Tuesday, March 26, 2013

ಎಸ್.ಎಲ್. ಭೈರಪ್ಪ

ನನ್ನ ಹೊಸ ಪುಸ್ತಕ ಆರಣ್ಯಕರ ಸುತ್ತಮುತ್ತದಲ್ಲಿ ಭೈರಪ್ಪನವರ ಮೇಲೆ ಒಂದು ಲೇಖನವಿದೆ. ಇದು "ಒಂದು ತಲೆಮಾರಿನ ಕೆಲವರು ಲೇಖಕರು" ಎಂಬ 62 ಪುಟಗಳ ಒಂದು ಲೇಖನದ ಭಾಗ. ಇದರ ಸ್ಥೂಲ ರೂಪ ನಾನು 2011ರಲ್ಲಿ ವಿಜಯವಾಣಿಯಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಪ್ರಕಟವಾಗಿತ್ತು. ಪುಸ್ತಕದಲ್ಲಿ ಲೇಖನವಾಗಿ ಬರುವಾಗ ಹೆಚ್ಚು ವಿವರ ಉದಾಹರಣೆಗಳು ಸೇರಿವೆ. ಅದರ ಕೊನೆಯ ಪ್ಯಾರಾ ಕೆಳಗೆ ಕೊಟ್ಟಿದ್ದೇನೆ. ನನ್ನ ಈ ನಿಲುವು ಇಂದು ಚಾಲ್ತಿಯಲ್ಲಿರುವ ಅನೇಕರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾದದ್ದು. ಇದು ಚರ್ಚೆಯಾಗಲಿ, ಭೈರಪ್ಪನವರ ಕಾದಂಬರಿಗಳು ವಿಮರ್ಶಾಕ್ಷೇತ್ರದಲ್ಲಿ ಅವುಗಳ ಸರಿಯಾದ ಸ್ಥಾನದಲ್ಲಿ ಗುರುತಿಸಲ್ಪಡಲಿ ಎಂಬ ದೃಷ್ಟಿ ಹೀಗೆ ನನ್ನ ನಿಲುವಿನ ಸಾರಾಂಶವಾದ ಕೊನೆಯ ಪ್ಯಾರಾ ಕೊಡುವುದರ ಹಿಂದೆ ಇದೆ.

 ನಾನು ಚರ್ಚೆಯಾಗಲಿ ಎಂದು ಬಯಸುವ ಲೇಖನದ ಕೊನೆಯ ಆ ಪ್ಯಾರಾ ಹೀಗಿದೆ:

"ಅನಂತಮೂರ್ತಿ ಜೊತೆಗೆ ಭೈರಪ್ಪನವರನ್ನು ಹೋಲಿಸುವಂತೆ ಅನಂತಮೂರ್ತಿಯವರೇ ಒತ್ತಾಯಿಸುತ್ತಾರೆ. ಯಾಕೆಂದರೆ ಅವರನ್ನು ಜನಪ್ರಿಯ ಕಾದಂಬರಿಕಾರ, ಗಂಭೀರ ಪರಿಶೀಲನೆಗೆ ಅರ್ಹ ಅಲ್ಲ ಎಂಬ ರೀತಿಯಲ್ಲಿ ಬರೆದವರು ಅನಂತಮೂರ್ತಿಯವರೇ. ಆದರೆ ಪರ್ವ ಮತ್ತು ಆನಂತರದ ಕಾದಂಬರಿಗಳಲ್ಲಿ-- ಆವರಣ ಹೊರತುಪಡಿಸಿ-- ಚಿತ್ರಿತವಾಗುವ ಅನುಭವ ವಿಸ್ತಾರ, ಪಾತ್ರ ಚಿತ್ರಣ, ವ್ಯಾಪ್ತಿಗಳು ಅವರನ್ನು ಒಬ್ಬ ಶ್ರೇಷ್ಠ ಕಾದಂಬರಿಕಾರರನ್ನಾಗಿ ಮಾಡಿವೆ. ಅನಂತಮೂರ್ತಿಯವರು ತಮ್ಮ ವಿಮರ್ಶೆ, ಸಾಮಾಜಿಕ ಚಟುವಟಿಕೆ ಮೊದಲಾದವುಗಳಿಂದ ಮುಖ್ಯ ಸಾಹಿತ್ಯಿಕ ಪುರುಷ ನಿಜ; ಆದರೆ ಕಾದಂಬರಿಕಾರರಾಗಿ ಪರ್ವದ ನಂತರದ ಭೈರಪ್ಪನವರೇ ಅವರಿಗಿಂಥ ಶ್ರೇಷ್ಠ. ಭೈರಪ್ಪನವರ ದೃಷ್ಟಿಕೋನ ನನ್ನ ದೃಷ್ಟಿಕೋನ ಅಲ್ಲ ಎಂಬುದು ಅವರ ಉತ್ತಮಿಕೆಯನ್ನು ಮೆಚ್ಚಲು ನನಗೆ ತೊಂದರೆ ಆಗಿಲ್ಲ-- ಎಲಿಯಟ್ ನ ಕ್ರಿಶ್ಚಿಯನ್ ದೃಷ್ಟಿಕೋನ, ಶೇಕ್ ಸ್ಪಿಯರ್ ನ ವಂಶಪಾರಂಪರ್ಯ-ರಾಜತ್ವ-ನಿಷ್ಠ-ದೃಷ್ಟಿಕೋನ ಅವರ ಕೃತಿಗಳನ್ನು ಮೆಚ್ಚಲು ಹೇಗೆ ತೊಂದರೆ ಆಗಿಲ್ಲವೋ ಹಾಗೆ."

