಕು ಬಂದನೋ
ಇಂತು ಪರಿ ಅರೆಕ್ಷಣ ಒಡ್ಡೋಲಗ ಕೊಟ್ಟು ಡೊಂಕುವು ತೆರೆಯ ಹಿಂದೆ ಹೋದನು. ಒಡ್ಡೋಲಗ ಹೀಗೆ ಕ್ಷಣಾರ್ಧದಲ್ಲಿ ಬರ್ಖಾಸ್ತುಗೊಳ್ಳಲು ಕಾರಣವೆಂದರೆ__
ಡೊಂಕುವೂ ಡಾರ್ವಿನ್ನನ ವಿಕಾಸವಾದದ ರೀತಿ ಕೊಂಬು ಹಲ್ಲುಗುರು ಬಾಲ ಇಷ್ಟಿಷ್ಟೇ ಸವೆದು ಮನುಷ್ಯನಾದವನೇ ಹೌದಷ್ಟೇ. ಆದರೆ ಅವನು ಪ್ರಾಣಿಸಹಜವಾಗಿ ವರ್ತಿಸುತ್ತಲೂ ಯೋಚಿಸುತ್ತಲೂ ಇದ್ದುದರಿಂದ ಮೆದುಳಿನ ಪರಿಣಾಮ ದೇಹದ ಮೇಲೆ ಆಗಿ ಅದು ಹಿಮ್ಮುಖ ಸಾಗಿ ಅವನ ಅಂಡಿನ ಮೇಲೆ ಬಾಲ ಬೆಳೆಯಲು ಪ್ರಾರಂಭವಾಗಿತ್ತು. ಪರಿಣಾಮವಾಗಿ ಅವನಿಗೆ ಅರೆಕ್ಷಣಕ್ಕಿಂತ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಅದನ್ನು ಸರಿಪಡಿಸಲೆಂದು ಅವನು ಬೇರೆ ಬೇರೆ ವೈದ್ಯರನ್ನು, ಮಂತ್ರವಾದಿಗಳನ್ನು, ತೀರ್ಥಕ್ಷೇತ್ರಗಳನ್ನು ಭೇಟಿ ಮಾಡಿದ್ದನು. ಕೆಲವರು ಸಹಾನುಭೂತಿ ತೋರಿಸಿದರೆ, ಔಷಧಿಯನ್ನೋ ಪರಿಹಾರವನ್ನೋ ಹೇಳಿದರೆ, ಇನ್ನು ಕೆಲವರು ಬಾಲ ಬೆಳೆಯುವುದು ತಿಳಿಯುತ್ತಲೇ ನಗಲು ಸುರು ಮಾಡುವರು, ಬೇರೆಯವರ ಕರೆದು ವಿಷಯ ತಿಳಿಸುವರು, ಬಾಲ ತೋರಿಸು ಎನ್ನುವರು. ಇವನಿಗೆ ಇದರಿಂದ ಸಿಟ್ಟು ಬಂದು ಬೈಯ್ಯಲು, ಕಿರುಚಾಡಲು, ಹೊಡೆಯಲು ಮೊದಲಾಗುವನು. ಇವನು ಹೀಗೆ ಹೆಂಡ ಕುಡಿದ ಮಂಗನ ಹಾಗೆ ಆಡಲು ಸುರು ಮಾಡಿದೊಡನೆ ಬಾಲ ಮತ್ತೊಂದಿಂಚು ಬೆಳೆಯುವುದು. ಆದರೆ ಕೆಲವರು ಹೀಗೆ ಬಾಲ ಬೆಳೆಯುವುದು ಪವಾಡವೆಂದೂ ಹನುಮಂತ ದೇವರ ಕೃಪೆಯೆಂದೂ ತಿಳಿದು ಡೊಂಕುವನ್ನು ಭಕ್ತಿಯಿಂದ ಕಾಣುತ್ತಿದ್ದರು. ಅಂಥವರಲ್ಲಿ ಗೋಜೇಂದ್ರನೂ ಒಬ್ಬ. ಅದೆಂತೆಂದರೆ--
ಗೋಜೇಂದ್ರ ಜೊತೆಗೆ ಇದ್ದ ಖೋಜೇಂದ್ರ ಜೊತೆಗೆ ಇದ್ದ
ಡೊಂಕು ಹೂಸಿ ಮೂಸಿ ಮೂಸಿ ಹಿಂದೆ ಹಿಂದೆ ಬರುತಲಿದ್ದ
ದೇವರನ್ನು ಬೇಡುತಿದ್ದ--ನನಗೆ ಒಂದು ಬಾಲ ಕೊಡು
ಡೊಂಕುವಂಥ ಬುದ್ಧಿ ಕೊಡು, ಅಂಕು ಡೊಂಕು ಮಾಡಿ ಬಿಡು
ಡೊಂಕು ಮರಿಯ ಮಾಡು ನನ್ನ ಕಪ್ಪು ಕುರಿಯ ಮಾಡು ನನ್ನ
ಡೊಂಕು ಸೇವೆಯಲ್ಲಿ ಮನಸ ಸದಾ ಇರಿಸು ದೇವರೇ
ಗೋಜೇಂದ್ರನಿಗು ಒಂದು ಬಾಲ ಬಂದಿತೋ--ಸಣ್ಣ
ಬಾಲ ಬಂದಿತೋ
ಖೋಜೇಂದ್ರನಿಗು ಒಂದು ಬಾಲ ಬಂದಿತೋ--ಚೆನ್ನ
ಬಾಲ ಬಂದಿತೋ
ಹೆಂಡತಿಯು ನೋಡಿದಳು ಖೋಜೇಂದ್ರನಾ ಬಾಲ
ಕೈಯ್ಯಲ್ಲಿ ಅದುಮುತ್ತ ಸುಖ ಪಟ್ಟಳು:
ಮುಂದೆ ಇರೊದಕ್ಕಿಂತ ಹಿಂದೆ
ಇರೋದೇ ಚೆಂದ
ಮನುಷ್ಯರಂತೆ ನಡೆಯೋಕಿಂತ
ಕುಣಿಯೋದೇ ಅಂದ
ಸೂಟು ಬೂಟು ಹಾಕ್ಕೊಂಡು ಹೋಗಿ
ದೊಡ್ಡವ ಅಂತಾರೆ
ಮಾರ್ಕ್ಸ್ ಕಾರ್ಡು ಹಿಡ್ಕೊಂಡು ಹೋಗಿ
