The following are my translations of two more poems by Gopalakrishna Adiga, Kannada poet.
THIS LAND OF OURS NOW
Put this tree, dead in roots, erect,
Let the branches be as they are;
Collect the fallen leaves with choked feelings,
Boil them, prepare soup, and drink.
Water the tree; while you are sad
Water it with tears; show sympathy
With all your might; inside
Curry the favours of Sani.
Bring bulbs of rainbow colours; and
Hang them on evey branch of the tree;
Fix the paper flowers, scent them with perfumes;
And play the casettes of birds` songs.
You can`t complain that the tree is dead, there`s no shade;
Do you want a better shade than the shade of the roof of gold?
This is an ancient tree; what other solid branch you want
Than this to hang yourself and die?
When the wind blows from the west
The stage becomes active with the western dance and music;
This immortal tree doesn`t like the muddy water of the surrounding earth:
It sucks the nectar of heaven and grows.
Won`t even a single bird come here? --
Parrot, koyal, sparrow, crow, or owl?
Beat the koyal to death, stuff it with grass,
And then neatly arrange it on the branch.
Cover the moth-eaten tree with gold; and,
Carve its story on the trunk:
"There was shade here once, green leaves and buds, flowers and fruits,
koyal`s song, parrot`s nest;
Here was Kodanda, and the Panchajanya,
And the wheel--it was turning;
There were hermits, and the Vedas,
And this and that and much more."
Hoist high the flag of "Was".
Bother not about the "Is".
There is tree, there is gold,
Water it and grow.
THE CRITIC
Like a shadow you climbed the heights I climbed,
Crept into the lower depths I jumped,
Rubbing your wings to my wings you too flew towards the horizons I flew,
Explored, like me, new horizons; still,
You stood apart, untouched, spreading yourself
Above, below, around, piercing the sky,
Drilling the ground.
I opened myself from top to toe,
Filled the inside with salt,
Stitched the wounds,
Went underground, became a vampire,
Came up, jumped towards the sun, burnt the wings,
Fell on the ground,
On that very place built a cave around,
Became the very darkness of that cave,
Strived for fourteen years, became bitter,
Then ripened, exploded like fire,
Got back the wings--one seen, the other unseen.
Harmoniously I kept changing
From the concrete to the abstract, from the abstract
To the real--all these
Were seen by you too.
Still, like a shadow,
You remained whole, undisturbed.
You rise in the mind`s eye: you are not there outside,
But here in me:
Testing, measuring, weighing, checking--all these
Are your tasks. You pricked me with a needle
While I slept; let out
The unnecessary air while I swelled.
Are you an inside shadow? Or,
A spy from Chitraguptha?
You didn`t allow me to wander around
Like any emotion-bound animal would like to do.
You made me regret, burnt me with regret,
Caught me in the wheel of right and wrong,
Insulted me, dragged me to the streets, killed me,
By killing you rejuvenated me,
You, a Sani, a leech, yet a friend, my guru.
Thursday, October 28, 2010
Friday, October 22, 2010
FROG IN THE WELL
This is my translation of Gopalakrishna Adiga`s Kannada poem "Kupamanduka". It was first published in Vagartha, no. 18, now defunct literary quarterly edited by Prof. Meenakshi Mukherjee, well-known critic, and author of Twice-born Fiction. Vagartha-18 focussed on Adiga`s poetry. It contained, along with this translation, an article on Adiga`s poetry by K. V. Tirumalesh, and translations of "Bhuta" ("Pasts and Ghosts"), "Prarthane" ("A Prayer"), and "Enadaru Madutiru Tamma" ("Do Something Brother") by A. K. Ramanujan and M. G. Krishnamurthi.
"Kupamanduka", written in December 1963, was first published in 1964 in Lahari, a Kannada poetry-quarterly, edited by Purnchandra Tejasvi and B. N. Shriram. It is interpreted variously as a poem addressed to a friend or God, lover, one`s own creative or better self. The original poem has a profound sadness--a deeply felt visada-- in it, and a capacity to haunt the reader`s mind.
This is the poem:
Where are you now? Once hand in hand with me
You blew the sail, plump and round,
Got clearance at the checkposts, led me to distant lands, far off islands,
And then suddenly slipped out, and escaped.
You flew into the vast blue sky
Deserting me before I could open my eyes;
Halfway through the belching orchard I tripped and fell
On the shore of the lake drunk to the brim.
Burdened by my body, I lie here , an orphan;
Flower and creeper, plant and thicket, tree and bush
Mockingly gaze, turn away their face, and laugh:
Cruel jokes and constant watch.
The jack fruit tree, with yellow leaves, drunk in sun`s rays,
Stands lame, stuck in the ground;
The banana tree with overripened fruits rottens
Sucking life from its own offsprings.
Grain is ripe after the dread of thunder and rain,
Streams from well and lake are choked with moss,
The circling bull with wounded neck pressed to the yoke
Cries this is the end of the race.
Endless labour pain was the reward
For my endless faith in you.
Should I remain a dry well? Touch me,
Wake me up, open the choked springs boiling far beneath.
I go back, I want a magic blanket
to be wrapped around me;
Winding it tight I slide below the valleys,
I leap and run to the call of the sea.
2
I was at the sea shore every morning
Anxiously waiting at the sand`s edge;
The gold ray shovelling the ocean foam
Marched forward the chariot`s pinnacle.
You playfully rowed the toy boat
With the small sail, and then
The boat suddenly hit the shore, you bent,
Stretched your arms, lifted me up up and hugged me.
Riding over the waves of seven seas
We spent the day gasping, lolling and lazing;
Cargo of rainbow, coloured beads and domes
Weighed heavily on the boat, we touched the shore.
In the dark ocean, in a lonely house on an island,
We played naked , diving deep;
We were one, laid the golden eggs,
Egg after egg had your stamp alone.
Every moment was festive; at the ropes of the chariot
Mine were the arms, yours the chant;
The strength of a thousnad voices and arms
Originated from our mating.
Yet you are a rogue, I know:
In the village school, when the teacher was away,
You were the Bhagavata, beating castanets,
I, mighty Bhima, entering the battlefield,
Whilred the ruler like a mace;
Twentyfive toe-leaps and the mudpot was smashed,
The class roared in laughter, welt marks on back
Remind me of the story even today.
We, both the cheats, sat on the sea-saw;
You were slightly lighter, still,
Now and then the keel evened, I did not feel
The heaviness of my body pulling down my end.
3
The time has come when the ripened fruits fall and rot,
The roots of the green is eaten by the termites,
The chariot is slowly devoured by the insects,
The rope is old, it dries and breaks.
Heaviness grows everyday; my end
of the sea-saw rests in mud, your end
Is in the depths of the sky,
I, forty, bespectacled, cannot trace your ways and norms.
Still I hear your voice like a hundred water-falls,
A hundred roots go deep whereever I sit;
The buds wither the moment they sprout
Dissociated from your prime essence.
4
I am an ancient frog; I have drunk the water
Of seven ponds; to hop and keep hopping is my nature;
From ground to the pond below, from pond to the ground above,
I vacillated between the two.
I flopped on the groud, panting and swelling, swelling and panting.
At least now I should get down into the well;
I will hide myself in the womb of the clay,
Until I know myself when the swelling is done.
