Wednesday, September 15, 2010

Two Poems

TWO POEMS


 I am publishing here English and Kannada versions of  two of my poems. These are not translations, but different  creations on the same subject in two different languages. Kannada versions of these poems are published in Mataduva mara (2003),  my collected poems written between 1964-2003.


Aunt of the River-side 


After seeing an old man, a dead body, and a monk
Siddhartha left the palace, went to the forest, and became the Buddha.
There were people who thought differently.
For example, there was a twenty year old young man in our village.
He was joking and laughing till 12 o`clock in the night.
The next day morning  we woke up to find out 
that he had hanged himself to the branch of a nearby tree.
Another person committed suicide adding poison to whisky
on his birthday, in his birth-place, wearing his best dress,
listening to his favourite music.
If life is meaningless,
why did he try to combine everything harmoniously like this 
before death?

Our aunt of the river-side too is different. 
One day, all of a sudden,
she took an umbrella and went to the river in the pouring rain 
shouting that she is fed up with life,
would like to kill herself, drowning in the river.
She stood there on the river-side for quite sometime,
came back, sat in the courtyard, 
and began to wail that nobody tried to rescue her,
nobody cared for her.
Then she had her meal, took bath, ate santani,
spread a bed in the verandah and slept--
covering herself in a blanket. 



Lear`s Curse


That couple--husband and wife--
make different designs on  the plain cloth and sell.
They are creators, in a way. 
There is a big iron frame in the courtyard.
A palin cloth in diferent stages of design
is spread on the frame.
The daughetr-in law and the son live inside the house.
The father-in-law, three score and ten,
lives under this frame in the courtyard.
They provide him three meals a day
and drinking water round the clock.

"Blow, winds, and crack your cheeks! rage! blow!
You cataracts and hurricanoes, sprout
Till you have drenched our steeples, drown`d the cocks!
You sulph`rous and thought-executing fires,
Vaunt-couriers of oak-cleaving thunderbolts,
Singe my white head! And thou, all-shaking  thunder,
Strike flat the thick rotundity o` th` world!
Crack Nature`s moulds, all germens spill at once 
That makes ingrateful man!"*

To curse like this
one needs an auditorium and a stage
and the relaxing audience
sitting comfortably in their chairs.


(*King Lear, Act III, Scene 2, lines 1-9)






ಎರಡು ಪದ್ಯಗಳು


ಈ ಕೆಳಗಿನ ಎರಡು ಪದ್ಯಗಳು ನನ್ನ ಸಮಗ್ರ ಕವನಗಳ ಸಂಗ್ರಹ ಮಾತಾಡುವ ಮರ (2003)ದಲ್ಲಿ ಪ್ರಕಟವಾಗಿವೆ. ಇವುಗಳ ಇಂಗ್ಲಿಷ್ ಆವೃತ್ತಿಗಳನ್ನು ಮೇಲೆ ಕೊಟ್ಟಿದ್ದೇನೆ. ಇವು ಅನುವಾದಗಳಲ್ಲ. ಒಂದೇ ವಸ್ತುವಿನ ಮೇಲೆ ಎರಡು ವಿಭಿನ್ನ ಭಾಷೆಗಳಲ್ಲಿ ಒಬ್ಬನೇ ಲೇಖಕ ಸೃಷ್ಟಿಸಿದ ಪ್ರತ್ಯೇಕ  ಕವನಗಳು. ಓದುಗರಿಗೆ ಸಾಮ್ಯಗಳಿರುವಂತೆ ವ್ಯತ್ಯಾಸಗಳೂ ಕಾಣಬಹುದು.


ಆಚೆ ಮನೆ ಅತ್ತೆ

ಈ ಜೀವ ಮುಪ್ಪಲ್ಲಿ ಕಾಯಿಲೆಯಲ್ಲಿ ಸಾವಲ್ಲಿ ವ್ಯರ್ಥ
ಮುಗಿಯುವುದೆ ಇದ್ದರೂ ಹುಡುಕಿ ಬದುಕಿನ ಅರ್ಥ
ಕಂಡವರು ದಿವ್ಯ ಚಕ್ಷುಗಳು. ಕತ್ತಲೆಯಲ್ಲಿ
ಬರಿಯ ಕತ್ತಲೆ ಕಂಡು ಜೀವಾಗ್ನಿ ನಂದಿಸಿದವರು
ಆತ್ಮ ನಷ್ಟರೆ? ಇಪ್ಪತ್ತು ವರ್ಷದ ಹುಡುಗ. ಇರುಳಲ್ಲಿ
ಹನ್ನೆರಡು ಗಂಟೆ ವರೆಗೂ ಜೋಕು ಮಾತಾಡುತ್ತ
ಮಲಗಿದವ  ಮೂರು ಗಂಟೆಗೆ ಎದ್ದು
ವಾಚಿಗೆ ಕೀ ಕೊಟ್ಟು, ಚಪ್ಪಲಿ ಪೊಟರೆಯಲ್ಲಿಟ್ಟು
ಆಗಸದ ಕುರುಡು ಬೆಳಕಲ್ಲಿ ಮರದ ಮಧ್ಯ ವರೆಗೂ ಹತ್ತಿ
ಕುಣಿಕೆ ಕೊರಳಿಗೆ ಸೆಕ್ಕಿ ಕೆಳ ಜಿಗಿದ--