ಜೀನಿಯಸ್ ಅಂತಾರೆ
ಪ್ಯಾಂಟಿನೊಳಗೆ ಬಾಲ ಇರಲಿ ಕೋತಿ ಆಗಲಿ
ನಾನು ಇದನೆ ಬಳಸಿಕೊಳುವೆ ಹೀಗೇ ಇರಲಿ
ಕೋತಿ ನಾನು ನೀನು ಜೊತೆಲಿ ಹೇನು ತಿನ್ನೋಣ
ರಾತ್ರಿಯಲ್ಲಿ ಮರವ ಹತ್ತಿ ಹಲ್ಲು ಕಿರಿಯೋಣ
ನೀನು ಖೋಜು ನಾನು ರೋಜು
ಎಂಥಾ ಗೌಜು
ನಿನಗೆ ಬಾಲ ಬಂದ ಮೇಲೆ
ಎಂಥಾ ಮೋಜು
ಹೀಗೇ ಕಾಲ ಕುಣಿದು ಶ್ರೀ ಮತ್ತು ಶ್ರೀಮತಿ ಗೋಜೇಂದ್ರರಿಗೆ ಮಕ್ಕಳು ಹುಟ್ಟಲು ಪ್ರಾರಂಭವಾದವು. ಹುಟ್ಟಿದ ಹತ್ತು ಮಕ್ಕಳಲ್ಲಿ ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ಬಾಲ. ಇವರು ಕಿರುಚಿದರೆ, ಸಿಟ್ಟು ಮಾಡಿಕೊಂಡರೆ, ಇನ್ನೊಬ್ಬರನ್ನು ದ್ವೇಷಿಸಿದರೆ, ಹೊಡೆದರೆ, ಬೈದರೆ ಬಾಲ ಒಂದೊಂದಿಂಚು ಬೆಳೆಯುವುದು. ಇನ್ನೊಬ್ಬರನ್ನು ಪ್ರೀತಿಯಿಂದ ಕಂಡೊಡನೆ ಬಾಲ ಚಿಕ್ಕದಾಗುವುದು. ಇವರಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೂ ಹೀಗೇ ಬಾಲ. ಜೊತೆಗೆ ಡೊಂಕುವಿಗೆ ಬಾಲ ಬಂದಂತೆ ಅನೇಕರಿಗೆ ಇದ್ದಕ್ಕಿದ್ದಂತೆ ಬಾಲ ಬೆಳೆಯಲು ಪ್ರಾರಂಭವಾಯಿತು. ಇಂತಾಗಿ ಮೂರು ನಾಲ್ಕು ಜನರೇಷನ್ನು ಕಳೆಯುವುದರೊಳಗೆ ವಿಕಾಸವಾದದ ವಿರುದ್ಧವಾಗಿ ಈ ನಾಗರಿಕತೆ ಹಿಮ್ಮುಖ ಸಾಗಿ ಬಾಲವಿದ್ದ ಸಾಕಷ್ಟು ಸಂಖ್ಯೆಯ ಜನಗಳು ಈ ನಾಡಿನಲ್ಲಿ ತುಂಬಿಕೊಂಡರು. ಆದಿಮ ಜನಾಂಗದ ರೀತಿಯಲ್ಲಿ ಹೊಡೆದಾಡುತ್ತಿದ್ದವರು ಇದ್ದಕ್ಕಿದ್ದಂತೆ ಬಾಲ ಬೆಳೆದು ಅನಿಯಂತ್ರಿತವಾಗಿ ಮರದ ಮೇಲೆ ನೆಗೆದು ಕೂತು ಹಲ್ಲು ಕಿರಿಯುವುದು ಸಾಮಾನ್ಯವಾಗಿತ್ತು. ಬಾಲವಿದ್ದವರೇ ಹೆಚ್ಚಿದ್ದರಿಂದ ಚುನಾವಣೆಯಲ್ಲಿ ಅವರೇ ಗೆದ್ದು ಬರುತ್ತಿದ್ದರು. ಬಾಲವಿದ್ದವರಿಗೆ ಇದ್ದ ಬೆಲೆ, ಸವಲತ್ತು ಇಲ್ಲದವರಿಗೆ ಇಲ್ಲದ್ದರಿಂದ ಬಾಲವಿಲ್ಲದವರು ತಮಗೂ ಬಾಲ ಬರಲಿ ಎಂದು ಹಂಬಲಿಸುವಂತಾಯಿತು. ನಾಗರಿಕತೆ ಮತ್ತೆ ಪ್ರಾಣಿ ಸ್ಥಿತಿಗೆ ಹಿಂದಿರುಗುತ್ತಿರುವ ಇಂಥಾ ಸಂದರ್ಭದಲ್ಲಿ ಡೊಂಕುವೇ ಈ ಜನಾಂಗದ ಪ್ರಧಾನ ಪಿತೃ ಎನಿಸಿದನು ಎಂಬಲ್ಲಿಗೆ--
ಮಂಗಲಂ ಜಯ ಮಂಗಲಂ---ಶುಭ
ಮಂಗಲಂ
ಸಹಜ ಮಾನವರಂತೆ ಓಡಾಡುವ ಜನರಿಗೆ
ಮಂಗಲಂ ಜಯ ಮಂಗಲಂ
ಸಹಜ ಉಣ್ಣುವ ತಿನ್ನುವ ಹೆಂಡತಿ ಮಕ್ಕಳ ಜೊತೆಗೆ
ಕಾಲ ಕಳೆಯುವ ಜನಕೆ ಮಂಗಲಂ
ಸಹಜ ಜೀವನ ಗತಿಯ ಅನುಸರಿಸುವವ ಯಾರೊ
ಸಹಜ ನಗೆ ಮಾತುಗಳ ಮನುಷ್ಯ ಯಾರೋ
ಕೊಂಕುವಲ್ಲ ಡೊಂಕುವಲ್ಲ ವಂಕಿ ಮಂಕಿಗಳಲ್ಲ
ಸಹಜ ಮನುಷ್ಯನ ಬದುಕ ಸಹಜತೆಗೋ
ತೆವಳದೆ ಹಾರದೆ ನಡೆವವಗೋ
ಮಂಗಲಂ ಜಯ ಮಂಗಲಂ--ಶುಭ
ಮಂಗಲಂ.