Then the body, light as air, yellow as gold
Will jig up and down in the water of the lake.
I will lean back on the green grass of the bank and croak;
Then the boat will approach, touch me and console me.
If I eat a fly, does that put the estate in order?
Does life come back to the banana tree?
Is the palmtree sad if I sink, or the jack tree depresed?
I spent much effort realizing this.
The jasmine which flowers your smile,
The mango grove whose shade displays your love,
The mud at the bottom of the pool which shows your affection,
I will play among these--this is my new resolution.

Saturday, October 16, 2010
ಜಯದೇವನ ಗೀತಗೋವಿಂದ
ಜಯದೇವ ಸುಮಾರು ಹನ್ನೆರಡನೇ ಶತಮಾನದ ಹೊತ್ತಿಗೆ ಈಗಿನ ಒರಿಸ್ಸಾದ ಒಂದು ಹಳ್ಳಿಯಲ್ಲಿ ಹುಟ್ಟಿದ. ಅಲ್ಲಿಯೇ ಅಧ್ಯಾಪಕ ಆಗಿದ್ದ ಎನ್ನುತ್ತಾರೆ. ಅವನ ಜೀವನದ ವಿವರಗಳು ಇಂಟರ್ನೆಟ್ಟಿನಲ್ಲಿ ಸಿಗುವುದರಿಂದ ಯಾರಾದರೂ ಸುಲಭವಾಗಿ ನೋಡಿಕೊಳ್ಳಬಹುದು. ನಾನದನ್ನು ಪುನರುಚ್ಚರಿಸಬೇಕಾಗಿಲ್ಲ.
ಇಂಟರ್ನೆಟ್ಟಿನಲ್ಲಿ ಇಲ್ಲದ, ಆದರೆ ಯಾವುದೋ ಒಂದು ಪುಸ್ತಕದಲ್ಲಿ ಓದಿದ ಒಂದು ವಿವರ ನನಗೆ ಕುತೂಹಲ ಹುಟ್ಟಿಸಿತು. ಅದೆಂದರೆ, ಅವನೂ ಅವನ ಹೆಂಡತಿ ಪದ್ಮಾವತಿಯೂ ಸೇರಿ ಗೀತ ಗೋವಿಂದವನ್ನು ಒರಿಸ್ಸಾದ ದೇವಸ್ಥಾನಗಳಲ್ಲಿ ಗೀತರೂಪಕವಾಗಿ ಆಡುತ್ತಿದ್ದರು ಎಂಬುದು. ಹೌದಾಗಿದ್ದರೆ, ಒಂದು ಕಾವ್ಯವನ್ನು ನೃತ್ಯರೂಪಕವಾಗಿ ಆಡಿದ ಪ್ರಥಮ ದಾಖಲೆಗಳಲ್ಲಿ ಇದೊಂದು. ಗೀತಗೋವಿಂದವೂ ನೃತ್ಯರೂಪಕಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತಿದೆ. ನೃತ್ಯ ವಿದುಷಿ ಪದ್ಮಾ ಸುಬ್ರಹ್ಮಣ್ಯಂ ಇದನ್ನು ನರ್ತಿಸುತ್ತಾರೆ. ಇದನ್ನೊಂದು ನಾಟಕವಾಗಿಯೂ ರೂಪಿಸಬಹುದು.
ಇದು ವೈಷ್ಣವ ಭಕ್ತಿಯನ್ನು ವ್ಯಕ್ತಪಡಿಸುವ ಕಾವ್ಯವೆಂದು ಹೆಸರಾಗಿದೆ. ಆದರೆ ಇದನ್ನು ಎರಡು ಪ್ರೇಮಿಗಳ ಭಾವನೆ/ವರ್ತನೆಗಳನ್ನು ವ್ಯಕ್ತ ಪಡಿಸುವ ಅತ್ಯಂತ ಮಾನವೀಯ ಕವನ ಎಂದು ನೋಡುವುದು ನನಗೆ ಹೆಚ್ಚು ಇಷ್ಟವಾದ ಓದು. ಕೃಷ್ಣನನ್ನು ದೇವರಲ್ಲ, ಒಂದು ಜೀವಮಾನದಲ್ಲಿ ವಿವಿಧ ಅವಸ್ಥಾಂತರಗಳನ್ನು ಹಾದು ಬಂದ ಒಬ್ಬ ಮಹಾ ಮಾನವನೆಂದು ನಾನು ತಿಳಿದಿರುವುದು ಈ ಬಗೆಯ ಓದು ಹೆಚ್ಚು ಇಷ್ಟವಾಗಲು ಕಾರಣವಾಗಿದೆ. ಈ ಕಾವ್ಯ ಪ್ರೇಮಿಗಳಾಗಿ ಅವನ ಮತ್ತು ರಾಧೆಯ ಮನಸ್ಥಿತಿ/ವರ್ತನೆಗಳನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ. ಭಗವದ್ಗೀತೆಯಲ್ಲಿ ನಾವು ಕಾಣುವ ಕೃಷ್ಣನ ಮನಸ್ಥಿತಿ ಇದಕ್ಕೆ ವಿರುದ್ಧವಾದದ್ದು. ಅಲ್ಲಿ ಅವನು ತತ್ವಜ್ಞಾನಿ. ನಿರಪೇಕ್ಷವಾಗಿ ಕ್ರಿಯೆಯಲ್ಲಿ ತೊಡಗು ಎಂದು ಅರ್ಜುನನಿಗೆ ಉಪದೇಶಿಸುವ ಕೃಷ್ಣ ಭಗವದ್ಗೀತೆಯ ಮೊದಲ ಮೂರು ಅಧ್ಯಾಯಗಳಲ್ಲ್ಲಿ ಬಹಳ ಗಾಢ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತುತ್ತಾನೆ. ಆ ಪ್ರಶ್ನೆಗಳು, ವ್ಯಕ್ತಪಡಿಸುವ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಎಂದೇ ಅದು ಈಗಲೂ ಪ್ರಭಾವಶಾಲಿಯಾಗಿ ಉಳಿದುಕೊಂಡಿದೆ.
ಗೀತಗೋವಿಂದ ಶಬ್ದಸಂಗೀತಗಳ ಕಾವ್ಯ. ಶಬ್ದಸಂಗೀತ ಅರ್ಥಾನುಸಾರಿಯಾಗಿದೆ ಎನ್ನುವುದೇ ಈ ಕಾವ್ಯದ ಉತ್ಕೃಷ್ಟತೆಗೆ ಕಾರಣವಾಗಿದೆ. ಬೇಂದ್ರೆ "ನಾದಲೀಲೆ", "ತುಂ ತುಂ ತುಂ ತುಂ"ನಂಥಾ; ಅಡಿಗರು "ಮೋಹನ ಮುರಲಿ", "ವರ್ಧಮಾನ", "ಇದನ್ನು ಬಯಸಿರಲಿಲ್ಲ"ದ ಎರಡನೇ ಭಾಗ ಮೊದಲಾದಂಥ ತಮ್ಮ ಕೆಲವು ಅತ್ಯುತ್ತಮ ಕವನಗಳಲ್ಲಿ ಇದೇ ಮಟ್ಟದ ಅರ್ಥಾನುಸಾರಿಯಾದ ಶಬ್ದಸಂಗೀತವನ್ನು ಸಾಧಿಸುತ್ತಾರೆ.
