Monday, October 29, 2012

ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ

ಇದು ಈಗ ಪ್ರಕಟವಾಗಿರುವ ನನ್ನ ಹೊಸ ಪುಸ್ತಕ. ಇದರ ಮೊದಲ ಆವೃತ್ತಿ 1993ರಲ್ಲಿ ಪ್ರಕಟವಾಗಿತ್ತು. ಪ್ರಕಟವಾದ ಆರೇ ತಿಂಗಳಲ್ಲಿ ಪ್ರತಿಗಳು ಮುಗಿದಿದ್ದವು. ಇದು ವಿಸ್ತೃತ ಪರಿಷ್ಕೃತ ಆವೃತ್ತಿ. ಇದರಲ್ಲಿ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಮಾತ್ರವಲ್ಲದೆ ಶೇಕ್ ಸ್ಪಿಯರ್ ಕುರಿತು ನಾನು ಇದು ವರೆಗೆ ಬರೆದ ಎಲ್ಲಾ ಬರೆಹಗಳಿವೆ. ಶೇಕ್ ಸ್ಪಿಯರ್ ನಾಟಕ, ಸಾನೆಟ್, ಹಾಗೂ ಅವನ ಅಧ್ಯಯನ ಕ್ರಮಗಳ ಕುರಿತು ಲೇಖನಗಳಿವೆ; ಅಲ್ಲದೆ ಅವನ ಹತ್ತು ಸಾನೆಟ್ಟುಗಳ ಅನುವಾದಗಳಿವೆ. ಅವನ ಜೀವನ ಕುರಿತ ಟಿಪ್ಪಣಿಯಿದೆ.

ಈ ಪುಸ್ತಕ ಪ್ರಕಟವಾದಾಗ ಇದು ಅನೇಕ ಬಲ್ಲವರ ಹೊಗಳಿಕೆಗೆ ಪಾತ್ರವಾಗಿತ್ತು. ಯು. ಆರ್. ಅನಂತಮೂರ್ತಿ "ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದು ವರೆಗೆ ಪ್ರಕಟವಾಗಿಲ್ಲ,  ಮತ್ತು ಇದು ತೌಲನಿಕ ವಿಮರ್ಶೆಗೆ ಹೊಸ ಕೊಡುಗೆಯಾಗಿದೆ" ಎಂದು ಹೊಗಳಿದ್ದರು. ಇವರಲ್ಲದೆ ಹಾ. ಮಾ. ನಾಯಕ, ಜನಾರ್ದನ ಭಟ್, ಕೆ. ಸತ್ಯನಾರಾಯಣ ಮೊದಲಾದ ಬಹುಶ್ರುತರು ಇದರ ಬಗ್ಗೆ ಬರೆದಿದ್ದರು. ವೈಯಕ್ತಿಕವಾಗಿ ಮೆಚ್ಚಿದವರು, ಇದನ್ನೊಂದು ಮೋಡೆಲ್ ಥೀಸಿಸ್ ಎಂದು ಪರಿಗಣಿಸಿದವರು ಅನೇಕರು.

ಅನಂತಮೂರ್ತಿಯವರ ಬರೆವಣಿಗೆಯನ್ನು ಬ್ಲರ್ಬ್ ಆಗಿ ಹಾಕಿದ್ದೇನೆ. ಆಸಕ್ತರು ಮೇಲಿನ ಚಿತ್ರವನ್ನು ದೊಡ್ಡದು ಮಾಡಿ ಅದನ್ನು ಓದಬಹುದು.

ಪುಟಗಳು: 192. ಬೆಲೆ: ರೂ150.00.
ಪ್ರಕಾಶಕರು: ಬೋಧಿ ಟ್ರಸ್ಟ್,
ಅಂಚೆ ಕಲ್ಮಡ್ಕ 574212,
ಬೆಳ್ಳಾರೆ, ಕರ್ನಾಟಕ.
ಪ್ರತಿ ಬೇಕಾದವರು ನೇರ ನಮಗೆ ಬರೆದು ತರಿಸಿಕೊಳ್ಳಬಹುದು. ಅಥವಾ
Bodhi Trust,
Canara Bank, SB Account 1600101008058,
Yenmur 574328, Sullia Tq.
IFSC: CNRB0001600
--ಇಲ್ಲಿಗೆ ಹಣ ಜಮೆ ಮಾಡಿ ನಮಗೆ ಅಂಚೆ ವಿಳಾಸ ತಿಳಿಸಿದರೆ ಪುಸ್ತಕ ಬುಕ್ ಪೋಸ್ಟಿನಲ್ಲಿ ಕಳಿಸುತ್ತೇವೆ.
ಡಿಸ್ಕೌಂಟ್: 25%.
ಕೋರಿಯರಿನಲ್ಲಿ ಬೇಕಾದವರು ರೂ.30/-- ಜಾಸ್ತಿ ಕಳಿಸಿರಿ.