ದ್ದು  ಶೂನ್ಯಕ್ಕೋ ಆತ ಕಲ್ಪಿಸಿಕೊಂಡ
ಇನ್ನೊಂದು ಜಗತ್ತಿಗೋ? ಬೆಳಿಗ್ಗೆ
ನೆಲ ಮುಗಿಲು ಧಿಕ್ಕರಿಸಿ ತ್ರಿಶಂಕು ನೇಲುತ್ತಿದ್ದ.
ಇನ್ನೊಬ್ಬ ತನ್ನ ಹುಟ್ಟಿನ ದಿವಸ ಗಳಿಗೆ ಊರಲ್ಲಿ
ತನಗೆ ಪ್ರಿಯವಾದ ಬಟ್ಟೆ ತೊಟ್ಟು
ಸಂಗೀತ ಕೇಳುತ್ತ, ಸಿಗರೇಟು ಸೇದುತ್ತ
ಪ್ರಿಯವಾದ ವಿಸ್ಕಿಗೆ ಐಸು ಮತ್ತು ವಿಷ ಬೆರೆಸಿ
ಕಣ್ಣು ಮುಚ್ಚಿದ__ಎಲ್ಲವೂ ಶೂನ್ಯ ಎಂದಾದಲ್ಲಿ
ಸಾಯುವ ಗಳಿಗೆ ಹೀಗೆ ಒಂದನ್ನೊಂದು
ಬದುಕ ಧಿಕ್ಕರಿಸುವುದೆ ಪರಮ ಪುರುಷಾರ್ಥ ಎನ್ನುವ ಹಾಗೆ
ಹೊಂದಿಸುವ ಕೆಲಸ ಯಾಕೋ ಏನೋ.

ಹೊಸ ಜಗತ್ತ ಕನಸಲ್ಲಿ ಸಾವ ಕರೆದವರು ತೀರ್ಥಂಕರರು.
ದಧೀಚಿ ಕೂಡ ಹಾಗೇ: ಇಂದ್ರ ಹೊಸ ನಾಡ ಕಟ್ಟಲಿ ಎಂದು
ಮೂಳೆ ಒಪ್ಪಿಸಿಕೊಂಡ. ಇಲ್ಲ,
ಹೊರಗೆ ಹೋಗುವ ಎಲ್ಲ ಬಾಗಿಲು ಮುಚ್ಚಿ
ಬಲೆ ಸಿಕ್ಕಿ ಸತ್ತವರು--ಬ್ರೂಟಸ್ ಹಾಗೆ, ಚೇತಕನಂತೆ.
ಆಚೆ ಮನೆ ಅತ್ತೆ ಕತೆ ಮಾತ್ರ ಬೇರೆಯೇ.
ಗಂಡ ಯಾರೋ ಹೆಂಗಸಿನ ಜೊತೆ ಹೋದ ಎನಿಸಿದ್ದೆ
ಸುರಿವ ಜಡಿಮಳೆಯಲ್ಲಿ
ನಾನಿನ್ನು ಹೊಳೆ ಹಾರಿ  ಸಾಯುವುದೆ ಸರಿ ಎಂದು
ಕೊಡೆ ಬಿಡಿಸಿ ಹೊಳೆ ಬದಿಗೆ
ಬೀಳದ ಹಾಗೆ ಜಾಗ್ರತೆ ನಡೆದು

ಹಾರುವುದೆ ನಾನಿನ್ನು ಖಂಡಿತಾ ಹಾರುವುದೆ
ಸಾಯುವುದೆ ನಾನಿನ್ನು ಜೀವಾಗ್ನಿ ನಂದುವುದೆ

ಎಂದು ಬೊಬ್ಬಿರಿದರೂ ಉಳಿಸೆ ಬಾರದ್ದು ಯಾರೂ ಕಂಡು
ಹಿಂದಿರುಗಿ ಮನೆ ಜಗುಲಿಗೇ ಬಂದು
ನಾನು ಯಾರಿಗೂ ಬೇಡ, ನನಗ ಯಾರೂ ಇಲ್ಲ
ಎಂದು ನೆಲ ತಟ್ಟಿ ತಟ್ಟಿ ಗೋಳಿಟ್ಟು
ಹೊಟ್ಟೆ ತುಂಬಾ ಉಂಡು, ಸಾಂತಾಣಿ ಮಿಣಿ ಮಿಣಿ ತಿಂದು
ಕಂಬಳಿ ಹೊದೆದು ಮಲಗಿ
ನಿದ್ದೆ ಹೋದಳು.