ನನ್ನದು ನೇರ ಅನುವಾದ ಅಲ್ಲ. ಗೀತಗೋವಿಂದದ ಕೆಲವು ಸ್ಟಾನ್ಸಾಗಳನ್ನು ಆಧರಿಸಿ ಮಾಡಿಕೊಂಡ ಮುಕ್ತ ಮರುರಚನೆ.
ಶ್ರೀ ಭಾಗವತದ ಕೆಲವು ವಿವರಗಳನ್ನೂ ಇದರಲ್ಲಿ ಬಳಸಿದ್ದೇನೆ. ಇದನ್ನು ನಾನು ನನ್ನ ನಾಟಕ ಕೊಳಲು ಮತ್ತು ಶಂಖಕ್ಕಾಗಿ ಮೊದಲು ಮಾಡಿಕೊಂಡೆ. ಕೊಳಲು ಮತ್ತು ಶಂಖ ಕೃಷ್ಣಾವಸಾನ ಕುರಿತ ನಾಟಕ. ಕೃಷ್ಣ ಗೋಕುಲದಲ್ಲಿದ್ದಷ್ಟು ಕಾಲ ದನ ಮೇಯಿಸುತ್ತಾ ಕೊಳಲು ನುಡಿಸುತ್ತಾ ಇದ್ದ. ಬಿಲ್ಲ ಹಬ್ಬಕ್ಕಾಗಿ ಮಥುರೆಗೆ ಹೋದ ಮೇಲೂ ಅವನು ಒಂದು ಮುಖವಾದ್ಯವನ್ನೇ ಬಳಸುತ್ತಾನೆ__ಅದು ಶಂಖ. ಹೀಗೆ ಅವನ ಜೀವನದುದ್ದಕ್ಕೆ ಎರಡು ಮುಖವಾದ್ಯಗಳು ಅವನ ಸಂಗಾತಿಗಳಾಗಿ ಬರುತ್ತವೆ--ಕೊಳಲು ಮತ್ತು ಶಂಖ. ಹಾಗೆಯೇ, ಸಂಗೀತ ಮತ್ತು ಯುದ್ಧ, ಪ್ರೇಮಿಗಳು ಮತ್ತು ಯೋಧರು ಜೀವನದುದ್ದಕ್ಕೆ ಅವನ ಸಂಗಾತಿಗಳು. ಆದರೆ ಶಂಖದ ಬಳಕೆ ಸಂಗೀತಕ್ಕಾಗಿ ಅಲ್ಲ, ಯುದ್ಧಕ್ಕೆ ಕರೆಯುವುದಕ್ಕಾಗಿ. ಸ್ವಂತದ ಅಭಿವ್ಯಕ್ತಿಗಾಗಿ ಅವನು ಬಳಸುವುದು ಕೊಳಲನ್ನು ಮತ್ತು ತಾತ್ತ್ವಿಕ ಜಿಜ್ಞಾಸೆಗಳನ್ನು. ಈ ತಾತ್ತ್ವಿಕ ಜಿಜ್ಞಾಸೆ ಭಗವದ್ಗೀತೆಗೆ ಸೀಮಿತವಲ್ಲ. ಕೊನೆಯಲ್ಲಿ ಅವನ ಬಾಲ್ಯಸ್ನೇಹಿತ ಉದ್ಧವನ ಜೊತೆಗೆ ಅವನು ಮತ್ತೆ ತಾತ್ತ್ವಿಕ ಜಿಜ್ಞಾಸೆಯಲ್ಲಿ ಮಗ್ನನಾಗುತ್ತಾನೆ.
ನನ್ನ ನಾಟಕ ಯಾದವ ಕಲಹ ಮುಗಿದ ನಂತರ ಬೇಡನ ಬಾಣದಿಂದಾಗಿ ಕಾಲಿಗೆ ಪೆಟ್ಟಾದ ಘಟನೆಯಿಂದ ಪ್ರಾರಂಭವಾಗುತ್ತದೆ. ಈಗ, ಈ ಕೊನೆಗಳಿಗೆಯಲ್ಲಿ, ತಾನು ಬಾಲ್ಯದಲ್ಲಿ ಗೋಕುಲದಲ್ಲಿ ಬಿಟ್ಟು ಬಂದ ಕೊಳಲಿನ ಮತ್ತು ಆಗಿನ ರಾಗಗಳ ನೆನಪು ಕೃಷ್ಣನಿಗೆ ಮತ್ತೆ ಆಗುತ್ತಿದೆ; ಹಿಂದೆ ಕಲಿತಿದ್ದ ರಾಗಗಳನ್ನು ನುಡಿಸುತ್ತಾ ರಾಧೆಯ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಆ ಸಂದರ್ಭದಲ್ಲಿ ಈ ಕೆಳಗಿನ ಸಾಲುಗಳು ನಾಟಕದಲ್ಲಿ ಬರುತ್ತವೆ. ಇವುಗಳನ್ನು ಆ ನಾಟಕದ ಭಾಗವೆಂದಲ್ಲದೆ ಸ್ವತಂತ್ರವಾಗಿ ಸಹಾ ಓದಬಹುದಾದ್ದರಿಂದ ಇಲ್ಲಿ ಕೊಡುತ್ತಿದ್ದೇನೆ.
ಲವಂಗ ಪೊದೆಗಳ ಮೇಲಿಂದ ಮೆಲ್ಲನೆ ಮೆಲ್ಲನೆ ಬೀಸುವ ತಂಗಾಳಿ
ಕೋಗಿಲೆ ಕೂಗು ದುಂಬಿಯ ಝೇಂಕಾರ ಹೂವಿನ ಪರಿಮಳವು;
ವಸಂತ ಮಾಸವು--ಬೃಂದಾವನದಲಿ ಯುವತೀ ಜನರೊಡಗೂಡಿ
ಕೃಷ್ಣನು ವಿಹರಿಸುತಿರುವನು--ಸಖಿ ಇದ ರಾಧೆಗೆ ತಿಳಿಸುವಳು.
ತಮಾಲ ಚಿಗುರಿದೆ; ಮನ್ಮಥ ಉಗುರಿನ ಹಾಗಿದೆ ಮುತ್ತುಗವು;
ಥರ ಥರ ಹೂಗಳು ಎಲ್ಲೆಡೆ ಅರಳಿವೆ ವಿರಹಿಯ ನೋಡುತಿವೆ;
ನೋಡುತ ನಗುತಿವೆ ಹೃದಯವ ಸೀಳುತ ಈಟಿಯ ಥರದಲ್ಲಿ;
ಮಾವಿನ ಮರವೂ ಕಂಪಿಸುತಿಹುದು ಮಲ್ಲಿಗೆ ಬಯಕೆಯಲಿ.
ನೀಲಿಯ ಮೈ ಬಣ್ಣ ಪೂಸಿರೆ ಚಂದನ ಧರಿಸಿರೆ ಹೂವಿನ ಮಾಲೆ
ಮಣಿಕುಂಡಲಗಳು ಕೆನ್ನೆಗೆ ಮುತ್ತಿಡೆ ಮುಖದಲಿ ತುಂಬಿರೆ ಹಾಸ
ದಪ್ಪನೆ ಮೊಲೆಗಳ ಗೋಪಿಕೆ ಒಬ್ಬಳು ಅಪ್ಪುತ ಉಲಿಯುತ ಇರಲು
ಕೃಷ್ಣನು ವಿಹರಿಸುತಿರುವನು ವಿಲಾಸವತಿಯರ ಸಂಗಡ ಇರುಳು.
