Wednesday, September 22, 2010

My Legs are Pillars

 We are on the eve of a very important  judgment about the supposed birthplace of Shri Rama in Ayodhya.The dispute is what should stand in the controvertial place--should it be a temple or a mosque. In this context, I want to bring to your notice a Kannada poem by Basava, 11th century AD saint-poet. In A. K. Ramanujan`s famous translation, the poem is as follows:

The rich
will make temples for Siva.
What shall I,
a poor man,
do?

My legs are pillars,
the body the shrine,
the head a cupola
of gold.

Listen, O lord of the meeting rivers,
things standing shall fall,
but the moving ever shall stay.

                 (Speaking of Siva, Penguin Classics, 1973, p.88)

 A mosque or  a temple is built by a rich person. Whatever it is, you see beggars sitting in front of it; there is a watchman to safeguard our chappals. And, inside, there are priests with their chantings and incense and flowers and all that. If the body is the temple, then every one is equal to the other. There are no caste or class diffrences. And it is also easy to find out whether it is God or the devil that dwells in such a temple. One can easily make out whether the insider is god or devil just by listening to a few sentences a person speaks or a few gestures he makes. If it is a mosque or a temple or such dwelling places of the gods, it is not easy to make out who is inside--god or devil. The glittering lights, the incense, the chantings, the folklore about the palce  mask what is really inside.

I don`t have to elaborate the relevence of this 1000-year old poem on the eve of the judgment about the Babri Masjid/Shri Rama Temple issue. I, with anxiety, hope we at least make attempts to make our legs the pillars, our heads the cupola, and our bodies the shrines.



 ನಾವು ಒಂದು ಬಹು ಮುಖ್ಯ ದಿನದ ಮುನ್ನಾದಿನದಲ್ಲಿದ್ದೇವೆ. ಅಯೋಧ್ಯೆಯ ಆ ಜಾಗ ರಾಮ ಹುಟ್ಟಿದ ಜಾಗವೇ ಅಲ್ಲವೇ, ಅಲ್ಲಿ ರಾಮನ ದೇವಸ್ಥಾನ ಇರಬೇಕೇ ಅಥವಾ ಮಸೀದಿ ಇರಬೇಕೇ ಎಂಬುದು ವಿವಾದದ ಮುಖ್ಯ ಕೇಂದ್ರ. ತೀರ್ಪು  ಮಸೀದಿ ಇರಬೇಕೆನ್ನಲಿ ದೇವಸ್ಥಾನ ಇರಬೇಕೆನ್ನಲಿ__ಅಂತೂ  ಆ ಸ್ಥಾವರ ಇರಬೇಕೇ ಈ ಸ್ಥಾವರ ಇರಬೇಕೇ ಎಂಬ ಮಾತಿನ ಸುತ್ತವೇ ನಿರ್ಧಾರ ಸುತ್ತುತ್ತದೆ. ಈ ಸಂದರ್ಭದಲ್ಲಿ ನನಗೆ ಬಸವಣ್ಣನವರ ಉಳ್ಳವರು ಶಿವಾಲಯವ ಮಾಡುವರು ಎಂದು ಪ್ರಾರಂಭವಾಗುವ ಈ ವಚನ ನೆನಪಾಗುತ್ತದೆ. ವಚನ ಹೀಗಿದೆ:

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ__ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶ__
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೂಡಲ ಸಂಗಮದೇವ.

ಈ ವಚನವನ್ನು ನೆನೆಸಿಕಂಡಾಗ ನನಗೆ ಅನ್ನಿಸುವುದು ಇಷ್ಟು:

ಹಣವಿರುವವರು ದೇವಸ್ಥಾನವನ್ನೋ ಮಸೀದಿಯನ್ನೋ ಕಟ್ಟಿಸುತ್ತಾರೆ. ಅದೊಂದು ಸ್ಥಾವರ. ಅದರ ಎದುರು ಭಿಕ್ಷುಕರು ಕೂತಿರುತ್ತಾರೆ. ಚಪ್ಪಲಿ ನೋಡಿಕೊಳ್ಳುವವ  ಇರುತ್ತಾನೆ. ಅಂದರೆ ಚಪ್ಪಲಿಯನ್ನೂ ಕದಿಯುವಂಥಾ ಕಳ್ಳರು, ಕಳ್ಳತನದಿಂದಲೇ ಚಪ್ಪಲಿಯ ಅಗತ್ಯವನ್ನು ಪೂರೈಸಬೇಕಾದಷ್ಟು ಬಡವರು ಇರುತ್ತಾರೆ ಎಂದಾಯಿತು. ಜೊತೆಗೆ ದೇವರ ಮತ್ತು  ಭಕ್ತರ ಮಧ್ಯೆ ವ್ಯವಹರಿಸುವುದಕ್ಕೆ ಪೂಜಾರಿಗಳು, ಪೂಜೆಗಳು, ಅವರ ನಿಯಮ ಕಟ್ಟಳೆಗಳು ಇರುತ್ತವೆ. ಆದರೆ, ದೇಹವೇ ದೇಗುಲವಾದರೆ, ಅಲ್ಲಿ ಭಿಕ್ಷುಕರೂ ಇಲ್ಲ, ಚಪ್ಪಲಿ ನೋಡಿಕೊಳ್ಳುವವನೂ ಬೇಕಾಗಿಲ್ಲ. ಪ್ರತಿಯೊಬ್ಬ ಇನ್ನೊಬ್ಬನಿಗೆ ಸಮಾನ. ಮತ್ತು, ಇಂಥಾ ದೇಗುಲದೊಳಗೆ  ಇರುವವ ದೇವರೋ ಪಿಶಾಚಿಯೋ ಎಂಬುದೂ ಆಯಾ ವ್ಯಕ್ತಿಯ ಜೊತೆ ಎರಡು ವಾಕ್ಯ ಮಾತಾಡುವುದರ ಒಳಗೆ ಗೊತ್ತಾಗಿಬಿಡುತ್ತದೆ. ಸ್ಥಾವರವಾದ ದೇವಸ್ಥಾನದ  ಒಳಗೆ ಇರುವುದು ಪಿಶಾಚಿಯೋ ದೇವರೋ ಎನ್ನುವುದು ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ, ವಿಧ ಬಗೆಯ ಅಲಂಕಾರಗಳಲ್ಲಿ, ಉದ್ಘೋಷಗಳಲ್ಲಿ ಮರೆಯಾಗಿಬಿಡುತ್ತದೆ.

ಕೋರ್ಟಿನ ತೀರ್ಪಿಗೆ ಕಾದಿರುವ ಈ ಆತಂಕದ ದಿನಗಳಲ್ಲಿ ಒಂದು ಸಾವಿರ ವರ್ಷ ಹಿಂದಿನ ಮೇಲಿನ ಕಾವ್ಯದ ರೆಲೆವೆನ್ಸ್ ಬಗ್ಗೆ ಮತ್ತೆ ವಿವರಿಸಬೇಕಾದ್ದಿಲ್ಲ. ಏನಾಗುತ್ತದೋ ಎಂಬ ಆತಂಕದ ಈ ಸಂಜೆ, ಕಾಲು ಕಂಬ ಮಾಡುವ, ದೇಹ ದೇಗುಲ ಮಾಡುವ, ಶಿರ ದೇವರ ಕಳಶ ಮಾಡುವ ಪ್ರಯತ್ನವನ್ನಾದರೂ ನಾವು ಮಾಡಬೇಕು ಅನ್ನಿಸುತ್ತದೆ.

No comments:

Post a Comment