(1990)

Tuesday, September 28, 2010
ಕ್ಯಾಮೆರಾ ಕಣ್ಣು
ಕೆ. ಎಸ್. ರಾಜಾರಾಂ ನಮ್ಮ ಮುಖ್ಯ ಛಾಯಾಚಿತ್ರಗ್ರಾಹಕರಲ್ಲಿ ಒಬ್ಬರು. ಸುಮಾರು ಮೂರು ದಶಕಗಳಿಗೂ ಮಿಕ್ಕಿ ಅವಧಿಯಿಂದ ಈ ಕ್ಷೇತ್ರದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಛಾಯಾಗ್ರಹಣಕ್ಕೆ ಮಾತ್ರ ಅವರು ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಛಾಯಾಗ್ರಹಣದ ಬಗ್ಗೆ ಶಿಬಿರಗಳನ್ನು ನಡೆಸಿ ಕಲಿಯಬೇಕೆನ್ನುವವರಿಗೆ ಹೇಳಿಕೊಟ್ಟಿದ್ದಾರೆ. ಯುವ ಪ್ರತಿಭಾವಂತ ಛಾಯಾಗ್ರಾಹಕರಿಗೆ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ಹೀಗೆ ಅವಕಾಶಗಳನ್ನು ಒದಗಿಸುವ ಒಂದು ಕ್ರಮವಾಗಿ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಆಯ್ದ ಪ್ರತಿಭಾವಂತ ಛಾಯಾಗ್ರಹಕರ ಪ್ರಾತಿನಿಧಿಕ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಾರೆ. ಈ ಸಲವೂ ಸುಮಾರು ಇಪ್ಪತ್ತು ಜನ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವಿದೆ. ಇವರಲ್ಲಿ ಡಿ. ಆರ್. ನಾಗರಾಜ್ ಮಗಳು ಅಮೂಲ್ಯ ಸೇರಿದ್ದಾರೆ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಅಮೂಲ್ಯ ಹೀಗೆ ತನ್ನ ಸೃಜನಶೀಲತೆಗಾಗಿ ಒಂದು ಕ್ಷೇತ್ರವನ್ನು ಆರಿಸಿಕೊಂಡು ಬೆಳೆಯುತ್ತಿರುವುದು ನಾಗರಾಜ್ ಸ್ನೇಹಿತರಾದ ನಮಗೆಲ್ಲಾ ಸಂತೋಷದ ವಿಷಯ. ಹಗ್ಗೋಡು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವ ಇನ್ನೊಬ್ಬ ಪ್ರತಿಭಾವಂತ ಕೇಶವ ಅನನ್ಯ. ಎ. ಎನ್ ಮುಕುಂದ್, ಚೆನ್ನಕೇಶವ, ಚರಣ ಮೊದಲಾದವರು ಛಾಯಾಗ್ರಹಣ ಕುರಿತು ತರಗತಿಗಳನ್ನು ನಡೆಸಲಿದ್ದಾರೆ.
ಕಲಿಯುವವರಿಗೆ ಒಳ್ಳೆಯ ಅವಕಾಶ.
ಹೆಗ್ಗೋಡಿನ ಈ ಪ್ರದರ್ಶನದ ಅವಕಾಶ ಮುಖ್ಯವಾದದ್ದು. ಯಾಕೆಂದರೆ ಹೆಗ್ಗೋಡಿನಲ್ಲಿ ತುಂಬಾ ಜನ ಈ ಚಿತ್ರಗಳನ್ನು ನೋಡುತ್ತಾರೆ. ಅಲ್ಲಿಗೆ ಬರುವವರೆಲ್ಲರೂ ಕಲೆಯ ವಿವಿಧ ಆಯಾಮಗಳಲ್ಲಿ ಆಸಕ್ತರು. ಬಂದ ಮೇಲೆ ಹೆಗ್ಗೋಡಿನಲ್ಲಿ ಛಾಯಾಚಿತ್ರ, ಸಿನೆಮಾ, ನಾಟಕ ನೋಡುವುದು, ಚರ್ಚೆಗಳನ್ನು ಕೇಳುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಖಂಡಿತವಾಗಿ ಬೆಂಗಳೂರು ಮುಂಬೈಗಳಲ್ಲಿ ಬಂದದ್ದಕ್ಕಿಂತ ಹೆಚ್ಚು ಜನ ನೋಡುಗರು ಹೆಗ್ಗೋಡಿನಲ್ಲಿ ಸಿಗುತ್ತಾರೆ. ಬರೀ ನೋಡುಗರಲ್ಲ__ಗಂಭೀರ ನೋಡುಗರು. ಪೇಟೆಗಳಲ್ಲಿ ಎಷ್ಟು ಜನ ನೋಡಲು ಬರುತ್ತಾರೆ ಎಂಬುದಕ್ಕೆ ಎಂ. ಎಸ್. ಮೂರ್ತಿ ಇತ್ತೀಚೆಗೆ ಬರೆದ ಒಂದು ಲೇಖನ ಸಾಕ್ಷಿಯಾಗಬಲ್ಲುದು. ಎಲ್ಲಾ ಪತ್ರಿಕೆಯವರನ್ನು ನೋಡಿ ಆಸಕ್ತರನ್ನು ನೋಡಿ ಆಮಂತ್ರಣ ಕೊಟ್ಟು ಬಂದರೆ ಮುಂಬೈಯಲ್ಲಿ ಅವರ ಚಿತ್ರಪ್ರದರ್ಶನ ನೋಡಲು ಬಂದವರ ಸಂಖ್ಯೆ ಬೆರಳುಗಳಿಗಿಂತ ಕಮ್ಮಿ. ಪೇಟೆಗಳಲ್ಲಿ ಕಲೆಗೆ ಮತ್ತಿತರ ಬೌದ್ಧಿಕ ಹಸಿವುಗಳನ್ನು ಇಂಗಿಸಿಕೊಳ್ಳಲು ಬೇಕಾದ ಆರಾಮ ಇಂದು ಬಹುತೇಕ ಜನರಿಗೆ ಲಭ್ಯವಾಗುತ್ತಿಲ್ಲ. ಮನರಂಜನೆಗೆ ಬೇಕಾದಷ್ಟನ್ನು ಟೀವಿಗಳು ಒದಗಿಸುವುದರಿಂದ ಬಹುತೇಕ ಜನ ಅಷ್ಟಕ್ಕೆ ತೃಪ್ತರಾಗುತ್ತಾರೆ. ಇಂಥಲ್ಲಿ ಸಣ್ಣ ಸಣ್ಣ ಹಳ್ಳಿಗಳಲ್ಲಿರುವ ಸಂಸ್ಥೆಗಳು ನಿಜವಾದ ಸಾಂಸ್ಕೃತಿಕ ತಾಣಗಳು.