ಏನೋ ಗುಟ್ಟನು ಹೇಳುವ ನೆವದಲಿ ಇನ್ನೊಬ್ಬ ಗೋಪಿಕೆಯು
ಕೃಷ್ಣನ ಕಿವಿ ಬಳಿ ತುಟಿಯನ್ನಿಡುವಳು ಮೆಲ್ಲನೆ ಕಚ್ಚುವಳು.
ಮತ್ತೊಬ್ಬ ಗೋಪಿಕೆ ಯಮುನೆಲಿ ಆಡುವ ಆಸೆಯು ಜಿನುಗುತಿರೆ
ಬಕುಳದ ಪೊದೆಗಳ ಮರೆಯಲಿ ಕೃಷ್ಣನ ಬಟ್ಟೆಯ ಸೆಳೆಯುವಳು.
ಮಗುದೊಬ್ಬ ಗೋಪಿಕೆ ಕೃಷ್ಣನ ಮುರಲಿಯ ನಾದಕೆ ಸರಿದೊರೆಯಾಗಿ
ಕೈಗಳ ಬಳೆಯನು ಗಿಲ್ ಗಿಲ್ ಎನ್ನುತ ಹೊಂದಿಸಿ ನುಡಿಸಿದಳು.
ಇಂಥಾ ಯುವತೀ ಜನ ಸಮ್ಮರ್ದನು
ನನ್ನನು ನೆನೆಯುವನೇ?--
ರಾಧೆಯು ಸಖಿಯನು ಕೇಳುತ ಇಲ್ಲ
ಎನ್ನುತ ಕೊರಗುವಳು.
ಆದರೆ ಸಖಿಯೇ ಮನಸೋ ಆತನ
ಮತ್ತೂ ಸ್ಮರಿಸುತಿದೆ;
ಪೀತಾಂಬರವನು ಧರಿಸಿದ ಅವನನು
ನೆನೆಸುತ ಭ್ರಮಿಸುತಿದೆ;
ದೋಷವ ಎಣಿಸದೆ ಬರಿದೇ ಗುಣವನು
ಮಾತ್ರವೆ ಕಾಣುತಿದೆ;
ಸಿಟ್ಟೇ ಇಲ್ಲದೆ ಅವನನು ಮತ್ತೂ
ಮತ್ತೂ ನೆನೆಯುತಿದೆ.
ಆದರೆ ಯುವತೀ ಜನ ಸಮ್ಮರ್ದನು
ನನ್ನನು ನೆನೆಯುವನೇ?--
ರಾಧೆಯು ಸಾಧ್ಯತೆ ಶಂಕಿಸಿ ಕುಗ್ಗುತ
ಒಳ ಒಳ ಕೊರಗುವಳು.
ಆದರೆ ಇತ್ತಲೊ ಕೃಷ್ಣನು ರಾಧೆಯ
ನೆನಸುತ ದುಃಖಿಸುವ:
ಗೋಪೀ ಜನ ಜೊತೆ ಚೆಲ್ ಚೆಲ್ ಆಡುತ
ರಾಧೆಯ ನೋಯಿಸಿದೆ;
ಅವಳಿಲ್ಲದ ಮನೆ, ಅವಳಿಲ್ಲದ ಹಣ,
ಅವಳಿಲ್ಲದ ಬದುಕೇ ವ್ಯರ್ಥ;
ಸಿಟ್ಟಾದ ರಾಧೆಯ ಮತ್ತೆಂತು ಒಲಿಸಲಿ
ಮನ್ಮಥ, ಹೇಳು ಸಮಸ್ತ--
ಅವಳಾ ಹುಬ್ಬನು ಬಿಲ್ಲನು ಮಾಡಿರೆ
ಕಣ್ನೋಟ ಹೂಡಿದ ಬಾಣ;
ಆ ಬಾಣದ ಮೊನೆ ತಾಗಿದೆ ಒಳ ಮನೆ
ಮನ್ಮಥ, ಹೇಳು ಸಮಸ್ತ--
ಎನ್ನುತ ಕೃಷ್ಣನು ಪುಬ್ಬಲಿ ಗಿಡಗಳ
ಪೊದೆಯಲಿ ಸುಯ್ಯುತ ಇರಲು
ರಾಧೆಯ ಸಖಿ ಇದ ರಾಧೆಗೆ ಎಂದಳು
ಹಬ್ಬಿದೆ ಒಲಿಯುವ ಇರುಳು;
ರತಿಸುಖ ಸಾರವ ಪಡೆಯಲು ಗಮನವ
ವಿಳಂಬ ಮಾಡದೆ ತೆರಳು;
ಯಮುನಾ ತೀರದಿ ಧೀರ ಸಮೀರವು
ಕರೆಯುವ ಕೃಷ್ಣನ ಕೊಳಲು.
ಇಂಥಾ ಸಮಯದಿ ಚಂದ್ರನು ಹುಟ್ಟಿದ
ಹಬ್ಬಿತು ತಿಂಗಳ ಬೆಳಕು;
ಬೆಳ್ಳಿ ಮುಲಾಮನು ತೊಟ್ಟಿತು ಮರ ಗಿಡ
ಬೆಳೆಸುತ ಪ್ರೇಮದ ಸೆಳಕು.
ಅಂದುಗೆ ಶಬ್ದವು ಖಣಿ ಖಣಿರೆನ್ನಲು
ಜಘನದ ಒಡ್ಯಾಣ ಸಡಿಲಾಗಲು
ಕೊರಳಿನ ಹಾರವು ಕುಚ ಕುಂಭ ಮೇಲಾಡೆ
ರಾಧೆಯು ಕೃಷ್ಣನು ಸೇರಿದರು.
ಹೂವಿನ ಹಾಸಿಗೆ ಕುಂಜ ಕುಟೀರದಿ
ದುಂಬಿಯ ದನಿಗಳ ಸಂಗೀತವು;
ಪರಸ್ಪರ ತೋಳಲ್ಲಿ ಕರಗುನ ತನುಗಳು
ಕೃಷ್ಣನು ರಾಧೆಯು ಸೇರಿದರು.
ಇಂಥಾ ಹೊತ್ತಲ್ಲಿ ಪ್ರಕೃತಿಯ ಪ್ರತಿಯೊಂದು
ಖಗ ಮೃಗ ಗಿಡ ಮರ ಲತೆಗೆ
ಪ್ರತಿಯೊಂದು ಜೀವಿಗು ಸೃಷ್ಟಿಯ ಸಂಭ್ರಮ
ಯಮುನೆಯು ಹರಿವಳು ಸಮುದ್ರದೆಡೆ.
