Monday, May 16, 2011

ಕನ್ನಡ ವಿಶ್ವವಿದ್ಯಾನಿಲಯದ ಒಂದು ಪಿಎಚ್. ಡಿ.: ಕೆಲವು ದಾಖಲೆಗಳು

ಕಳೆದ ಸಲದ ನನ್ನ ಬ್ಲಾಗಿನಲ್ಲಿ ಹಂಪಿ ವಿದ್ಯಾರಣ್ಯದ ಕನ್ನಡ ವಿಶ್ವವಿದ್ಯಾನಿಲಯ ಅವರದ್ದೇ ನಿಯಮಗಳನ್ನು ಬದಿಗೊತ್ತಿ ಒಂದು ಕಳಪೆ ಥೀಸಿಸ್ಸಿಗೆ ಪಿಎಚ್. ಡಿ. ಕೊಡಮಾಡಿದ್ದರ ಕುರಿತು ಬರೆದಿದ್ದೆ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.
ಮೇಲಿನದ್ದು ಮೊದಲ ಮೌಲ್ಯಮಾಪನ ವರದಿ.
ಮೇಲಿನವು ಪರಿಷ್ಕರಿಸಿದ ಥೀಸಿಸ್ಸನ್ನು ಮತ್ತೆ ಒಪ್ಪಿಸಲು ಪಡೆದ ಕಾಲಾವಧಿ ವಿಸ್ತರಣೆಯ ಪತ್ರಗಳು.

ಇದು ಎರಡನೆಯ ಮೌಲ್ಯಮಾಪನ ವರದಿ.
ಇದು ಆ ಅಭ್ಯರ್ಥಿಗೆ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಕೊಡಮಾಡಿರುವ ಪತ್ರ.
ಮೌಖಿಕ ಪರೀಕ್ಷೆಯ ವರದಿ. ಈ ಮೌಖಿಕ ಪರೀಕ್ಷಾ ಮಂಡಳಿಯಲ್ಲಿ ಥೀಸಿಸ್ಸಿನ ಪರೀಕ್ಷಕರಾಗಲೀ ಗೈಡ್ ಆಗಲೀ ಇಲ್ಲ. ಇದರಲ್ಲಿ "ಮೌಲ್ಯ ಮಾಡಿರುವ ಎಲ್ಲಾ ಮೂವರು ಮೌಲ್ಯಮಾಪಕರು ಈ ನಿಬಂಧಕ್ಕೆ ಪಿಎಚ್. ಡಿ. ಪದವಿ ನೀಡಬಹುದೆಂದು ಶಿಫಾರಸ್ಸು ಮಾಡಿದ್ದಾರೆ" ಎಂಬ ಸುಳ್ಳು ಮಾಹಿತಿ ಇದೆ.
ಮೇಲಿನದ್ದು ಅಕ್ರಮವಾಗಿ ಕೊಡಮಾಡಿರುವ ಈ ಪಿಎಚ್. ಡಿ. ವಿರುದ್ಧ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಧ ಗವರ್ನರ್ ಅವರಿಗೆ ಶ್ರೀ ಎಚ್. ಎಂ. ಸೋಮಶೇಖರ್ ಮಾಡಿದ ಅಪ್ಪೀಲು.
ಮೇಲಿನದ್ದು ತಾ.3.8.2009ರಂದು ಕನ್ನಡ ವಿಶ್ವವಿದ್ಯಾನಿಲಯದ ಆಗಿನ ಸಾಹಿತ್ಯಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಗೌಡ ಅವರು ಕುಲಸಚಿವರಿಗೆ ಬರೆದ ಪತ್ರ. ಇದರಲ್ಲಿ ನಿಯಮ ಮೀರಿ ಕೊಟ್ಟ ಈ ಪಿಎಚ್. ಡಿ.ಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಬರೆದಿದ್ದಾರೆ.

ಮೇಲಿನದ್ದು ಕನ್ನಡ ವಿಶ್ವವಿದ್ಯಾನಿಲಯದ ಪಿಎಚ್. ಡಿ. ನಿಬಂಧನೆಗಳು.

No comments:

Post a Comment