ಆತ್ಮಹತ್ಯ ಜೀವನದ ತಾತ್ವಿಕ ಪ್ರಶ್ನೆ ಎಂದಾಗ
ಅತ್ತೆ ಅಂಥವರು ಬರುವರೇ__
ಸಾವಿನ ಮುಸ್ಸಂಜೆ ನಾಡಲ್ಲಿ
ಸಾಯುತ್ತಿರುವ ನಕ್ಷತ್ರಗಳ ಈ ಕಣಿವೆಯಲ್ಲಿ
ಅನಿಮೇಷ ಬೆಳಗದೇ ಇದ್ದಲ್ಲಿ
ಸಾಯುತ್ತೇನೆ ಸಾಯುತ್ತೇನೆ ಸಾಯುವೆನೆಂದು ತೆವಳುತ್ತ
ಆಕಳಿಸಿ ನಿದ್ರಿಸುವ ಈ ಅತ್ತೆ ಅಂಥವರು?




ಲಿಯರಿನ ಶಾಪ

ಆ  ಕಪ್ಲು ಬಟ್ಟೆಯ ಮೇಲೆ ಥರಥರದ ಡಿಸೈನ್ ಒತ್ತಿ ಮಾರುವರು;
ಬಟ್ಟೆ ಹರಡುವುದಕ್ಕ ವಿಸ್ತಾರ ಫ್ರೇಮು ಅಂಗಳದಲ್ಲಿ;
ಸೊಸೆ ಮಗನ ವಾಸ ಮನೆ ಒಳಗೆ: ಮಾವ,--ಮುದುಕ--
ಹೊರಗೆ ಫ್ರೇಮಿನ ಕೆಳಗೆ; ಬೆಳಿಗ್ಗೆ ಮಧ್ಯಾಹ್ನ ರಾತ್ರಿ
ಬಟ್ಟಲಿನಲ್ಲಿ ಅನ್ನ ಸಾಂಬಾರು ಹೊಯ್ಯುವರು; ಚೆಂಬಿಗೆ ನೀರು.

"ಬೀಸಿ ಬಿರುಗಾಳಿಗಳೆ, ಕೆನ್ನೆ ಹರಿವಂತೆ ಉಬ್ಬರಿಸಿ. ಸೊಕ್ಕಿ ಸೊಕ್ಕಿ
ಹೊಯ್ಯುವ ನೀರೇ, ಗೋಪುರ ಮುಕುಟ ಮುಳುಗುವ ವರೆಗೆ ಸುರಿ.
ಸ್ವಚ್ಛಂದ ವೃತ್ತಿಯಗ್ನಿಗಳೆ, ಬೃಹದ್ದಾರು ಭೇದಕರೆ, ಹೊಗಳು ಭಟ ವಂದಿಗಳೆ,
ನನ್ನ ಬಿಳಿ ತಲೆಯ ಸೀಯಿಸಿ. ಎಲ್ಲವನು ನಡುಗಿಸುವ ಸಿಡಿಲೇ,
ಜಗತ್ತೆಂಬ  ಈ ಗೋಲ ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡು; ಪ್ರಕೃತಿಯ
ಚೌಕಟ್ಟುಗಳ ಸೀಳು; ಕೃತಘ್ನ ಮನುಜಕುಲ ಬೆಳೆಯಿಸುವ ಬೀಜಗಳ
ಬೇಯಿಸಿ ಕೊಲ್ಲು; ಮಾಡು ನಿರ್ಬೀಜ ನಿರ್ವಂಶ ಈ ಜಗದಖಿಲ ಕೋಟಿ ಬ್ರಹ್ಮಾಂಡ."

--ಹೀಗ ಶಪಿಸುತ್ತ ಅಲೆಯುವುದಕ್ಕೆ ಸ್ಟೇಜು, ಧ್ವನಿ ಇರಬೇಕು;
ಕೇಳುವುದಕ್ಕೆ ಕಾಲ್ಚಾಚಿ ಕೂತ ಜನವೂ ಬೇಕು.

2 comments:

  1. muraleedhara upadhya- aunt of the riverside - kannada mattu english eraDU nanage istavaaduvu.font size next big use maadi pls

    ReplyDelete
  2. Thanks a lot. I am so happy that you liked the English version also.

    ReplyDelete