ಲವಂಗ ಪೊದೆಗಳ ಮೇಲಿಂದ ಮೆಲ್ಲನೆ
ಮೆಲ್ಲನೆ ಬೀಸುವ ತಂಗಾಳಿ;
ಕೋಗಿಲೆ ಕೂಗು ದುಂಬಿಯ ಝೇಂಕಾರ
ಹೂವಿನ ಪರಿಮಳವು;
ತಮಾಲ ಚಿಗುರಿದೆ; ಮನ್ಮಥ ಉಗುರಿನ
ಹಾಗಿದೆ ಮುತ್ತುಗವು;
ಥರ ಥರ ಹೂಗಳು ಎಲ್ಲೆಡೆ ಅರಳಿವೆ
ವಿರಹಿಯ ನೋಡುತಿವೆ;
ನೋಡುತ ನಗುತಿವೆ ಹೃದಯವ ಸೀಳುತ
ಈಟಿಯ ಥರದಲ್ಲಿ;
ಮಾವಿನ ಮರವೂ ಕಂಪಿಸುತಿಹುದು
ಮಲ್ಲಿಗೆ ಬಯಕೆಯಲಿ.
**********
ಸೂಚನೆ: ನನ್ನ ಸಮಗ್ರ ನಾಟಕಗಳು, ಸಂಪುಟ 2 (ಬೆಲೆ ರೂ60.00) ಮತ್ತು ಸಂಪುಟ 3 (ಬೆಲೆ ರೂ75.00) ಈಗ ಬೋಧಿ ಟ್ರಸ್ಟಿನಿಂದ ಪ್ರಕಟವಾಗಿವೆ. ಸಂಪುಟ 2ರಲ್ಲಿ ಪುಟ್ಟಿಯ ಪಯಣ ಮತ್ತು ಸುದರ್ಶನ--ಈ ಎರಡು ನಾಟಕಗಳಿವೆ. ಸಂಪುಟ 3ರಲ್ಲಿ ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ. ಕೊಳಲು ಮತ್ತು ಶಂಖ ಇರುವುದು ಸಮಗ್ರ ನಾಟಕಗಳು ಸಂಪುಟ 1ರಲ್ಲಿ. ಇದರ ಪ್ರತಿಗಳು ಮುಗಿದಿವೆ.
ಈ ಪುಸ್ತಕಗಳ ವಿತರಕರು:
1. ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್)
ನಂ. 27, 21ನೇ ಮೇನ್ ರಸ್ತೆ, ಬಿ ಡಿ ಎ ಕಾಂಪ್ಲೆಕ್ಸ್ ಎದುರು
ಬನಶಂಕರಿ ಎರಡನೇ ಹಂತ, ಬೆಂಗಳೂರು 560070.
ಫೋನ್: 080 26711329
premierpublishingco@yahoo.in
2. ಅತ್ರಿ ಬುಕ್ ಸೆಂಟರ್
ಶರಾವತಿ ಬಿಲ್ಡಿಂಗ್, ಬಲ್ಮಠ ರಸ್ತೆ,
ಮಂಗಳೂರು 1
0824 2425161

Wednesday, October 6, 2010
ಶೇಕ್ಸ್ಪಿಯರ್ ಸಾನೆಟ್ಟುಗಳು
ನಾನು ಇತ್ತೀಚೆಗೆ ಶೇಕ್ಸ್ಪಿಯರ್ ಇಂಗ್ಲಿಷಿನಲ್ಲಿ ಬರೆದ 154 ಸಾನೆಟ್ಟುಗಳಲ್ಲಿ 120 ಸಾನೆಟ್ಟುಗಳನ್ನು ಅನುವಾದಿಸಿದ್ದೇನೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ. ಸಂಖ್ಯೆ ಮೂಲ ಸಾನೆಟ್ಟನ್ನು ಸೂಚಿಸುತ್ತದೆ.
1
ಚೆಲುವು, ಚೆಲು ಜೀವಿಗಳು ವೃದ್ಧಿಸಲೆಂದು ಬಯಸುವೆವು--
ಚೆಲು ಗುಲಾಬಿ ಎಂದೆಂದು ಅಳಿಯದೆಯೆ ಉಳಿಯಲಿ ಎಂದು;
ಕಳೆದಂತೆ ಕಾಲ ಹಣ್ಣಾದ್ದು ಮುಂದಿನ ಚಿಗುರು
ಗತದ ಚಹರೆಯ ಗುರುತ ಹೊತ್ತು ಬಾಳಲಿ ಎಂದು.
ಆದರೆ ನೀನು ನಿನ್ನ ಕಣ್ಣಿನ ತೇಜದಲ್ಲಿ ಕುರುಡಾದವನು.
ನಿನ್ನ ಬೆಳಕಿನ ಕುಡಿಯ ನಿನ್ನ ಒಳಗಿನ ಎಣ್ಣೆ ಹೊಯ್ದು ಉರಿಸುತ್ತಿರುವಿ.
ಸಮೃದ್ಧಿ ಇರುವಲ್ಲಿ ಬರಗಾಲ ಇದರ ಪರಿಣಾಮ
ನಿನಗೆ ನೀನೇ ಶತ್ರು, ನಿನ್ನ ಹಿತ ವ್ಯಕ್ತಿತ್ವಕ್ಕೆ ನೀನೆ ನಿಷ್ಠುರಿ ಕ್ರೂರಿ.
ಇದ್ದರೂ ನೀನಿಂದು ಈ ಜಗತ್ತಿನ ಹೊಸತು ಆಭರಣ,
ವರ್ಣ ವೈವಿಧ್ಯಮಯ ವಸಂತದ ಬರವ ಸಾರುವವ,
ನಿನ್ನ ಸತ್ತ್ವವ ನಿನ್ನ ಮುಗುಳಲ್ಲೆ ಹುಗಿಯುತ್ತಿರುವಿ,
ಬೋಸ, ಕಂಜೂಸ, ಎಳಸ, ಬಚ್ಚಿಟ್ಟು ಹುಳಿಯುತ್ತಿರುವಿ.
ಇರಲಿ ಸಹಾನುಭೂತಿ ಜಗತ್ತಿನ ಬಗ್ಗೆ; ಇಲ್ಲವಾದರೆ ಜಗದ ಹಕ್ಕಿನ ಫಲವ
ನೊಣೆವ ಬಕಾಸುರ ಬುದ್ಧಿ ನಿನ್ನ ಬಳಿ ಗೋರಿ ಬಳಿ.
2
ನಲವತ್ತು ಚಳಿಗಾಲ ನಿನ್ನ ಮುಖ ಮೇಲೆ ದಾಳಿಯ ಮಾಡಿ
ನಿನ್ನ ಚೆಲು ನೆಲೆಯಲ್ಲಿ ಆಳ ಕಾಲುವೆಯ ತೋಡುವ ಸಮಯ
ಇಂದು ಎಲ್ಲರು ಕಣ್ಣು ನೆಟ್ಟು ನೋಡುತ್ತಿರುವ ನಿನ್ನ ಯವ್ವನ ರೂಪ
ಹೆಚ್ಚೇನು ಬೆಲೆಯಿರದ ಚಿಂದಿ ಕಳೆ ಆಗುವುದು. ಆಗ
ಕೇಳಿದರೆ ಎಲ್ಲಿ ನೆಲೆಸಿದೆ ನಿನ್ನ ಹಳೆ ದಿನದ ಚೆಲುವೆಂದು
ನಿನ್ನ ಯವ್ವನ ಮದದ ಉನ್ಮತ್ತ ಸಂಪದವೆಂದು
ಒಳ ಕಂತಿರುವ ಮಸಕು ಮಸಕು ಬೆಳಕಿನ ಕಣ್ಣ ಒಳಗೆಂದು ಹೇಳುವುದು
ಮರ್ಯಾದೆ ಹೋಗುವ ಮಾತು, ಅರ್ಥವಿಲ್ಲದ ಡಂಭ.
