Tuesday, December 25, 2012

Lady Minus Macbeth

Lady Minus Macbeth ನನ್ನ ಮ್ಯಾಕ್ಬೆತ್  ಅನುವಾದದ ಒಂದು ಹೊಸ ರಂಗಪ್ರಯೋಗ. ಇದರ ನಿರ್ದೇಶಕರು ಚಿದಂಬರ ರಾವ್ ಜಂಬೆ. ಆಡಿದವರು ಬೆಂಗಳೂರಿನ ಕ್ರಿಯೇಟಿವ್ ಕಲಾವಿದರು. ಸೋಲೋ ನಟನೆಯಾದ ಇದರ ನಟಿ ಲಕ್ಷ್ಮಿ ಚಂದ್ರಶೇಖರ್. ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಶೇಕ್ ಸ್ಪಿಯರ್ ಫೆಸ್ಟಿವಲ್ ನಲ್ಲಿ ಇದನ್ನು ಮೊದಲು ಆಡಿದ್ದರು. ನನಗೆ ಆಗ ನೋಡಲಾಗಲಿಲ್ಲ. ಮೊನ್ನೆ ಡಿಸೆಂಬರ್ 13ರಂದು ರಿಪೀಟ್ ಶೋ ಇತ್ತು. ಹೀಗಾಗಿ ನೋಡುವುದು ಸಾಧ್ಯವಾಯಿತು.

ಇದನ್ನು ನೋಡುವ ವರೆಗೆ ಹೀಗೆ ಮ್ಯಾಕ್ಬೆತ್ ನಂಥಾ ಇಡೀ ದೇಶದ ಪರಿಸ್ಥಿತಿಯನ್ನು ತೋರಿಸುವ ನಾಟಕವನ್ನು ಒಂದೇ ವ್ಯಕ್ತಿಯ ಮೇಲೆ ಕೇಂದ್ರೀಕರಿಸಿ ಆಡಲು ಸಾಧ್ಯ ಎನ್ನುವ ಕಲ್ಪನೆಯೇ ಇರಲಿಲ್ಲ. ಹಾಗೆ ಆಡಿದ್ದರಿಂದ ಲೇಡಿ ಮ್ಯಾಕ್ಬೆತ್ ಳ ಒಂಟಿತನದ ಮೇಲೆ ಗಮನ ಕೇಂದ್ರೀಕರಿಸಿ ತೋರಿಸುವುದು ಲಕ್ಷ್ಮಿ ಅವರಿಗೆ ಸಾಧ್ಯವಾಗಿದೆ. ನಾಟಕವನ್ನು ತಮ್ಮ ಉದ್ದೇಶಕ್ಕೆ ಹೊಂದುವಂತೆ ಎಷ್ಟು ಚೆನ್ನಾಗಿ ಎಡಿಟ್ ಮಾಡಿಕೊಂಡಿದ್ದಾರೆಂದರೆ, ನನಗೆ ಮ್ಯಾಕ್ಬೆತ್ ನಾಟಕವನ್ನು ಹೊಸತೇ ಆಗಿ ನೋಡುತ್ತಿರುವಂತೆ ಅನ್ನಿಸಿತು. ಜೊತೆಗಿದ್ದ ಗೆಳೆಯರು ಹೇಳಿದಂತೆ, ಇದು ಯಾವುದೇ ಅಂತರರಾಷ್ಟೀಯ ಗುಣಮಟ್ಟದ ನಾಟಕಕ್ಕೆ ಕಮ್ಮಿ ಇರಲಿಲ್ಲ. ಅತ್ಯುತ್ತಮ ನಟಿಯರಾದ ಲಕ್ಷ್ಮಿ, ಅಷ್ಟೇ ಪ್ರತಿಭಾವಂತರಾದ ಚಿದಂಬರ ಜಂಬೆ-- ಇಬ್ಬರ ಗಣನೀಯ ಸಾಧನೆ ಇದು. ಇದನ್ನು ಮ್ಯಾಕ್ಬೆತ್  ನಾಟಕದ ಫೆಮಿನಿಸ್ಟ್ ಪ್ರಯೋಗ ಎಂದೂ ಕರೆಯಬಹುದು.

ಮತ್ತೆ ಪ್ರಯೋಗ ಆದರೆ ನನಗೇ ಇದನ್ನು ಇನ್ನೊಮ್ಮೆ ನೋಡಬೇಕು ಅನ್ನಿಸಿತು. 

1 comment:

  1. ▷ Play your favourite casino site! ▷ Casino Site Review 2021
    Lucky Club offers the most luckyclub popular and popular slot games in the world. It's a perfect choice for both new players and new players alike!

    ReplyDelete