Saturday, June 2, 2012

THEATRE UNIVERSITY

ಸ್ನೇಹಿತರೊಬ್ಬರು ರಂಗಾಯಣದ ಕೆಲವರನ್ನು ಬೇರೆ ಕಡೆಗೆ ವರ್ಗ ಮಾಡಿರುವುದರ ಬಗ್ಗೆ ಲೇಖನ ಬರೆದು ನಮ್ಮ ಗಮನ ಸೆಳೆದಿದ್ದಾರೆ.

ಅದರ ಬಗ್ಗೆ ಪ್ರತಿಭಟನೆ ಸಲ್ಲಿಸಬಹುದು; ಸದ್ಯಕ್ಕೆ ಅದನ್ನು ಬದಲಾಯಿಸುವಂತೆ ಒತ್ತಡ ಹೇರಲೂ ಸಾಧ್ಯವಾಗಬಹುದು. ಆದರೆ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದ್ದರೆ ಅದನ್ನೊಂದು ಥಿಯೇಟರ್ ಯುನಿವರ್ಸಿಟಿಯಾಗಿ ಬೆಳೆಸುವುದು ಹೊರತು ಬೇರೆ ಮಾರ್ಗವಿಲ್ಲ. ಥಿಯೇಟರಿಗೆ ಸಂಬಂಧಪಟ್ಟ ಎಲ್ಲಾ ಸರಕಾರಿ ಸಂಸ್ಥೆಗಳು ಒಟ್ಟುಗೂಡಿ ಅದರ ಜೊತೆ ಸೇರಿ ಕೆಲಸ ಮಾಡುವಂತೆ ಅದನ್ನು ಥಿಯೇಟರ್ ವಿಶ್ವವಿದ್ಯಾನಿಲಯವಾಗಿ ರೂಪಿಸಿ ಬೆಳೆಸಬೇಕು.

ಯುನಿವರ್ಸಿಟಿ ಆದ ಕೂಡಲೇ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದಲ್ಲ. ಬೇರೆ ಯುನಿವರ್ಸಿಟಿಗಳಲ್ಲಿರುವ ಸಮಸ್ಯೆಗಳು ನನಗೆ ಗೊತ್ತಿವೆ. ಆದರೆ ಯುನಿವರ್ಸಿಟಿ ಆದೊಡನೆ ನಾವು ಸಮಸ್ಯೆಗಳ ಪರಿಹಾರಕ್ಕಾಗಿ ಥಿಯೇಟರಿಗೆ ಸಂಬಂಧಪಟ್ಟವರೊಡನೆ ವ್ಯವಹರಿಸಬಹುದು. ಕೊನೆಯ ಪಕ್ಷ ಥಿಯೇಟರ್ ಎಂದರೆ ಏನೆಂದು ಗೊತ್ತಿರುವವರೊಡನೆ ಮಾತಾಡಬಹುದು. ಒಂದು ಸಮಾನ ವೇದಿಕೆ ಸಿಗುತ್ತದೆ.

ರಂಗಾಯಣವನ್ನು ಥಿಯೇಟರ್ ಯುನಿವರ್ಸಿಟಿಯಾಗಿ ಮಾಡಿ ಎಂದು ನಾವೀಗ ಒತ್ತಾಯಿಸಬೇಕಿದೆ.

1 comment:

  1. ಖಂಡಿತ.... ಆದರೆ ನೀವು ಹೇಳುವ ರೀತಿಯಲ್ಲಿ ರಂಗಾಯಣವನ್ನು ಥಿಯೇಟರ್ ಯುನಿವರ್ಸಿಟಿ ಮಾಡಿದರೆ ಸಮಸ್ಯೆಯ ಸ್ವರೂಪ ಬದಲಾಗುತ್ತದೆ ವಿನ: ಪರಿಹಾರವಾದಂತಾಗುವುದಿಲ್ಲ. ಯಾಕೆಂದರೆ ಈಗ ಇರುವ ವಿಶ್ವವಿದ್ಯಾನಿಲಯಗಳ ಕಾರ್ಯ ಕ್ಷಮತೆ, ದಕ್ಷತೆ ಹಾಗೂ ವ್ಯಾಪ್ತಿ ಎಲ್ಲರಿಗೂ ಗೊತ್ತೇ ಇದೆ. ಎಷ್ಟೋ ವಿಶ್ವವಿದ್ಯಾನಿಲಯಗಳು ಇಂದು ಅಧ್ಯಯನ ಕೇಂದ್ರವಾಗಿರದೆ ಕೊಡು ಕೊಳ್ಳುವ ವ್ಯಾಪಾರಿ ಕೇಂದ್ರವಾಗಿದೆ. ಅದರ ಚುಕ್ಕಾಣಿ, ಗದ್ದುಗೆ ಯಾರು ಹಿಡಿಯಬೇಕು ಎನ್ನುವಲ್ಲಿಯೇ ಲಾಭಿ ನಡೆಯುವುದು ಬಹಿರಂಗವಾಗಿ ಗೋಚರಿಸುತ್ತಿದೆ. ಅದಲ್ಲದೆ ವಿಷಯ ವಿಶ್ವವಿದ್ಯಾಲಯಕ್ಕೆ ಸಿಗುವ ಬೆಲೆ ಎಷ್ಟು ಹಾಗೂ ರಂಗಭೂಮಿಯಂತಹ ಸಂಕೀರ್ಣ ಮತ್ತು ಚಲನಶೀಲ ವಿಷಯದ ವ್ಯಾಪ್ತಿಗೆ ಕೇವಲ ಅಧ್ಯಯನ ಸಾಕೇ ಹಾಗೂ ಇತರ ವಿಶ್ವವಿದ್ಯಾನಿಲಯಗಳ ರೀತಿನೀತಿಯಲ್ಲೇ ಇದು ಕೆಲಸಮಾಡಬಲ್ಲದೆ? ಹಾಗಾದಲ್ಲಿ ಅದು ರಂಗಭೂಮಿಯ ತಳವನ್ನೇ ಅಲ್ಲಾಡಿಸುವ ಸಾಧ್ಯತೆ ಇದೆಯಲ್ಲವೇ? ಬೇರೆ ಮಾರ್ಗಗಳು ಏನಿವೆ?

    ReplyDelete