ನಿನ್ನ ಸೌಂದರ್ಯಕ್ಕೆ ಎಂಥ ಬೆಲೆ ಬಂದೀತು
ಹೇಳಿದರೆ ನೀನಾಗ: "ಈ ನನ್ನ ಚೆಲು ಕಂದ
ನನ್ನ ಲೆಕ್ಕವ ಚುಕ್ತ ಮಾಡುವುದು, ನನ್ನ ಮುದಿತನಕ್ಕೆ ಪ್ರತಿ ನಿಂದು."
--ಸಾಧಿಸಿ ತೋರಿ ಅವನ ಸೌಂದರ್ಯ ಉತ್ತರದಲ್ಲಿ ನಿನ್ನದು ಎಂದು.
ಹೊಸತಾಗಬೇಕಿದೆ ನೀನು ಹಳಬ ಆಗುತ್ತಿರಲು
ಬಿಸಿಯಾಗಬೇಕಿದೆ ರಕ್ತ ತಣಿಯುತ್ತ ಬರುತ್ತಿರಲು.
27
ದಣಿದು ಸುಸ್ತಾಗಿ ಹಾಸಿಗೆಗೆ ಧಾವಿಸುವೆ
ಪಯಣಿಸಿ ಸೋತ ಅಂಗಾಂಗ ವಿಶ್ರಾಂತಿ ಪಡೆಯಲಿ ಎಂದು.
ಆದರೆ ಆಗ, ದೇಹವು ದುಡಿದು ಸೋತಾಗ
ಮನಸ್ಸ ಒಳಗಿನ ಪಯಣ ಮನಸ್ಸ ದುಡಿಸುವುದಕ್ಕೆ ತೊಡಗುವುದು.
ಪರಿಣಾಮ--ಇದ್ದರೂ ನಾನು ನನ್ನಷ್ಟಕ್ಕೆ ಎಷ್ಟೋ ದೂರ
ನನ್ನ ಯೋಚನೆ ಯಾತ್ರೆ ತೊಡಗುವುದು ನಿನ್ನ ಕಡೆ
ಮುಚ್ಚಲೆಳಸುವ ರೆಪ್ಪೆ ಮುಚ್ಚಲು ಬಿಡದೆ ತುಸು ಕೂಡ
ದಿಟ್ಟಿಸುತ ಅನಿಮೇಷ ಪ್ರತಿ ದಿಟ್ಟಿಸುವ ಎದುರಿನ ಇರುಳ.
ವ್ಯತ್ಯಾಸ ಒಂದೇ ಒಂದು--ನನ್ನ ಕಲ್ಪಿತ ದೃಷ್ಟಿ
ನಿನ್ನ ಪ್ರತಿಮೆಯ ನನ್ನ ಮನಸ್ಸಲ್ಲಿ ಬೆಳೆಸುವುದು; ಅದು,
ಭಯಾನಕ ನಿಶೆಯ ಚೆಲು ಮಾಡಿ, ಹೊಳೆಯಿಸಿ ಅದರ ಕಪ್ಪು ಮುಖ,
ಭೀಕರದ ಇರುಳಲ್ಲಿ ರತ್ನದ ಹಾಗೆ ತೂಗುವುದು.
ಹೀಗೆ, ಹಗಲಲ್ಲಿ ನನ್ನ ಮೈ, ಇರುಳಲ್ಲಿ ಮನಸ್ಸು
ನಿನಗಾಗಿ ನನಗಾಗಿ ಅವಿಶ್ರಾಂತ ದುಡಿಯುವುವು.
29
ಅದೃಷ್ಟದ ಮತ್ತು ಜನರ ಕಣ್ಣಲ್ಲಿ ನಾ ನತದೃಷ್ಟ ಅನ್ನಿಸಿದಾಗ
ನನ್ನ ಈ ಪರಿತ್ಯಕ್ತ ಸ್ಥಿತಿಗಾಗಿ ದುಃಖಿಸಿಕೊಂಡು ನನ್ನಷ್ಟಕ್ಕೆ
ಕಿವುಡು ಸ್ವರ್ಗವ ನನ್ನ ನಿರರ್ಥ ಕರೆಯಿಂದ ತಿವಿಯುತ್ತ
ನನ್ನ ಪರಿಸ್ಥಿತಿಗೆ ಪರಿತಪಿಸಿ ವಿಧಿ ಶಪಿಸಿ ಭವಿಷ್ಯದ ಬಗ್ಗೆ
ಆಶಾವಾದಿ ಆಗಿದ್ದರೆಷ್ಟು ಚೆಂದ ಇತ್ತೆಂದು ಯೋಚಿಸಿಕೊಂಡು
ಅವನ ಚೆಲುವನ್ನು ಇವನಂಥ ಬಂಧು ಸ್ನೇಹಿತರ
ಆ ಅವನ ಕಲೆಯ, ಈ ಇವನು ಪಡೆದ ಅವಕಾಶಗಳ
ಕಾಣದೆಯೆ ತೃಪ್ತಿ ಸುಖಿಸದೆಯೆ ಕಳೆವೆ ಇರುವ ದಿನಮಾನಗಳ.
ಇಂತಾಗಿ ನನ್ನ ನಾನೇ ಧಿಕ್ಕರಿಸಿ ಇರುವಾಗ
ಫಕ್ಕ ಮೂಡುವಿ ನೀನು ಮನಸ್ಸ ಒಳ; ಆಗ ಸ್ಥಿತಿ ನಂದು
ಮುಂಜಾನೆ ಮಬ್ಬು ಮುಸುಕಿರುವ ಬುವಿ ಮೇಲೆ ಹಾಡುತ್ತ
ಆಗಸದ ಬೆಳಕಿಗೆ ನೆಗೆವ ಬಾನಾಡಿ ಥರ ಉಜ್ಜುಗಿಸಿ ಏಳುವುದು.
ನಿನ್ನ ಪ್ರೀತಿಯ ನೆನಪು ನನಗಾಗ ನೀಡುವುದು ಸಂಪದವ
ಬದಲಿಸೆನು ನನ್ನ ಸ್ಥಿತಿ ನೀಡಿದರು ಚಕ್ರವರ್ತಿಯ ಪದವ.