Friday, October 5, 2012

ಪುರಂದರ ದಾಸರ ದಿನೇಶ್ ಹಾಸನ್ ಅನುವಾದ


ಎಚ್. ಎಸ್. ದಿನೇಶ್ ಕುಮಾರ್ ಅಂದರೆ 1970ರ ದಶಕದ ಮೊದಲ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದವರಿಗೆ ನೆನಪಿರಬಹುದು. ಆಗ 1971ರಿಂದ 1973ರ ವರೆಗೆ ಅವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. 1966ರಿಂದ 1969ರ ವರೆಗೆ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ ಮಾಡಿ ಮುಂದೆ ಎರಡು ವರ್ಷ ಮೈಸೂರಿನಲ್ಲಿ ಎಂ. ಎ. ಮಾಡಿದರು. ಆಗ ನಾನು, ಅವರು, ದೇವರಾಜು-ಶಾಂತಿ ದಂಪತಿ, ಶಂಕರನಾರಾಯಣ ಭಟ್, ಸುಮಾ ಕುರಿಯನ್, ಸಿ. ಕೆ. ಮಣಿ ಮೊದಲಾದವರು ಕ್ಲಾಸ್ಮೇಟುಗಳು. ನ್ಯಾಷನಲ್ ಕಾಲೇಜು ಬಿಟ್ಟು ಮುಂದೆ ದಿನೇಶ್ ದೆಹಲಿಯ ಒಂದು ಕಾಲೇಜಿನಲ್ಲಿ ಒಂದು ವರ್ಷ ಅಧ್ಯಾಪಕರಾಗಿದ್ದು ಬಳಿಕ ಅಮೆರಿಕಾಕ್ಕೆ ಹೋಗಿ ಅಲ್ಲಿನ ಚಿಂಚಿನಾಟಿ ಯುನಿವರ್ಸಿಟಿಯಲ್ಲಿ ಶೇಕ್ ಸ್ಪಿಯರ್ ಮೇಲೆ ಪಿಎಚ್. ಡಿ. ಮಾಡಿ ಈಗ ಅಲ್ಲಿನ ಒಂದು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

ಈಗ ಅವರ ಬಗ್ಗೆ ಬರೆಯಲು ಮುಖ್ಯ ಕಾರಣ ಅವರು ಮಾಡಿರುವ ಪುರಂದರ ದಾಸರ ಪದ್ಯಗಳ ಅನುವಾದ. ಅಮೆರಿಕಾದ ಒಂದು ಸಣ್ಣ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದ್ದರೂ ಇವು ಹೆಚ್ಚು ವ್ಯಾಪಕವಾಗಿ ಗೊತ್ತಾಗಬೇಕಾದ ಅನುವಾದಗಳು. ರಾಮಾನುಜನ್ ಮಾಡಿದ ವಚನಗಳ ಅನುವಾದದಷ್ಟೇ ಚೆನ್ನಾಗಿರುವ ಅನುವಾದಗಳು. ಒಟ್ಟು 73 ಪದ್ಯಗಳನ್ನು ಈ ಪುಸ್ತಕದಲ್ಲಿ ದಿನೇಶ್ ಅನುವಾದಿಸಿ ಕೊಟ್ಟಿದ್ದಾರೆ. ಪುರಂದರ ದಾಸರ ಬಗ್ಗೆ ಒಂದು ಒಟ್ಟಂದದ ಚಿತ್ರ ಪಡೆಯಲು ಹೊರಗಿನವರಿಗೆ ಇದರಿಂದ ಸಾಧ್ಯವಾಗಿದೆ. ಅನುವಾದದ ಮುಖ್ಯ ಗುಣವೆಂದರೆ ಮೂಲದ ಸಾಲುಗಳ ಲಯವನ್ನು ಇಂಗ್ಲಿಷಿನಲ್ಲಿ ಹಿಡಿಯಲು ಅನುವಾದಕರಿಗೆ ಸಾಧ್ಯವಾದುದು. ಉದಾಹರಣೆಗೆ ಈ ಕೆಳಗಿನ ಅನುವಾದ ನೋಡಿ. ಇದು "ಹಾಲು ಮಾರಲು ಬಂದೆವಮ್ಮ"ದ ಅನುವಾದ:

We poor milkmaids are on our way
To sell milk in town.
O mother of that purple-skinned rascal.

You know well how long it takes
For us to get ready to go to the market.
We are up before sunrise.
We don our best saris and wear
Our precious gold bangles.
Then we dance our way to town
With milk jugs on our jasmine-adorned heads.
No easy trick, mind you.

A few minutes into the trek,
Who do we see but your naughty little boy?
He wraps an arm around our waists,
Grabs a hand;
Says he will unwrap our saris
If we don`t pay his tax.

How can we pay this stealer of kisses his tax?
Decked out in gold,
Diamonds, emeralds, sapphires, rubies,
He wants no money,
But a kiss and a girdle-loosening hug.
Make him listen to our entreaties,
O mother of that blue-skinned rascal.

You don`t want us to be beaten black and blue
By our jealous husbands.
We wish we knew how to avoid him.

"Come here, pretty girl, I want to tell you a rumor",
Says he.
Teach us how to resist the invitation.
The moment we near him,
His hands explore our hills and valleys.
Teach us how to break away from him.
Tell him to leave us alone.

No one will buy milk at noon.
And there is none left unspoiled
After we pay the tax demanded
By that blue-skinned little thief.
Please tell that little rascal,
Purandaravitthala, to leave us alone.

We poor milkmaids are on our way
To sell milk in town.

*****