ಇದು ಸಾರ್ವಜನಿಕರಿಗೆ ಲಭ್ಯವಿರುವ ರಾಮಚಂದ್ರರ ಏಕಮಾತ್ರ ಫೊಟೊ. 1950ರ ಹೊತ್ತಿಗೆ--ಆ ಮೇಲೂ ಕೂಡಾ--ಅಪರೂಪಕ್ಕೆ ಫೊಟೋ ತೆಗೆಸುತ್ತಿದ್ದುದರಿಂದ ಇದು ಸಹಜವೇ. ವೇಷಭೂಷಣ ಸಾಂಪ್ರದಾಯಿಕವಾದದ್ದು. ಹಣೆಯಲ್ಲಿರುವುದು ಸಾದು ಬೊಟ್ಟು. ಹೀಗೆ ಹಾಕುವ ಕ್ರಮ ಇತ್ತು. ನನಗೂ ಹಾಕುತ್ತಿದ್ದರು. ಆದರೆ ನಾನು ಹತ್ತು ಹನ್ನೆರಡು ವರ್ಷವಾಗಿದ್ದಾಗ ಅದನ್ನು ಹಾಕಿಸಿಕೊಳ್ಳುವುದು ನಿಲ್ಲಿಸಿದ್ದೆ. ಯರ್ಮುಂಜರು ಹದಿನೆಂಟು ಇಪ್ಪತ್ತು ವರ್ಷವಾದಾಗಲೂ ಹಾಕಿಕೊಳ್ಳುತ್ತಿದ್ದರೆಂದು ಈ ಫೊಟೋವೇ ಹೇಳುತ್ತದೆ. ಯೋಚನೆಯಲ್ಲಿ ಇದ್ದಷ್ಟು ನಾವೀನ್ಯತೆ ಬಹುಶಃ ಅವರ ಬಾಹ್ಯ ವೇಷಭೂಷಣಗಳಲ್ಲಿ ಇರಲಿಲ್ಲ.
No comments:
Post a Comment