66
ಸುಸ್ತಾಗಿ ಇದರಿಂದೆಲ್ಲ ಕೊನೆ ವಿಶ್ರಾಂತಿಗಾಗಿ ಹಂಬಲ ಪಡುವೆ--
ಎಂಥ ಎಂಥದ್ದೆಲ್ಲ ನೋಡುವುದು--ಯೋಗ್ಯ ಅಸವಡೆಯುವುದ,
ಏನೂ ಅಲ್ಲದವನೊಬ್ಬ ವಿಜೃಂಭ ವೈಭವದಲ್ಲಿ ಮೆರೆಯುವುದ,
ಧರ್ಮಭೀರುವ ಧರ್ಮ ನಿಂದಕನಂತೆ ತೋರುವುದ,
ಸುವರ್ಣ ಬಹುಮಾನ ಯಾರೋ ನಾಮರ್ದನಿಗೆ ನೀಡುವುದ,
ಗುಣನಿಧಿಯಾದ ಕನ್ನಿಕೆಯ ಸೂಳೆಯ ಮಾಡಿ ಮಾರುವುದ,
ಅರೂಪ ಮಾಡುವುದ ಸಂಪೂರ್ಣ ಪರಿಪೂರ್ಣವಾದದ್ದ,
ಅದಕ್ಷ ಅಧಿಕಾರಿ ನಿಸ್ಸಹಾಯ ಪಡಿಸುವುದು ಶಕ್ತನ್ನ,
ಕಲೆಯ ದನಿ ದರ್ಪಿಷ್ಟ ಬಲಶಾಲಿ ಘರ್ಜನೆಗೆ ಉಡುಗುವುದ,
ನಿಗ್ರಹಿಸುವುದ ಭಂಡ ಜಾಣನ್ನ ವೇಷವ ತೊಟ್ಟು ತಿಳಿದವನ,
ಪರಮ ಸತ್ಯವ ಪೆದ್ದುತನವೆಂದು ತಿಳಿಯುವುದ,
ಸೆರೆ ಸಿಕ್ಕ ಒಳ್ಳೆತನ ಕೇಡು ಮುಖಂಡನಿಗೆ ಶರಣು ಹೋಗುವುದ.
ಸುಸ್ತಾಗಿ ಇದರಿಂದೆಲ್ಲ ದೂರ ಹೋಗಬೇಕೆನಿಸುವುದು;
ಸತ್ತಲ್ಲಿ ಹಾಗೆಂದು ಅವಳೊಬ್ಬಳೇ ಕಾಲ ಎಳೆಯಬೇಕಾಗುವುದು.
73
ಇತ್ತೀಚೆಗಷ್ಟೇ ಹಕ್ಕಿಗಳು ಕೂತು ಮೇಳ ಸಂಗೀತ ಹಾಡಿದ್ದ
ಮರದ ಕೊಂಬೆಗಳು ಚಳಿಗೆ ನಡುಗುತ್ತ ಎಲೆಗಳು ಉದುರಿ
ಅಥವಾ ಒಂದೆರಡು ಹಳದಿ ಎಲೆಗಳು ತೂಗಿ ಅಥವಾ ಅವೂ ಇಲ್ಲ
ಎಂಬಂಥ ಋತುವ ಸ್ಥಿತಿಯನು ನೀನು ನನ್ನಲ್ಲಿ ಕಂಡೀಯ.
ಕಂಡೀಯ ನನ್ನಲ್ಲಿ ಇದನ್ನೂ ಕೂಡ: ಪಶ್ಚಿಮದಲ್ಲಿ ದೇವ ಕಂತಿದ ಮೇಲೆ
ಸಾವಿನ ಎರಡನೆಯ ಆತ್ಮದ ಹಾಗೆ ಪ್ರತಿಯೊಂದ ನುಂಗಿ ಮುಗಿಸುವ
ಕಡು ಇರುಳ ದಾಳಿಗೆ ಮೊದಲ ಮುಸ್ಸಂಜೆ ದಿವಸದ ತೇಜ ಮಸಳಿಸಿದ ಬಳಿಕ
ಉಳಿವ ಅಂತಿಮ ಬೆಳಕ ಮರಣ ಮುನ್ನದ ಥರದ ಮಿಣ ಮಿಣವ.
ಯವ್ವನದ ಬೂದಿಯ ಮೇಲೆ ಹೊಳೆಯುತ್ತಿರುವ ಕಿಡಿ ಬೆಂಕಿ
ತನ್ನ ಕೊನೆಗಾಲ ತನ್ನ ಪೋಷಿಸಿದ ಶಯ್ಯೆ ಮೇಲೆಯೆ ಕಳೆದು
ತನ್ನನ್ನು ಉರಿಸಿದ್ದೆ ತನ್ನನ್ನು ನುಂಗುವ ಥರ ಆಗಿ ಮುಗಿವಂಥ
ದಿನಮಾನ ಕಂಡೀಯ ಕಂಡೀಯ ನೀನು ನನ್ನಲ್ಲಿ ಮುಂದೊಮ್ಮೆ.
ತಿಳಿದದ್ದೆ ಇದು ನಿನಗೆ, ನಿನ್ನ ಪ್ರೀತಿಯ ಅದು ಮಾಡುವುದು ಗಟ್ಟಿ;
ಬಿಡಲೆ ಬೇಕಾದ್ದ ಪ್ರೀತಿಸಬೇಕು ಮನಸ್ಸನ್ನು ಚೆದುರದ ಹಾಗೆ ಕಟ್ಟಿ.
94
ನೋಯಿಸುವ ಅಧಿಕಾರ ಉಳ್ಳವರು ನೋಯಿಸರು;
ಕೆಲಸ ಮಾಡುವ ಹಾಗೆ ತೋರುವ ಜನರು ನಿಷ್ಕ್ರಿಯರು;
ಉಳಿದವರ ಚಲಿಸಬಲ್ಲವರು ತಾವು ಕಲ್ಲಿನಂತುಳಿಯುವರು
ಅಲ್ಲಾಡದೆಯೆ, ತಣ್ಣ, ಸ್ಥಿತಪ್ರಜ್ಞ, ಕೆರಳದೆಯೆ ಚುಚ್ಚಿದರು.
ಅಂಥವರು ಸ್ವರ್ಗದ್ದು ಕೃಪೆಯನ್ನು ಪಡೆಯುವರು,
ಪ್ರಕೃತಿ ಸಂಪತ್ತನ್ನು ಹಾಳು ಮಾಡದೆಯೆ ಉಳಿಸುವರು;
ಮುಖ ಮೇಲೆ ಪ್ರಭು ಹಿಡಿತ ಉಳ್ಳವರು ಅಂಥ ಜನ
ಉಳಿದವರು ಅವರ ಉನ್ನತಿ ಕೆಳಗೆ ಬದುಕುವರು;
ವಸಂತದ ಹೂವು ಅದರಷ್ಟಕ್ಕೆ ಬದುಕಿದ್ದು ಸತ್ತರೂ
ವಸಂತದ ಗಂಧ ವಸಂತದಲ್ಲೆಲ್ಲ ಕಡೆ ಬೀರುವುದು;
ಅಂಥಾ ಹೂವು ಕಳಪೆ ಒಂದರ ಜೊತೆಗೆ ಸೇರಿದರೆ
ಅಂಥಾ ಕಳಪೆ ವಸಂತದ ಮಿಗಿಲು ಪದ ಏರುವುದು.
ಚೆಲುವಾದ ವಸ್ತುಗಳು ತಮ್ಮ ಕೆಲಸಗಳಿಂದ ಹಾಳು ಆಗುವುವು;
ಕೊಳೆವ ಲಿಲ್ಲಿಯ ಹೂವು ಕಳಪೆ ಗಿಡಕ್ಕಿಂತ ಹೆಚ್ಚು ನಾರುವುದು.