ರಾಜಾರಾಂ ಈ ಪ್ರದರ್ಶನದ ಸಮಯಕ್ಕೆ ಒಂದು ಪ್ರಶ್ನೆ ಎತ್ತಿದ್ದಾರೆ. ಈಗ ತಾಂತ್ರಿಕವಾಗಿ ತುಂಬಾ ಸೊಫಿಸ್ಟಿಕೇಟೆಡ್ ಕ್ಯಾಮೆರಾಗಳು ಬಂದಿವೆ. ಹೀಗಾಗಿ ಹಿಂದಿನವರಂತೆ ನೆರಳು ಬೆಳಕು ಬಣ್ಣಗಳ ಪರಿಣಾಮ ಉಂಟು ಮಾಡಲು ಹೆಚ್ಚು ಕಷ್ಟ ಪಡಬೇಕಿಲ್ಲ. ಅಂಥಲ್ಲಿ ಒಬ್ಬ ಛಾಯಾಚಿತ್ರಗ್ರಾಹಕನ ಪ್ರಾಮುಖ್ಯತೆ ಹೇಗೆ ನಿರ್ಧಾರವಾಗುತ್ತದೆ?__ ರಾಜಾರಾಂ ಅವರ ಈ ಪ್ರಶ್ನೆ ಛಾಯಾಚಿತ್ರಕಾರರಿಗೆ ಮಾತ್ರವಲ್ಲ, ನಾಟಕ, ಸಿನೆಮಾ ಮೊದಲಾದ ಕ್ಷೇತ್ರಗಳ ಕಲಾವಿದರಿಗೂ ಅನ್ವಯಿಸುವಂಥದು. ಉದಾಹರಣೆಗೆ ನಾಟಕದಲ್ಲಿ ಅಪೇಕ್ಷಿತ ಪರಿಣಾಮಗಳನ್ನು ತಾಂತ್ರಿಕತೆಯ ಇಂದಿನ ಯುಗದಲ್ಲಿ ತರುವುದು ಸುಲಭ. ನಾನು ನೋಡಿದ ಶೇಕ್ಸ್ಪಿಯರಿನ ಮ್ಯಾಕ್ಬೆಥ್ ನಾಟಕದ ಒಂದು ಬ್ರಿಟಿಷ್ ಪ್ರದರ್ಶನ ಇಲ್ಲಿ ನೆನಪಾಗುತ್ತದೆ. ಅದರಲ್ಲಿ ಜಕ್ಕಿಣಿಯರು ಅಕ್ಷರಶಃ ಗಾಳಿಯಲ್ಲಿ ತೇಲಾಡುತ್ತಾರೆ. Hover through the fog and filthy air ಎಂಬ ಮೂಲದ ಸಾಲುಗಳನ್ನು ಅವರು ದೃಶ್ಯೀಕರಿಸಿ ತೋರಿಸಿದ್ದರು. ತಾಂತ್ರಿಕ ಪರಿಣತಿಯಿಂದಾಗಿ ಅದು ಸಾಧ್ಯವಾಯಿತು. ಬಿ. ವಿ. ಕಾರಂತರ ಇದೇ ನಾಟಕದ ಪ್ರದರ್ಶನವಾದ ಬರ್ನಂ ವನದಲ್ಲಿ ಜಕ್ಕಣಿಯರು ನೆಲದ ಮೇಲೆ ಕುಣಿಯುವುದನ್ನಷ್ಟೇ ತೋರಿಸುತ್ತಾರೆ. ಆದರೆ, ಮರದ ಬೊಡ್ಡೆಯಂತೆ ರಂಗದ ಮೇಲೆ ನಿಂತಿದ್ದ ಅವರು ಇದ್ದಕ್ಕಿದ್ದಂತೆ ಕಾಲು ನೆಲಕ್ಕೆ ಅಪ್ಪಳಿಸಿ ಕುಣಿಯತೊಡಗುತ್ತಾರೆ--ಭೂತಗಳು ಕುಣಿದಂತೆ; ಇದು ವರೆಗೆ ಪ್ರಶಾಂತವಾಗಿದ್ದ ಯಾವುದನ್ನೋ ಒದ್ದು ಎಬ್ಬಿಸುವವರಂತೆ; ಕೇಡನ್ನು ಆಹ್ವಾನಿಸಿ ಪ್ರಕೃತಿಗೇ ಜ್ವರ ಬರಿಸಿ ನಡುಗಿಸುವವರಂತೆ. ನನಗೆ ಆಧುನಿಕ ತಾಂತ್ರಿಕತೆಯ ಮೊರೆಹೋಗದ, ಆದರೆ ಸೃಜನಶೀಲ ಅರ್ಥೈಸುವಿಕೆಯಾದ ಕಾರಂತರ ಪ್ರಯೋಗವೇ ಹೆಚ್ಚು ಚೆನ್ನಾಗಿದೆ ಅನ್ನಿಸಿತು. ಬ್ರಿಟಿಷ್ ಪ್ರಯೋಗ ಮೂಲದ ಸಾಲುಗಳನ್ನು ದೃಶ್ಯೀಕರಿಸಿ ತೋರಿಸಿದರೆ ಕಾರಂತರ ಪ್ರಯೋಗ ಮೂಲದ ಸಾಲುಗಳ ಹಿಂದಿನ ಸತ್ವವನ್ನು ನಮ್ಮೆದುರು ತೋರಿಸುತ್ತದೆ.
