ಅಮೆರಿಕದ ವೈದ್ಯ ಜಗತ್ತಿನಲ್ಲಿ ವಿಟಮಿನ್ ಸಿ ಇಂದ ಹೃದ್ರೋಗ ಗುಣಪಡಿಸಬಹುದು ಎಂಬ ಒಂದು ಥಿಯರಿಯಿದೆ. ಈ ಥಿಯರಿ ಮಂಡಿಸಿದವನು ಎರಡು ಸಲ ನೋಬೆಲ್ ಪ್ರಶಸ್ತಿ ಪಡೆದ ಅಮೆರಿಕದ ವಿಜ್ಞಾನಿ ಲೈನಸ್ ಪಾಲಿಂಗ್ (Linus Pauling). ವಿಟಮಿನ್ ಸಿಯ ಕೊರತೆಯೇ ಹೃದ್ರೋಗಕ್ಕೆ ಕಾರಣ; ಅದನ್ನು ತಮ್ಮ ದೇಹದಲ್ಲಿ ಉತ್ಪಾದಿಸಿಕೊಳ್ಳುವ ಪ್ರಾಣಿಗಳಿಗೆ ಹೃದ್ರೋಗ ಇಲ್ಲ; ಮನುಷ್ಯನ ದೇಹದಲ್ಲಿ ಅದು ಉತ್ಪಾದಿತ ಆಗುವುದಿಲ್ಲವಾದ್ದರಿಂದ ಅವನು ಅದನ್ನು ಆಹಾರ ಅಥವಾ ಮಾತ್ರೆಗಳ ಮೂಲಕ ಸೇವಿಸಬೇಕು; ಹೃದ್ರೋಗ ಈಗಾಗಲೇ ಬಂದಿದ್ದರೂ ವಿಟಮಿನ್ ಸಿ ಸೇವನೆಯಿಂದ ದೇಹವನ್ನು ಮರಳಿ ಸುಸ್ಥಿತಿಗೆ ತರಬಹುದು ಎಂಬ ವಾದವನ್ನು ಅನೇಕ ವರ್ಷಗಳ ಹಿಂದೆ ಅವನು ಮಂಡಿಸಿದ. ಆದರೆ ಅಮೆರಿಕಾದ ಮೆಡಿಕಲ್ ಅಸೋಸೊಯೇಷನ್ ಅದನ್ನು ಪರೀಕ್ಷಿಸಲೇ ತಯಾರಿರಲಿಲ್ಲ. ಅವನ ಲೇಖನವೂ ಅವರ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ; ತಿರಸ್ಕೃತವಾಯಿತು. ಅವನ ಬೆಂಬಲಿಗರು ಇದೆಲ್ಲಾ ಡ್ರಗ್ ಮಾಫಿಯಾದ ಒಳಸಂಚು ಎಂದರು. ಆದರೆ ವಿಟಮಿನ್ ಸಿ ಇಂದ ಹೃದ್ರೋಗ ಗುಣಪಡಿಸಬಹುದು ಎಂಬ ವೈದ್ಯರು ಅಮೆರಿಕಾದಲ್ಲಿ ಕೆಲವರಾದರೂ ಇದ್ದಾರೆ. ಒಬ್ಬಾತ ಸೊಂಟ ನೋವು ಗುಣಪಡಿಸುವುದಕ್ಕಿಂತಲೂ ಬೇಗ ಮತ್ತು ಸುಲಭವಾಗಿ ಹೃದ್ರೋಗ ಗುಣಪಡಿಸಬಹುದು ಎನ್ನುತ್ತಾನೆ. ಪಾರಂಪರಿಕ ವೈದ್ಯಪದ್ಧತಿಯಿಂದ ಅದಕ್ಕೆ ವಿರೋಧ ಬಂದದ್ದೂ ಸಹಜವೇ. ವಿಟಮಿನ್ ಸಿ ಇಂದ ಈ ಮಾರಕ ಬಹು ಖರ್ಚಿನ ರೋಗ ಗುಣ ಆಗುತ್ತದೆ ಎಂದಾದರೆ ನಮ್ಮ ಬಹುಕೋಟಿ ಉದ್ಯಮವಾದ ಹೃದ್ರೋಗ ಚಿಕಿತ್ಸಾಲಯಗಳು ಬಾಗಿಲು ಹಾಕಬೇಕಾಗುತ್ತದೆ. ಬೈಪಾಸ್ ಸರ್ಜರಿ ಏಂಜಿಯೋಪ್ಲಾಸ್ಟಿಗಳು ಅನಗತ್ಯವಾಗುತ್ತವೆ.
