Monday, September 12, 2011

ಕೆ. ನ. ಶಿವತೀರ್ಥನ್ ನಿಧನ

ನನ್ನ ಪ್ರಿಯ ಮಿತ್ರ, ಕನ್ನಡದ ಖ್ಯಾತ ಕವಿ ಶಿವತೀರ್ಥನ್ ಇವತ್ತು ಬೆಳಿಗ್ಗೆ  (ಸೆಪ್ಟೆಂಬರ್ 12) ಮೈಸೂರಿನಲ್ಲಿ ನಿಧನವಾಗಿದ್ದಾನೆ. 1943ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಅವನಿಗೆ ಅರುವತ್ತೆಂಟು ವರ್ಷವಾಗಿತ್ತು. ಡಿಸೆಂಬರ್ 2007ರಿಂದ ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದ; ಮಾತೂ ಇರಲಿಲ್ಲ. ಮೈಸೂರಿನ ಪ್ರಖ್ಯಾತ ವೈದ್ಯರಾದ ಅವನ ಪತ್ನಿ ಡಾ. ಬಿ. ನಿರ್ಮಲಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಲ್ಲೇ ನಿಧನನಾದ.

ಅವನು ಕನ್ನಡದ ಒಳ್ಳೆಯ ಕವಿ. "ಗೆಂಡಗಯ್ಯ" ಕನ್ನಡದ ಒಳ್ಳೆಯ ಕವನಗಳಲ್ಲಿ ಒಂದು. ಅವನು ಇನ್ನು ಉಳಿಯುವುದು ಈ ಕವನದ ಮೂಲಕ. ಅದರ ಪಠನವೇ ಅವನಿಗೆ ಸಲ್ಲಿಸುವ ಶ್ರದ್ಧಾಂಜಲಿ. ಅದನ್ನೂ ಶಿವಪ್ರಕಾಶ್ ಮಾಡಿರುವ ಅದರ ಇಂಗ್ಲಿಷ್ ಅನುವಾದವನ್ನೂ  ಇಲ್ಲಿ ಕೊಡುತ್ತಿದ್ದೇನೆ. ಓದಿ, ಕಾವ್ಯಪ್ರಿಯರಿಗೆ ತಲುಪಿಸಿ.


No comments:

Post a Comment