ಛಾಯಾಗ್ರಹಣದಿಂದಲೇ ಒಂದು ಉದಾಹರಣೆ ತೆಗೆದುಕೊಳ್ಳುತ್ತೇನೆ. ಟಿ. ಎಸ್. ಸತ್ಯನ್ ತೆಗೆದ ನೆಹರೂ ಚಿತ್ರ ಪ್ರಸಿದ್ಧವಿದೆ. ತುಂಬಾ ದಿನ ಅದಕ್ಕಾಗಿ ಪ್ರಯತ್ನಿಸಿ ಕೊನೆಗೆ ಹಿಂಬದಿಯಿಂದ ಸೌಥ್ ಬ್ಲಾಕಿನ ಕಿಟಿಕಿಗಳ ಮೂಲಕ ಬೆಳಕು ತೂರಿ ಬರುತ್ತಿದ್ದಾಗ ಈಗ ಪ್ರಖ್ಯಾತವಾಗಿರುವ__ನೆಹರೂರನ್ನು ಹಿಂಬದಿಯಿಂದ ತೋರಿಸುವ__ ಆ ಚಿತ್ರ ತೆಗೆದರಂತೆ. ನೆರಳು ಬೆಳಕು ದೃಷ್ಟಿಯಿಂದ, ನೆಹರೂರ ಚಿಂತನಶೀಲ ವ್ಯಕ್ತಿತ್ವ ಚಿತ್ರಿಸುತ್ತದೆ ಎಂಬ ದೃಷ್ಟಿಯಿಂದ ಚೆನ್ನಾಗಿದೆ. ಇದನ್ನು ನೋಡಿದಾಗ ರಘು ರೈ ತೆಗೆದ ಇಂದಿರಾ ಗಾಂಧಿಯವರ ಚಿತ್ರ ನೆನಪಾಗುತ್ತದೆ. ಇದೂ ಹಿಂಬದಿಯಿಂದ ತೆಗೆದ ಚಿತ್ರವೇ. ಇದರಲ್ಲಿ ನೆಳಲು ಬೆಳಕುಗಳ ವಿಶೇಷ ಸಂಯೋಜನೆಯೇನೂ ಇಲ್ಲ. ಆದರೆ ಈ ಚಿತ್ರ ಭಾರತ ಸರಕಾರ ಇಂದಿರಾ ಕಾಲದಲ್ಲಿ ಹೇಗೆ ನಡೆಯುತ್ತಿತ್ತು ಎಂಬ ಚಿತ್ರ ಕೊಡುತ್ತದೆ. ಚಿತ್ರದಲ್ಲಿ ಇಂದಿರಾ ಗಾಂಧಿ ಏನೋ ಬರೆಯುತ್ತಿದ್ದಾರೆ. ಅವರ ಇಡೀ ಕ್ಯಾಬಿನೆಟ್ಟು ಅವರೆದುರು ವಿನೀತವಾಗಿ ನಿಂತಿದೆ. ಹೆಚ್ಚಿನವರು ವಯಸ್ಸಾದವರು. ಖಾದಿ ಟೊಪ್ಪಿ ಖಾದಿ ಜುಬ್ಬ ಹಾಕಿದ್ದಾರೆ. ಅಂದರೆ ಸ್ವಾತಂತ್ರ್ಯ ಚಳವಳಿಗಾರರ ತಲೆಮಾರಿಗೆ ಸೇರಿದವರು ಅಥವಾ ಅದರ ಜೊತೆ ನೇರ ಸಂಪರ್ಕ ಇದ್ದವರು. ಒಬ್ಬ ಮಾತ್ರ ಸಫಾರಿ ಸೂಟು ಹಾಕಿದ್ದಾನೆ. ಉಳಿದವರಿಗಿಂತ ಸ್ವಲ್ಪ ಚಿಕ್ಕ ವಯಸ್ಸಿನವನು ಕೂಡಾ.ಇಂದಿರಾ ಗಾಂಧಿ ಒಬ್ಬರೇ ಅಷ್ಟು ಜನರಲ್ಲಿ ಕೂತವರು. ಅವರೆಲ್ಲರೂ ಇಂದಿರಾ ಗಾಂಧಿ ಕ್ಯಾಬಿನೆಟ್ಟಿನ ಮಂತ್ರಿಗಳು. ಇದು ಕ್ಯಾಬಿನೆಟ್ಟು ಮೀಟಿಂಗಂತೆ. ಇಂದಿರಾ ಗಾಂಧಿ ಅವರನ್ನು ಗಮನಿಸುತ್ತಲೂ ಇಲ್ಲ. ತಮ್ಮ ಪಾಡಿಗೆ ತಾವು ಏನೋ ಬರೆಯುತ್ತಿದ್ದಾರೆ. ಮಂತ್ರಿಗಳು ತಮ್ಮನ್ನು ಮೇಡಂ ಗಮನಿಸಲಿ ಎಂದು ಕಾಯುತ್ತಿದ್ದಾರೆ. ಸಫಾರಿ ಸೂಟಿನವ ಏನೋ ಹೇಳಲೆಂದು ಕೃತಕ ಮುಗುಳ್ನಗೆಯನ್ನು ಮುಖಕ್ಕೆ ಅಂಟಿಸಿಕೊಂಡು ಕಾಯುತ್ತಿದ್ದಾನೆ.
ಸತ್ಯನ್ ಅವರ ಚಿತ್ರ ಚೆನ್ನಾಗಿದೆ. ಆದರೆ ರಘು ರೈ ಅವರ ಚಿತ್ರ ತುರ್ತುಪರಿಸ್ಥಿತಿಯ ಒಂದು ಪರಿಣಾಮಕಾರಿ ಚಿತ್ರವನ್ನು ನಮ್ಮ ಕಣ್ಣೆದುರು ಇಡುತ್ತದೆ. ಅದು ಒಂದು ರಾಜಕೀಯ ಕವನ ಅಥವಾ ನಾಟಕ ಅಥವಾ ಕಾದಂಬರಿಯಷ್ಟೇ ಪರಿಣಾಮಕಾರಿಯಾಗಿದೆ. ಅಂದರೆ ಮುಖ್ಯವಾದದ್ದು ಛಾಯಾಗ್ರಾಹಕನ ಸಂವೇದನೆ, ಪರ್ಸ್ಪೆಕ್ಟಿವ್, ಎಷ್ಟನ್ನು ಒಳಗೊಳ್ಳಬಲ್ಲದೆಂಬ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾವು ಒಬ್ಬ ಲೇಖಕನ ಬಗ್ಗೆ ಅಥವಾ ಒಬ್ಬ ಸಿನೆಮಾ ನಿದೇಶಕನ ಬಗ್ಗೆ ಕೇಳುತ್ತೇವೆ. ಅಂತಿಮವಾಗಿ ಆ ಸಂವೇದನೆ ಎಷ್ಟು ಘಟ್ಟಿಯಾದದ್ದು ಎಂಬುದೇ ಮುಖ್ಯವಾದದ್ದು. ಅಂದರೆ ದಾಖಲಿಸುವ ಕ್ಯಾಮೆರಾ ಕಣ್ಣು ಒಂದೇ ಅಲ್ಲ; ಆ ಕಣ್ಣಿನ ಹಿಂದಿರುವ ಕಣ್ಣೂ ಎಷ್ಟು ನೋಡುತ್ತದೆ ಎಂಬುದರ ಮೇಲಿಂದ ಒಂದು ಚಿತ್ರದ ಪ್ರಾಮುಖ್ಯತೆ ನಿಲ್ಲುತ್ತದೆ.

Wednesday, September 22, 2010
My Legs are Pillars
We are on the eve of a very important judgment about the supposed birthplace of Shri Rama in Ayodhya.The dispute is what should stand in the controvertial place--should it be a temple or a mosque. In this context, I want to bring to your notice a Kannada poem by Basava, 11th century AD saint-poet. In A. K. Ramanujan`s famous translation, the poem is as follows:
The rich
will make temples for Siva.
What shall I,
a poor man,
do?
My legs are pillars,
the body the shrine,
the head a cupola
of gold.
Listen, O lord of the meeting rivers,
things standing shall fall,
but the moving ever shall stay.
(Speaking of Siva, Penguin Classics, 1973, p.88)
A mosque or a temple is built by a rich person. Whatever it is, you see beggars sitting in front of it; there is a watchman to safeguard our chappals. And, inside, there are priests with their chantings and incense and flowers and all that. If the body is the temple, then every one is equal to the other. There are no caste or class diffrences. And it is also easy to find out whether it is God or the devil that dwells in such a temple. One can easily make out whether the insider is god or devil just by listening to a few sentences a person speaks or a few gestures he makes. If it is a mosque or a temple or such dwelling places of the gods, it is not easy to make out who is inside--god or devil. The glittering lights, the incense, the chantings, the folklore about the palce mask what is really inside.