ಆದರೆ ವಿಟಮಿನ್ ಸಿಯಿಂದ ಹೃದ್ರೋಗ ತಹಬಂದಿಗೆ ಬರುತ್ತದೆ ಎನ್ನವುದನ್ನು ನಾನೇ ಅನುಭವಿಸಿದೆ. ನನಗೆ ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಹೃದ್ರೋಗವಿದೆ. ಆಪರೇಷನ್, ಏಂಜಿಯೋಪ್ಲಾಸ್ಟಿ ಇತ್ಯಾದಿ ಆಗಿವೆ. ಆದರೂ ಪೂರಾ ಗುಣ ಎಂದಿಲ್ಲ. ಎದೆನೋವು ಬರುತ್ತಿರುತ್ತದೆ --ನಡೆಯುವಾಗ, ಭಾಷಣ ಮಾಡುವಾಗ. ಇನ್ನೊಬ್ಬರಿಗೆ ಗೊತ್ತಾಗದಂತೆ ನಾನು ಅದನ್ನು ಸಾರ್ಬಿಟ್ರಾಟ್ ತಿಂದು ಅಥವಾ ಆಗ ಮಾತು/ನಡಿಗೆ ನಿಲ್ಲಿಸಿ ಹೇಗೋ ಮ್ಯಾನೇಜು ಮಾಡಿಕೊಂಡು ಹೋಗುತ್ತಿದ್ದೆ. ಯಾವಾಗಲೋ ಒಂದು ದಿನ ಇದ್ದಕ್ಕಿದ್ದಂತೆ massive heart attack ಆಗಿ ಕುಸಿದು ಬಿದ್ದು ಸತ್ತು ಹೋಗುತ್ತೇನೆ ಎನ್ನುವುದೂ ನನಗೆ ಗೊತ್ತಿದ್ದದ್ದೇ. ಆದರೆ ಅಷ್ಟರ ವರೆಗೆ ದಿನನಿತ್ಯದ ಜೀವನಕ್ಕೆ ತೊಂದರೆಯಾಗದಂತೆ ನಡೆದುಕೊಂಡು ಹೋಗುತ್ತಿದೆಯಾದ್ದರಿಂದ ಸಾವಿನ ಬಗ್ಗೆ ಅನವಶ್ಯಕ ತಲೆಕೆಡಿಸಿಕೊಳ್ಳುವುದು ವೃಥಾ ಸಮಯ ಹಾಳು ಎಂದುಕೊಳ್ಳುತ್ತಿದ್ದೆ. ಆದರೆ ಈ ಜನವರಿ 7ನೇ ಸಾಯಂಕಾಲ ವಾಕು ಹೊರಟವನಿಗೆ ಹತ್ತು ಹೆಜ್ಜ ನಡೆಯುವುದರೊಳಗೆ ಇನ್ನು ಮುಂದೆ ನಡೆಯುವುದಕ್ಕೇ ಸಾಧ್ಯವಿಲ್ಲ ಎಂಬ ನೋವು ಕಾಣಿಸಿತು. ತುಂಬಾ ಹೊತ್ತು ನಿಂತು ದೀರ್ಘ ಉಸಿರೆಳೆದು ಬಿಟ್ಟು ಇತ್ಯಾದಿ ಮಾಡಿದ ಮೇಲೆ ನೋವು ಹೋಯಿತೆಂದು ಮತ್ತೆ ನಡೆದರೆ ನಾಲ್ಕು ಹೆಜ್ಜೆ ಹೋಗುವುದರೊಳಗೆ ಪುನಃ ನೋವು ಕಾಣಿಸಿತು. ವಾಕನ್ನು ಅವತ್ತು ಅಲ್ಲಿಗೇ ನಿಲ್ಲಿಸಿ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಂಡೆ. ಮಾರನೇ ದಿನ ಸುಳ್ಯಕ್ಕೆ ಬ್ಯಾಂಕಿಗೆ ಹೋಗಲೆಂದು ಸ್ನಾನ ಮಾಡುವಾಗ ಮತ್ತೆ ನೋವು ಪ್ರಾರಂಭವಾದದ್ದು ತುಂಬಾ ಹೊತ್ತು ಇತ್ತು. ಮತ್ತೆ ಇಡೀ ದಿನ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು. ಕೆಲವು ದಿನದ ಬಳಿಕ ಏನೇಕಲ್ಲಿನಲ್ಲಿ ಒಂದು ಸಮಾರಂಭಕ್ಕ ಹೋದವನಿಗೆ ಸಮಾರಂಭದ ಮಧ್ಯೆ ನೋವು ಕಾಣಿಸಿ ಇಲ್ಲೇ ಇದ್ದ ಮಿತ್ರ ಪ್ರಭಾಕರ ಶಿಶಿಲರಿಗೆ ತಿಳಿಸಿ ಅವರು ಊರಿನ ಬೇರೊಬ್ಬರಿಗೆ ತಿಳಿಸಿ ಹತ್ತಿರದ ಸುಬ್ರಹ್ಮಣ್ಯದ ಒಬ್ಬರು ಡಾಕ್ಟರ ಹತ್ತಿರ ಕರೆದುಕೊಂಡರು. ಅವರು ನೈಟ್ರೋಫಿಕ್ಸ್ 20 ಎಂಬ ಮಾತ್ರೆ ಕೊಟ್ಟರು. ಸ್ವಲ್ಪ ಹೊತ್ತಾದ ಮೇಲೆ ನೋವು ನಿಂತಿತು. ಅವರು ಈ ಮಾತ್ರೆ ದಿನಕ್ಕೆ ಎರಡು ಬೆಳಿಗ್ಗೆ ರಾತ್ರಿ ತಿನ್ನಲು ಮತ್ತು ಬೆಂಗಳೂರಿನ ನನ್ನ ಡಾಕ್ಟರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದರು. ಏನೇ ಇದ್ದರೂ ಏಂಜಿಯೋಗ್ರಾಂ ಮಾಡುವುದು ಅನಿವಾರ್ಯ ಎಂದರು. ಇದೂ invasive surgeryಯೇ.
ಅವರು ಕೊಟ್ಟ ನೈಟ್ರೋಫಿಕ್ಸ್ 20 ಸಾರ್ಬಿಟ್ರಾಟ್ ತರದ್ದೇ ಮಾತ್ರೆ. ಆದರೆ ಹೆಚ್ಚು ಹೊತ್ತು ಪರಿಣಾಮ ಇರುತ್ತದೆ. ತಿಂದಾಗ ನೋವು ಹೋದರೂ ರಾತ್ರಿ ಇದ್ದಕ್ಕಿದ್ದಂತೆ ನೋವು ಪ್ರಾರಂಭವಾಗಿ ಎಚ್ಚರವಾಗುತ್ತಿತ್ತು. ಮತ್ತೆ ಈ ಮಾತ್ರೆ ತಿಂದ ಮೇಲೇ ನೋವು ಶಮನಿಸುತ್ತಿತ್ತು. ಮೊದಲು ನಡೆಯುವಾಗ ಅಥವಾ ಬೇರೆ ರೀತಿಯಲ್ಲಿ ದಣಿವಾದಾಗ ಬರುತ್ತಿದ್ದ ನೋವು ಈಗ ಮಲಗಿದಾಗಲೇ ನಿದ್ದೆಯಲ್ಲಿದ್ದಾಗಲೇ ಬರುತ್ತಿತ್ತು. ನನ್ನ ಪ್ರಿಯ ಮಿತ್ರರೂ ಹಿತೈಷಿಯೂ ಆದ ಶಿವಮೊಗ್ಗದ ಪ್ರಖ್ಯಾತ ವೈದ್ಯ ಯು. ಆರ್. ಅನಿಲ ಕುಮಾರ್ ಗೆ ಈ ವಿಷಯ ತಿಳಿಸಿ ಸಲಹೆ ಕೇಳಿದೆ. ಅವರಿಗೆ ನನಗೆ ಹಿಂದೆ ಆಪರೇಷನ್ ಆದದ್ದು ಇತ್ಯಾದಿ ಗೊತ್ತಿದೆ. ಆವರು ಮತ್ತೆ ಆರ್ಟರಿಗಳು ಬ್ಲಾಕ್ ಆಗಿವೆಯೆಂದೂ ನಾನು ಆದಷ್ಟು ಬೇಗ ಬೆಂಗಳೂರಿಗೆ ಹೋಗಿ ವೋಕ್ಹಾರ್ಟಿನ ಡಾ. ವಿವೇಕ ಜವಳಿಯವರನ್ನು ಭೇಟಿ ಮಾಡಿ ಕನ್ಸಲ್ಟ್ ಮಾಡಬೇಕೆಂದೂ ತಿಳಿಸಿದರು.
