ಇದು ಸದ್ಯದಲ್ಲ್ಲೇ ಪ್ರಕಟವಾಗಲಿರುವ ನನ್ನ ಹೊಸ ಪುಸ್ತಕ. 2006ನೇ ಇಸವಿಯಲ್ಲಿ ಇದು ಈ ಮೊದಲು ಪ್ರಕಟವಾಗಿದ್ದರೂ ಪ್ರತಿಗಳು ಮುಗಿದು ಪುಸ್ತಕ ಲಭ್ಯವಿರಲಿಲ್ಲ. ಈ ಆವೃತ್ತಿಗಾಗಿ ಕೊಳಲು ಮತ್ತು ಶಂಖವನ್ನು ಆಮೂಲಾಗ್ರ ತಿದ್ದಿ ಬರೆದಿದ್ದೇನೆ. ಇದು ಕೃಷ್ಣಾವಸಾನ ಕುರಿತ ನಾಟಕ. ಇದರಲ್ಲಿರುವ ರಥಮುಸಲ 1982ರಲ್ಲಿ, ಕುದುರೆ ಬಂತು ಕುದುರೆ 1983ರಲ್ಲಿ ಮೊದಲು ಪ್ರಕಟ ಮತ್ತು ಪ್ರಯೋಗ ಆಗಿದ್ದವು.
ಸಮಗ್ರ ನಾಟಕಗಳ ಸಂಪುಟ 2, 3, ಮತ್ತು 4ರ ಪ್ರತಿಗಳು ಇವೆ. ಬೇಕಾದವರು ಬೋಧಿ ಟ್ರಸ್ಟ್ ನಿಂದ ಪಡೆಯಬಹುದು. ಇದರ ಪ್ರಕಾಶಕರು ಸಹಾ ಬೋಧಿ ಟ್ರಸ್ಟ್. ನಾಲ್ಕೂ ಸಂಪುಟಗಳ ಒಟ್ಟು ಬೆಲೆ ರೂ330. 00. ನಮ್ಮ ಎಲ್ಲಾ ಪುಸ್ತಕಗಳ ಮೇಲೆ ಶೇಕಡಾ 25 ರಿಯಾಯಿತಿ ಇದೆ. ಅಂಚೆ ವೆಚ್ಚ ಉಚಿತ.
ಪುಸ್ತಕದ ಮುಖಪುಟದ ಫೊಟೋ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ನ ಉದ್ಯೋಗಿಗಳ ನಾಟಕ ತಂಡ ಸ್ನೇಹರಂಗ ಬೆಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಕೆಳಗೆ ಆಡಿದ ಕುದುರೆ ಬಂತು ಕುದುರೆ ನಾಟಕದ ಒಂದು ದೃಶ್ಯ ತೋರಿಸುತ್ತದೆ. ನಾಟಕದ ನಿರ್ದೇಶಕರು ಎನ್. ಮಂಗಲಾ. ಫೊಟೋ ತೆಗೆದವರು ಟಿ. ಆರ್. ಚಂದ್ರಶೇಖರ ಶೆಟ್ಟಿ. ಮುಖಪುಟ ವಿನ್ಯಾಸ ಜಾನ್ ಚಂದ್ರನ್ ಅವರದ್ದು.
ನನಗೆ ಈ ನಾಟಕದ ಪ್ರಯೋಗ ತುಂಬಾ ಇಷ್ಟವಾಗಿತ್ತು. ಬರೆದದ್ದು ಸಾರ್ಥಕವಾಯಿತು ಅನ್ನಿಸಿತು. ಸ್ನೇಹರಂಗದ ನಟರು ಸಹಾ ಪ್ರಭಾವಶಾಲಿಯಾಗಿ ಆಡಿದರು. ಮಂಗಲಾರ ನಿರ್ದೇಶನ ಸೃಜನಶೀಲವಾಗಿತ್ತು. ಇಷ್ಟರ ಮಟ್ಟಿಗೆ ಒಬ್ಬ ಸೃಜನಶೀಲ ನಿರ್ದೇಶಕಿಯ ಪ್ರತಿಭೆಯನ್ನು ವ್ಯಕ್ತಿಪಡಿಸಲು ನನ್ನ ನಾಟಕ ಕಾರಣವಾಗುತ್ತದೆ ಎಂದಾದರೆ, ಇಂಥಾ ನಾಟಕಗಳನ್ನು ಇನ್ನೂ ಬರೆಯಬೇಕು ಅನ್ನಿಸಿತು.

No comments:
Post a Comment