I don`t have to elaborate the relevence of this 1000-year old poem on the eve of the judgment about the Babri Masjid/Shri Rama Temple issue. I, with anxiety, hope we at least make attempts to make our legs the pillars, our heads the cupola, and our bodies the shrines.
ನಾವು ಒಂದು ಬಹು ಮುಖ್ಯ ದಿನದ ಮುನ್ನಾದಿನದಲ್ಲಿದ್ದೇವೆ. ಅಯೋಧ್ಯೆಯ ಆ ಜಾಗ ರಾಮ ಹುಟ್ಟಿದ ಜಾಗವೇ ಅಲ್ಲವೇ, ಅಲ್ಲಿ ರಾಮನ ದೇವಸ್ಥಾನ ಇರಬೇಕೇ ಅಥವಾ ಮಸೀದಿ ಇರಬೇಕೇ ಎಂಬುದು ವಿವಾದದ ಮುಖ್ಯ ಕೇಂದ್ರ. ತೀರ್ಪು ಮಸೀದಿ ಇರಬೇಕೆನ್ನಲಿ ದೇವಸ್ಥಾನ ಇರಬೇಕೆನ್ನಲಿ__ಅಂತೂ ಆ ಸ್ಥಾವರ ಇರಬೇಕೇ ಈ ಸ್ಥಾವರ ಇರಬೇಕೇ ಎಂಬ ಮಾತಿನ ಸುತ್ತವೇ ನಿರ್ಧಾರ ಸುತ್ತುತ್ತದೆ. ಈ ಸಂದರ್ಭದಲ್ಲಿ ನನಗೆ ಬಸವಣ್ಣನವರ ಉಳ್ಳವರು ಶಿವಾಲಯವ ಮಾಡುವರು ಎಂದು ಪ್ರಾರಂಭವಾಗುವ ಈ ವಚನ ನೆನಪಾಗುತ್ತದೆ. ವಚನ ಹೀಗಿದೆ:
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ__ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶ__
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೂಡಲ ಸಂಗಮದೇವ.
ಈ ವಚನವನ್ನು ನೆನೆಸಿಕಂಡಾಗ ನನಗೆ ಅನ್ನಿಸುವುದು ಇಷ್ಟು:
ಹಣವಿರುವವರು ದೇವಸ್ಥಾನವನ್ನೋ ಮಸೀದಿಯನ್ನೋ ಕಟ್ಟಿಸುತ್ತಾರೆ. ಅದೊಂದು ಸ್ಥಾವರ. ಅದರ ಎದುರು ಭಿಕ್ಷುಕರು ಕೂತಿರುತ್ತಾರೆ. ಚಪ್ಪಲಿ ನೋಡಿಕೊಳ್ಳುವವ ಇರುತ್ತಾನೆ. ಅಂದರೆ ಚಪ್ಪಲಿಯನ್ನೂ ಕದಿಯುವಂಥಾ ಕಳ್ಳರು, ಕಳ್ಳತನದಿಂದಲೇ ಚಪ್ಪಲಿಯ ಅಗತ್ಯವನ್ನು ಪೂರೈಸಬೇಕಾದಷ್ಟು ಬಡವರು ಇರುತ್ತಾರೆ ಎಂದಾಯಿತು. ಜೊತೆಗೆ ದೇವರ ಮತ್ತು ಭಕ್ತರ ಮಧ್ಯೆ ವ್ಯವಹರಿಸುವುದಕ್ಕೆ ಪೂಜಾರಿಗಳು, ಪೂಜೆಗಳು, ಅವರ ನಿಯಮ ಕಟ್ಟಳೆಗಳು ಇರುತ್ತವೆ. ಆದರೆ, ದೇಹವೇ ದೇಗುಲವಾದರೆ, ಅಲ್ಲಿ ಭಿಕ್ಷುಕರೂ ಇಲ್ಲ, ಚಪ್ಪಲಿ ನೋಡಿಕೊಳ್ಳುವವನೂ ಬೇಕಾಗಿಲ್ಲ. ಪ್ರತಿಯೊಬ್ಬ ಇನ್ನೊಬ್ಬನಿಗೆ ಸಮಾನ. ಮತ್ತು, ಇಂಥಾ ದೇಗುಲದೊಳಗೆ ಇರುವವ ದೇವರೋ ಪಿಶಾಚಿಯೋ ಎಂಬುದೂ ಆಯಾ ವ್ಯಕ್ತಿಯ ಜೊತೆ ಎರಡು ವಾಕ್ಯ ಮಾತಾಡುವುದರ ಒಳಗೆ ಗೊತ್ತಾಗಿಬಿಡುತ್ತದೆ. ಸ್ಥಾವರವಾದ ದೇವಸ್ಥಾನದ ಒಳಗೆ ಇರುವುದು ಪಿಶಾಚಿಯೋ ದೇವರೋ ಎನ್ನುವುದು ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ, ವಿಧ ಬಗೆಯ ಅಲಂಕಾರಗಳಲ್ಲಿ, ಉದ್ಘೋಷಗಳಲ್ಲಿ ಮರೆಯಾಗಿಬಿಡುತ್ತದೆ.
ಕೋರ್ಟಿನ ತೀರ್ಪಿಗೆ ಕಾದಿರುವ ಈ ಆತಂಕದ ದಿನಗಳಲ್ಲಿ ಒಂದು ಸಾವಿರ ವರ್ಷ ಹಿಂದಿನ ಮೇಲಿನ ಕಾವ್ಯದ ರೆಲೆವೆನ್ಸ್ ಬಗ್ಗೆ ಮತ್ತೆ ವಿವರಿಸಬೇಕಾದ್ದಿಲ್ಲ. ಏನಾಗುತ್ತದೋ ಎಂಬ ಆತಂಕದ ಈ ಸಂಜೆ, ಕಾಲು ಕಂಬ ಮಾಡುವ, ದೇಹ ದೇಗುಲ ಮಾಡುವ, ಶಿರ ದೇವರ ಕಳಶ ಮಾಡುವ ಪ್ರಯತ್ನವನ್ನಾದರೂ ನಾವು ಮಾಡಬೇಕು ಅನ್ನಿಸುತ್ತದೆ.

Wednesday, September 15, 2010
Two Poems
TWO POEMS
I am publishing here English and Kannada versions of two of my poems. These are not translations, but different creations on the same subject in two different languages. Kannada versions of these poems are published in Mataduva mara (2003), my collected poems written between 1964-2003.