ನನಗೆ ಮತ್ತೆ ಈ ಆಸ್ಪತ್ರೆ ವಾಸ, ಆಪರೇಷನ್ ಇತ್ಯಾದಿ ಬೇಡ ಅನ್ನಿಸಿತು. ಅದರ ಪರಿಣಾಮ ನಾಕೈದು ವರ್ಷ ಮಾತ್ರ. ಅದೊಂದು ತಾತ್ಕಾಲಿಕ ಪರಿಹಾರ. ಅದರ ಬದಲಾಗಿ ಪರ್ಯಾಯ ವೈದ್ಯ ಪದ್ಧತಿಯಲ್ಲಿ ಏನಿದೆ ಎಂದು ಹುಡುಕಿದೆ. Dr. Dean Ornish`s Program for Reversing Heart Disease ಎಂಬ ಡಾ. ಡೀನ್ ಆರ್ನಿಶ್ ನ ಪುಸ್ತಕ ನನ್ನ ಹತ್ತಿರ ಅನೇಕ ವರ್ಷಗಳಿಂದ ಇದೆ. ಅದರಲ್ಲಿ ಅವನು ಆಪರೇಷನ್ ಇಲ್ಲದೆ ಔಷಧಿ ಇಲ್ಲದೆ ಹೃದ್ರೋಗ ಹೇಗೆ ಗುಣಪಡಿಸಬಹುದು ಎಂಬುದಕ್ಕೆ ಅನೇಕ ಟಿಪ್ಸ್ ಕೊಡುತ್ತಾನೆ. ಅದು ಗೊತ್ತಿದ್ದರೂ ನಾನು ಅದನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಕಾಫಿ ಕುಡಿಯುವುದನ್ನು ಬಿಡುವುದಾಗಲೀ ಕರಿದ ತಿಂಡಿಯ ಮೋಹ ತೊರೆಯುವುದಾಗಲೀ ನನಗೆ ಆಗಿರಲಿಲ್ಲ. ಇನ್ನು ಇವನ್ನು ನಿಷ್ಠೆಯಿಂದ ಪಾಲಿಸಿ ನೋಡುವುದು ಎಂದು ನಿರ್ಧರಿಸಿದೆ. ಆದರೆ ಅದೆಲ್ಲಾ ಸಮಯ ಹಿಡಿಯುವ ವಿಧಾನ. ಅಷ್ಟರ ವರೆಗೆ ಈ ನೈಟ್ರೋಫಿಕ್ಸ್ ಅನ್ನೇ ಅವಲಂಬಿಸಿಬೇಕು.
ಮಾರನೇ ದಿನ ಈ ಡಾ. ಆರ್ನಿಶ್ ವಿಟಮಿನ್ನುಗಳ ಬಗ್ಗೆ ಏನು ಹೇಳುತ್ತಾನೆ ನೋಡಬೇಕು ಅನ್ನಿಸಿತು. ಅವನು ಅದರ ಬಗ್ಗೆ ವಿಶೇಷ ಏನೂ ಹೇಳುವುದಿಲ್ಲ. ಹಾಗಾದರೆ ಇಂಟರ್ನೆಟ್ಟಲ್ಲಿ ಏನಿದೆ ಎಂದು ಹುಡುಕಿದಾಗ ನನಗೆ ಲೈನಸ್ ಪಾಲಿಂಗ್ ನ ಕೆಲಸದ ಪರಿಚಯ ಆದದ್ದು. ಅಮೆರಿಕಾದಲ್ಲಿ Vitamin C Foundation ಎಂಬ ಒಂದು ಪ್ರತಿಷ್ಠಾನ ಕೂಡಾ ಇದೆ. ಅದರಲ್ಲಿ ವಿಟಮಿನ್ ಸಿಯಿಂಧಾಗಿ ಗುಣಮುಖರಾದವರ ಕೆಲವು ವಿವರಗಳಿವೆ. ಮರಣಾಂತಿಕ ಸ್ಥಿತಿಯಲ್ಲಿದ್ದು ಗುಣಮುಖನಾದ ಒಬ್ಬನ ಕುರಿತ ವಿಡಿಯೋ ಕೂಡಾ ಇದೆ.
