ನಾನು ಹ್ಯಾಮ್ಲೆಟ್ ಅನುವಾದಿಸಿದ್ದು 1978ರಲ್ಲಿ. ಅದರ ನಂತರದ ಈ ಮೂವತ್ತಮೂರು ವರ್ಷಗಳಲ್ಲಿ ಅದನ್ನು ಬೇರೆ ಬೇರೆಯವರು ಆಡಿದ್ದಾರೆ; ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಆದರೆ ಅದರ ಬಗ್ಗೆ ನಿರಂತರವಾಗಿ ಅಭಿಮಾನ ಇಟ್ಟುಕೊಂಡು ಆಡುತ್ತಾ ಬಂದವರು ರಂಗ ನಿರ್ದೇಶಕ, ಚಿತ್ರಕಾರ, ಲೇಖಕ ಇಕ್ಬಾಲ್ ಅಹ್ಮದ್. ಇತ್ತೀಚೆಗೆ ಕಿನ್ನರ ಮೇಳಕ್ಕಾಗಿ ಅವರು ಅದನ್ನು ಮತ್ತೆ ಆಡಿಸಿದ್ದಾರೆ. ನಮ್ಮ ಜಾನಪದ ಹಾಗೂ ಪಾಶ್ಚಾತ್ಯ ಆಂಗಿಕಗಳನ್ನು ಮೇಳೈಸಿ ಮಾಡಿದ ಈ ಪ್ರಯೋಗ ನನಗಂತೂ ಖುಷಿ ಕೊಟ್ಟಿತು. ಈ ಸಂದರ್ಭದಲ್ಲಿ ಹ್ಯಾಮ್ಲೆಟ್ ಬಗ್ಗೆ ಆರು ವರ್ಷಗಳ ಹಿಂದೆ ಇಕ್ಬಾಲ್ ಬರೆದ ಲೇಖನವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇನೆ. ಈ ಪ್ರತಿಭಾವಂತ ಸ್ನೇಹಿತ ಎಷ್ಟು ಒಳ್ಳೆಯ ಲೇಖಕ ಎಂಬುದನ್ನು ತೋರಿಸುವುದು ಒಂದು ಉದ್ದೇಶ; ಇವರ ಈ ಮೆಚ್ಚುವಿಕೆಯಿಂದ ನನಗಾದ ಸಂತೋಷ ಹಂಚಿಕೊಳ್ಳುವುದು ಇನ್ನೊಂದು ಉದ್ದೇಶ.
ಇದು ಅವರ ಲೇಖನ:
ಇದು ಅವರ ಲೇಖನ:
No comments:
Post a Comment