Aunt of the River-side
After seeing an old man, a dead body, and a monk
Siddhartha left the palace, went to the forest, and became the Buddha.
There were people who thought differently.
For example, there was a twenty year old young man in our village.
He was joking and laughing till 12 o`clock in the night.
The next day morning we woke up to find out
that he had hanged himself to the branch of a nearby tree.
Another person committed suicide adding poison to whisky
on his birthday, in his birth-place, wearing his best dress,
listening to his favourite music.
If life is meaningless,
why did he try to combine everything harmoniously like this
before death?
Our aunt of the river-side too is different.
One day, all of a sudden,
she took an umbrella and went to the river in the pouring rain
shouting that she is fed up with life,
would like to kill herself, drowning in the river.
She stood there on the river-side for quite sometime,
came back, sat in the courtyard,
and began to wail that nobody tried to rescue her,
nobody cared for her.
Then she had her meal, took bath, ate santani,
spread a bed in the verandah and slept--
covering herself in a blanket.
Lear`s Curse
That couple--husband and wife--
make different designs on the plain cloth and sell.
They are creators, in a way.
There is a big iron frame in the courtyard.
A palin cloth in diferent stages of design
is spread on the frame.
The daughetr-in law and the son live inside the house.
The father-in-law, three score and ten,
lives under this frame in the courtyard.
They provide him three meals a day
and drinking water round the clock.
"Blow, winds, and crack your cheeks! rage! blow!
You cataracts and hurricanoes, sprout
Till you have drenched our steeples, drown`d the cocks!
You sulph`rous and thought-executing fires,
Vaunt-couriers of oak-cleaving thunderbolts,
Singe my white head! And thou, all-shaking thunder,
Strike flat the thick rotundity o` th` world!
Crack Nature`s moulds, all germens spill at once
That makes ingrateful man!"*
To curse like this
one needs an auditorium and a stage
and the relaxing audience
sitting comfortably in their chairs.
(*King Lear, Act III, Scene 2, lines 1-9)
ಎರಡು ಪದ್ಯಗಳು
ಈ ಕೆಳಗಿನ ಎರಡು ಪದ್ಯಗಳು ನನ್ನ ಸಮಗ್ರ ಕವನಗಳ ಸಂಗ್ರಹ ಮಾತಾಡುವ ಮರ (2003)ದಲ್ಲಿ ಪ್ರಕಟವಾಗಿವೆ. ಇವುಗಳ ಇಂಗ್ಲಿಷ್ ಆವೃತ್ತಿಗಳನ್ನು ಮೇಲೆ ಕೊಟ್ಟಿದ್ದೇನೆ. ಇವು ಅನುವಾದಗಳಲ್ಲ. ಒಂದೇ ವಸ್ತುವಿನ ಮೇಲೆ ಎರಡು ವಿಭಿನ್ನ ಭಾಷೆಗಳಲ್ಲಿ ಒಬ್ಬನೇ ಲೇಖಕ ಸೃಷ್ಟಿಸಿದ ಪ್ರತ್ಯೇಕ ಕವನಗಳು. ಓದುಗರಿಗೆ ಸಾಮ್ಯಗಳಿರುವಂತೆ ವ್ಯತ್ಯಾಸಗಳೂ ಕಾಣಬಹುದು.
ಆಚೆ ಮನೆ ಅತ್ತೆ
ಈ ಜೀವ ಮುಪ್ಪಲ್ಲಿ ಕಾಯಿಲೆಯಲ್ಲಿ ಸಾವಲ್ಲಿ ವ್ಯರ್ಥ
ಮುಗಿಯುವುದೆ ಇದ್ದರೂ ಹುಡುಕಿ ಬದುಕಿನ ಅರ್ಥ
ಕಂಡವರು ದಿವ್ಯ ಚಕ್ಷುಗಳು. ಕತ್ತಲೆಯಲ್ಲಿ
ಬರಿಯ ಕತ್ತಲೆ ಕಂಡು ಜೀವಾಗ್ನಿ ನಂದಿಸಿದವರು
ಆತ್ಮ ನಷ್ಟರೆ? ಇಪ್ಪತ್ತು ವರ್ಷದ ಹುಡುಗ. ಇರುಳಲ್ಲಿ
ಹನ್ನೆರಡು ಗಂಟೆ ವರೆಗೂ ಜೋಕು ಮಾತಾಡುತ್ತ
ಮಲಗಿದವ ಮೂರು ಗಂಟೆಗೆ ಎದ್ದು
ವಾಚಿಗೆ ಕೀ ಕೊಟ್ಟು, ಚಪ್ಪಲಿ ಪೊಟರೆಯಲ್ಲಿಟ್ಟು
ಆಗಸದ ಕುರುಡು ಬೆಳಕಲ್ಲಿ ಮರದ ಮಧ್ಯ ವರೆಗೂ ಹತ್ತಿ
ಕುಣಿಕೆ ಕೊರಳಿಗೆ ಸೆಕ್ಕಿ ಕೆಳ ಜಿಗಿದ--
ದ್ದು ಶೂನ್ಯಕ್ಕೋ ಆತ ಕಲ್ಪಿಸಿಕೊಂಡ
ಇನ್ನೊಂದು ಜಗತ್ತಿಗೋ? ಬೆಳಿಗ್ಗೆ
ನೆಲ ಮುಗಿಲು ಧಿಕ್ಕರಿಸಿ ತ್ರಿಶಂಕು ನೇಲುತ್ತಿದ್ದ.
ಇನ್ನೊಬ್ಬ ತನ್ನ ಹುಟ್ಟಿನ ದಿವಸ ಗಳಿಗೆ ಊರಲ್ಲಿ
ತನಗೆ ಪ್ರಿಯವಾದ ಬಟ್ಟೆ ತೊಟ್ಟು
ಸಂಗೀತ ಕೇಳುತ್ತ, ಸಿಗರೇಟು ಸೇದುತ್ತ
ಪ್ರಿಯವಾದ ವಿಸ್ಕಿಗೆ ಐಸು ಮತ್ತು ವಿಷ ಬೆರೆಸಿ
ಕಣ್ಣು ಮುಚ್ಚಿದ__ಎಲ್ಲವೂ ಶೂನ್ಯ ಎಂದಾದಲ್ಲಿ
ಸಾಯುವ ಗಳಿಗೆ ಹೀಗೆ ಒಂದನ್ನೊಂದು
ಬದುಕ ಧಿಕ್ಕರಿಸುವುದೆ ಪರಮ ಪುರುಷಾರ್ಥ ಎನ್ನುವ ಹಾಗೆ
ಹೊಂದಿಸುವ ಕೆಲಸ ಯಾಕೋ ಏನೋ.