Thursday, March 21, 2013

ಹುಟ್ಟುಹಬ್ಬದ ಪುಸ್ತಕ



ಮೇಲಿನದ್ದು ನನ್ನ ಹೊಸ ಪುಸ್ತಕ. ಇದರ ಪ್ರಕಾಶಕರು ಮಿತ್ರ ಶಿವಾನಂದ ಗಾಳಿ. ಇವತ್ತಿನ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇದನ್ನು ಉಡುಗೊರೆ ಎಂದು ಪ್ರಕಟಿಸಿ ಪ್ರತಿ ಕಳಿಸಿದ್ದಾರೆ. ನನ್ನ ಮೇಲಿನ ಅವರ ಪ್ರೀತಿಗೆ ಮನಸ್ಸು ತುಂಬಿಬಂದಿದೆ. ಅವರಿಗೆ, ಅವರ ಬಳಗಕ್ಕೆ ಕೃತಜ್ಞ ಎಂದಷ್ಟೇ ಹೇಳಬಲ್ಲೆ.

ಪೀಟರ್ ಬ್ರೂಗೆಲ್ ನ ಇಕಾರಸ್ ಪೇಂಟಿಂಗ್ ಇರುವ ಈ ಮುಖಪುಟದ ವಿನ್ಯಾಸ ಖ್ಯಾತ ಕಲಾವಿದ ಜಾನ್ ಚಂದ್ರನ್ ಅವರದ್ದು.

ಇದರಲ್ಲಿ ಉಪನಿಷತ್ತುಗಳು, ಪಂಪ, ಕನಕದಾಸ, ಶಾಂತಿನಾಥ ದೇಸಾಯಿ, ಮುಳಿಯ ತಿಮ್ಮಪ್ಪಯ್ಯ, ಚಿದಾನಂದಮೂರ್ತಿ, ಭೈರಪ್ಪ, ಯರ್ಮುಂಜ ರಾಮಚಂದ್ರ ಮೊದಲಾದವರ ಮೇಲೆ ಲೇಖನಗಳಿವೆ. 188 ಪುಟಗಳು. ಬೆಲೆ ರೂ90.00.

ಪ್ರಕಾಶಕರ ವಿಳಾಸ:

ಸುಂದರ ಪುಸ್ತಕ ಪ್ರಕಾಶನ
79, ಚಂದ್ರಕಿರಣ, ಎರಡನೆಯ ತಿರುವು,
ಎರಡನೆಯ ಮುಖ್ಯ ರಸ್ತೆ, ಶಕ್ತಿ ನಗರ
ಧಾರವಾಡ --580004

Sunday, March 17, 2013

RATHAMUSALA IN ENGLISH

English translation of my Kannada play Rathamusala is to be published next month. It is ready.

The above are some of the photos of the production of the original Kannada play directed by Krishna Kumar Narnakaje, and produced by Rangasiri, Hassan. This production won the first prize in a competition in Udupi.