ನಾನು ವಿಟಮಿನ್ ಸಿ ತಿನ್ನಲು ಪ್ರಾರಂಭಿಸಿದ್ದು ಫೆಬ್ರುವರಿ 4ರಂದು--ಎಂಟು ದಿನಗಳ ಹಿಂದೆ. ಡಾ. ಪಾಲಿಂಗ್ ದಿನಕ್ಕೆ ಕನಿಷ್ಠ ಆರು ಗ್ರಾಂ ವಿಟಮಿನ್ ಸಿ ತಿನ್ನಬೇಕು ಮತ್ತು ಲೈಸಿನ್ ಅಥವಾ ಅಮಿನೋ ಏಸಿಡ್ ತಿನ್ನಬೇಕು ಅನ್ನುತ್ತಾನೆ. ಅಮಿನೋ ಆಸಿಡ್ ಇರುವ ಮಲ್ಟಿವಿಟಮಿನ್ ತಿನ್ನಲು ಪ್ರಾರಂಬಿಸಿದೆ. ಆದರೆ ವಿಟಮಿನ್ ಸಿ ದಿನಕ್ಕೆ ಮೂರು ಗ್ರಾಂನಂತೆ ತಿನ್ನುತ್ತಿದ್ದೆ. ಎಂಟನೇ ತಾರೀಕಿನಿಂದ ಅವನು ಹೇಳಿದಂತೆ 6 ಗ್ರಾಂ-- ಸರ್ತಿಗೆ 1 ಗ್ರಾಂನಂತೆ ದಿನಕ್ಕೆ ಆರು ಸಲ-- ತಿನ್ನಲು ಪ್ರಾರಂಬಿಸಿದೆ. ಮೊನ್ನೆ 10ನೇ ತಾರೀಕಿನ ಹೊತ್ತಿಗೆ ನೋವು ಸಾಕಷ್ಟು ಕಮ್ಮಿಯಾಯಿತು. ನಿನ್ನೆ 11ನೇ ತಾರೀಕು ನನ್ನ ತೋಟದ ಡೀಸೆಲ್ ಪಂಪನ್ನು ಎರಡು ಸಲ ಸ್ಟಾರ್ಟ್ ಮಾಡಿದೆ. ಡಿಸೆಲ್ ಪಂಪನ್ನು ಹ್ಯಾಂಡ್ಲ್ ಹಾಕಿ ತಿರುಗಿಸಿ ಸ್ಟಾರ್ಟ್ ಮಾಡಬೇಕು. ಸುಮಾರು 20 ನಿಮಿಷಗಳ ಕಾಲ ನೋವಿಲ್ಲದೆ ಕೆಲಸ ಮಾಡುವುದು ಸಾಧ್ಯವಾಯಿತು. ಆ ಬಳಿಕ ನೋವು ಸುರುವಾಯಿತು. ವಿಶ್ರಾಂತಿ ಪಡೆದಾಗ ಮೊದಲಿಗಿಂತ ಎಷ್ಟೋ ಬೇಗ ನಿಂತಿತು.
ವಿಟಮಿನ್ ಸಿಗೆ ಸಂಬಂಧಿಸಿದ ಲೇಖನದಲ್ಲಿ ಹೀಗೆ ಬೇಗ ಗುಣ ಕಾಣುತ್ತದೆ ಎಂದು ಬರೆದಿದ್ದಾರೆ. ಆದರೆ ಪೂರ್ತಿ ಗುಣವಾಗಲು ಒಂದರಿಂದ ಆರು ತಿಂಗಳು ಬೇಕಾಗುತ್ತದೆ ಎಂದಿದೆ. ನನ್ನ ಹಾಗೆ ನೋವಿನಿಂದ ಯಾತನೆ ಪಡುವವರು ಇದ್ದರೆ ವಿಟಮಿನ್ ಸಿಯಿಂದ ಪ್ರಯೋಜನ ಪಡೆಯಲು ಬಯಸಿದರೆ ಹಾಗೆ ಮಾಡಲಿ ಎಂಬ ದೃಷ್ಟಿಯಿಂದ ಇದನ್ನಿಲ್ಲಿ ಈಗಲೇ ಬರೆದಿದ್ದೇನೆ. ವಿಟಮಿನ್ ಸಿ ಮತ್ತು ಎಮಿನೋ ಏಸಿಡ್ ಇರುವ ಮಲ್ಟಿವಿಟಮಿನ್ನುಗಳು ಎಲ್ಲಾ ಔಷಧಿ ಅಂಗಡಿಗಳಲ್ಲಿ ಸಿಗುತ್ತವೆ. 500 mg ಒಂದು ವಿಟಮಿನ್ ಸಿ ಮಾತ್ರೆಯ ಬೆಲೆ ಒಂದು ರೂಪಾಯಿ.
ಉಳಿದವರಿಗೂ ವಿಟಮಿನ್ ಸಿಯಿಂದ ನನಗೆ ಆಗುತ್ತಿರುವ ಪ್ರಯೋಜನ ಆದಲ್ಲಿ ಹೃದ್ರೋಗವನ್ನು ಮನುಕುಲದಿಂದಲೇ ಅಟ್ಟಿಬಿಡಬಹುದು.