ಹೊಸ ಜಗತ್ತ ಕನಸಲ್ಲಿ ಸಾವ ಕರೆದವರು ತೀರ್ಥಂಕರರು.
ದಧೀಚಿ ಕೂಡ ಹಾಗೇ: ಇಂದ್ರ ಹೊಸ ನಾಡ ಕಟ್ಟಲಿ ಎಂದು
ಮೂಳೆ ಒಪ್ಪಿಸಿಕೊಂಡ. ಇಲ್ಲ,
ಹೊರಗೆ ಹೋಗುವ ಎಲ್ಲ ಬಾಗಿಲು ಮುಚ್ಚಿ
ಬಲೆ ಸಿಕ್ಕಿ ಸತ್ತವರು--ಬ್ರೂಟಸ್ ಹಾಗೆ, ಚೇತಕನಂತೆ.
ಆಚೆ ಮನೆ ಅತ್ತೆ ಕತೆ ಮಾತ್ರ ಬೇರೆಯೇ.
ಗಂಡ ಯಾರೋ ಹೆಂಗಸಿನ ಜೊತೆ ಹೋದ ಎನಿಸಿದ್ದೆ
ಸುರಿವ ಜಡಿಮಳೆಯಲ್ಲಿ
ನಾನಿನ್ನು ಹೊಳೆ ಹಾರಿ ಸಾಯುವುದೆ ಸರಿ ಎಂದು
ಕೊಡೆ ಬಿಡಿಸಿ ಹೊಳೆ ಬದಿಗೆ
ಬೀಳದ ಹಾಗೆ ಜಾಗ್ರತೆ ನಡೆದು
ಹಾರುವುದೆ ನಾನಿನ್ನು ಖಂಡಿತಾ ಹಾರುವುದೆ
ಸಾಯುವುದೆ ನಾನಿನ್ನು ಜೀವಾಗ್ನಿ ನಂದುವುದೆ
ಎಂದು ಬೊಬ್ಬಿರಿದರೂ ಉಳಿಸೆ ಬಾರದ್ದು ಯಾರೂ ಕಂಡು
ಹಿಂದಿರುಗಿ ಮನೆ ಜಗುಲಿಗೇ ಬಂದು
ನಾನು ಯಾರಿಗೂ ಬೇಡ, ನನಗ ಯಾರೂ ಇಲ್ಲ
ಎಂದು ನೆಲ ತಟ್ಟಿ ತಟ್ಟಿ ಗೋಳಿಟ್ಟು
ಹೊಟ್ಟೆ ತುಂಬಾ ಉಂಡು, ಸಾಂತಾಣಿ ಮಿಣಿ ಮಿಣಿ ತಿಂದು
ಕಂಬಳಿ ಹೊದೆದು ಮಲಗಿ
ನಿದ್ದೆ ಹೋದಳು.
ಆತ್ಮಹತ್ಯ ಜೀವನದ ತಾತ್ವಿಕ ಪ್ರಶ್ನೆ ಎಂದಾಗ
ಅತ್ತೆ ಅಂಥವರು ಬರುವರೇ__
ಸಾವಿನ ಮುಸ್ಸಂಜೆ ನಾಡಲ್ಲಿ
ಸಾಯುತ್ತಿರುವ ನಕ್ಷತ್ರಗಳ ಈ ಕಣಿವೆಯಲ್ಲಿ
ಅನಿಮೇಷ ಬೆಳಗದೇ ಇದ್ದಲ್ಲಿ
ಸಾಯುತ್ತೇನೆ ಸಾಯುತ್ತೇನೆ ಸಾಯುವೆನೆಂದು ತೆವಳುತ್ತ
ಆಕಳಿಸಿ ನಿದ್ರಿಸುವ ಈ ಅತ್ತೆ ಅಂಥವರು?
ಲಿಯರಿನ ಶಾಪ
ಆ ಕಪ್ಲು ಬಟ್ಟೆಯ ಮೇಲೆ ಥರಥರದ ಡಿಸೈನ್ ಒತ್ತಿ ಮಾರುವರು;
ಬಟ್ಟೆ ಹರಡುವುದಕ್ಕ ವಿಸ್ತಾರ ಫ್ರೇಮು ಅಂಗಳದಲ್ಲಿ;
ಸೊಸೆ ಮಗನ ವಾಸ ಮನೆ ಒಳಗೆ: ಮಾವ,--ಮುದುಕ--
ಹೊರಗೆ ಫ್ರೇಮಿನ ಕೆಳಗೆ; ಬೆಳಿಗ್ಗೆ ಮಧ್ಯಾಹ್ನ ರಾತ್ರಿ
ಬಟ್ಟಲಿನಲ್ಲಿ ಅನ್ನ ಸಾಂಬಾರು ಹೊಯ್ಯುವರು; ಚೆಂಬಿಗೆ ನೀರು.
"ಬೀಸಿ ಬಿರುಗಾಳಿಗಳೆ, ಕೆನ್ನೆ ಹರಿವಂತೆ ಉಬ್ಬರಿಸಿ. ಸೊಕ್ಕಿ ಸೊಕ್ಕಿ
ಹೊಯ್ಯುವ ನೀರೇ, ಗೋಪುರ ಮುಕುಟ ಮುಳುಗುವ ವರೆಗೆ ಸುರಿ.
ಸ್ವಚ್ಛಂದ ವೃತ್ತಿಯಗ್ನಿಗಳೆ, ಬೃಹದ್ದಾರು ಭೇದಕರೆ, ಹೊಗಳು ಭಟ ವಂದಿಗಳೆ,
ನನ್ನ ಬಿಳಿ ತಲೆಯ ಸೀಯಿಸಿ. ಎಲ್ಲವನು ನಡುಗಿಸುವ ಸಿಡಿಲೇ,
ಜಗತ್ತೆಂಬ ಈ ಗೋಲ ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡು; ಪ್ರಕೃತಿಯ
ಚೌಕಟ್ಟುಗಳ ಸೀಳು; ಕೃತಘ್ನ ಮನುಜಕುಲ ಬೆಳೆಯಿಸುವ ಬೀಜಗಳ
ಬೇಯಿಸಿ ಕೊಲ್ಲು; ಮಾಡು ನಿರ್ಬೀಜ ನಿರ್ವಂಶ ಈ ಜಗದಖಿಲ ಕೋಟಿ ಬ್ರಹ್ಮಾಂಡ."
--ಹೀಗ ಶಪಿಸುತ್ತ ಅಲೆಯುವುದಕ್ಕೆ ಸ್ಟೇಜು, ಧ್ವನಿ ಇರಬೇಕು;
ಕೇಳುವುದಕ್ಕೆ ಕಾಲ್ಚಾಚಿ ಕೂತ ಜನವೂ ಬೇಕು.

Subscribe to:
Posts (Atom)