Saturday, October 2, 2010
ಡೊಂಕು ಪ್ರಗಾಥ
ನಾನು ಡೊಂಕು ಎಂಬವರೊಬ್ಬರನ್ನು ಭೇಟಿಯಾಗಿದ್ದೇನೆ. ಒಂದು ಸಲ ಭೇಟಿಯಾದ ಮೇಲೆ ಇವರ ಬಗ್ಗೆ ಆಸಕ್ತಿ ಹುಟ್ಟಿ ಆಗಾಗ ಭೇಟಿಯಾಗುತ್ತಾ ಇವರ ಚಟುವಟಿಕೆಗಳನ್ನು ಗಮನಿಸುತ್ತಾ ಇದ್ದೇನೆ. ಇವರು ಡೊಂಕು ಎಂದಲ್ಲದೆ ಡೊಂಕ, ಡೊಂಕೇಶ, ಡೊಂಕುರಾಯ, ಡೊಂಕು ರಾವ್, ಡೊಂಕುಜಿ, ಡೊಂಕಪ್ಪ, ಡೊಂಕಯ್ಯ, ಮಿ. ಡೊಂಕು, ಶ್ರೀಮಾನ್ ಡೊಂಕು ಎಂಬಿತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕಾಣಿಸಿಕೊಳ್ಳುವುದಿದೆ. ಒಂದೇ ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕಾಣಿಸಿಕೊಳ್ಳುವುದೂ ಇದೆ. ಕೆಲವು ಸಲ ಇವರ ಶ್ರೀಮತಿಯವರಾದ ಶ್ರೀಮತಿ ಡೊಂಕಿಣಿಯೂ ಕಾಣಲಿಕ್ಕೆ, ಮಾತಾಡಲಿಕ್ಕೆ ಸಿಗುವುದಿದೆ. ಇವರೂ ಡೊಂಕಮ್ಮ, ಡೊಂಕಕ್ಕ, ಡೊಂಕವ್ವ, ಡೊಂಕಿತಿ, ಡೊಂಕಾವತಿ, ಡೊಂಕುಶ್ರೀ, ಡೊಂಕುಮತಿ, ಡೊಂಕಾಂಬೆ, ಡೊಂಕೇಶ್ವರಿ ಎಂಬಿತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಇವರ ಬಗ್ಗೆ fascination ಆಗಿ ಇವರನ್ನು ನನ್ನ ಶಕ್ತ್ಯಾನುಸಾರ ಅಧ್ಯಯನ ಮಾಡಿ ಕೆಲವು ಪದ್ಯ ಬರೆದಿದ್ದೇನೆ. ಅವುಗಳಲ್ಲಿ ಒಂದು ಪದ್ಯ ಕೆಳಗೆ ಕೊಟ್ಟಿದ್ದೇನೆ. ಇನ್ನುಳಿದ ಪದ್ಯಗಳನ್ನು ಮುಂದೊಂದು ದಿನ ಕೊಡುತ್ತೇನೆ. ನೀವೂ ಶ್ರೀಮಾನ್ ಡೊಂಕುವನ್ನು ಭೇಟಿಯಾಗಿರುವ ಸಾಧ್ಯತೆಯಿದೆ__ಈ ಪದ್ಯಗಳಲ್ಲಿ ಇಲ್ಲದ ಡೊಂಕು/ಡೊಂಕಿಣಿ ಸಾಹೇಬರ, ಅವರ ವಂಶಸ್ಥರ ಅನೇಕ ಹೊಸ ಗುಣಗಳು ನಿಮಗೆ ಗೊತ್ತಿರಬಹುದು. ಹಾಗಿದ್ದರೆ ಸೂಕ್ತ ಸಮಯದಲ್ಲಿ ನೋಟ್ಸ್ ಹೋಲಿಸಿಕೊಳ್ಳಬಹುದು.
"ಡೊಂಕು ಪ್ರಗಾಥ" ಮೊದಲು ನನ್ನ ಕವನ ಸಂಗ್ರಹ ಇಂದ್ರಪ್ರಸ್ಥ (1994)ದಲ್ಲಿ, ಆ ನಂತರ ನನ್ನ 1964-2003ರ ಸಮಗ್ರ ಕಾವ್ಯ ಮಾತಾಡುವ ಮರ (2003)ದಲ್ಲಿ ಪ್ರಕಟವಾಗಿದೆ.
ಡೊಂಕು ಪ್ರಗಾಥ
ಡೊಂಕು ಬಂದನೋ ಅಂಕು ಡೊಂಕು ಬಂದನೋ
ಅಂಕು ಡೊಂಕು ಸಂಕಪಾಲ ಡೊಂಕು ಬಂದನೋ
ಒಮ್ಮೆ ಕಣ್ಣ ಅತ್ತ ಕಡೆಗೆ ತಿರುಗಿ ಕಣ್ಣ ಇತ್ತ ಕಡೆಗೆ
ನೆತ್ತಿ ಕಡೆಗೆ ಆಗ ಈಗ ಕೊಂಕು ಬಂದನೋ
ಕೊಂಕು ಬಂದನೋ ಅಂಕು ಡೊಂಕು ಬಂದನೋ
ಡೊಂಕು ಬಂದನೋ ಪಾಂಕು ಹಿಡಿದು ಬಂದನೋ
ಬಾಲವನ್ನು ಕಿವಿಗೆ ಸೆಕ್ಕಿ ಮೆದುಳ ಪುಕುಳಿ ಒಟ್ಟೆಗಿಕ್ಕಿ
ಢುರ್ರ ಡುರ್ರ ಹೂಸು ಬಿಟ್ಟು ಡೊಂಕು ಬಂದನೋ
ಡೊಂಕು ಹೂಸು ಪರಿಮಳ, ಡೊಂಕು ಹೂಸು ಪರಿಮಳ
ಎಂದು ಮೆರೆದು ಹರಿದು ತರಿದು ಡೊಂಕು ಬಂದನೋ
ಕೆಲವು ಸಲ ಅತ್ತು ಬಿಡುವ, ಕೆಲವು ಸಲ ಬರಿದೆ ನಗುವ
ಕೆಲವು ಸಲ ಧ್ಯಾನಿಯಂತೆ ಕೂತು ಹೆಂಡ ಕುಡಿಯುವ
ಕೆಲವು ಸಲ ದುಡ್ಡು ಕೊಡುವ, ಕೆಲವು ಸಲ ಊಟ ಕೊಡುವ,
ಏನು ಕೊಡದೆ ಇದ್ದರೂನು ಕೊಟ್ಟೆನೆಂದು ಹೇಳಿಕೊಳುವ
ಡೊಂಕು ಬಂದನೋ ಅಂಕು ಡೊಂಕು ಬಂದನೋ
ಯಂಕು ಮಂಕು ಜೊತೆಗೆ ಸೇರಿ ಡೊಂಕು ಬಂದನೋ
ಇಂತು ಪರಿ ಅರೆಕ್ಷಣ ಒಡ್ಡೋಲಗ ಕೊಟ್ಟು ಡೊಂಕುವು ತೆರೆಯ ಹಿಂದೆ ಹೋದನು. ಒಡ್ಡೋಲಗ ಹೀಗೆ ಕ್ಷಣಾರ್ಧದಲ್ಲಿ ಬರ್ಖಾಸ್ತುಗೊಳ್ಳಲು ಕಾರಣವೆಂದರೆ__
ಡೊಂಕುವೂ ಡಾರ್ವಿನ್ನನ ವಿಕಾಸವಾದದ ರೀತಿ ಕೊಂಬು ಹಲ್ಲುಗುರು ಬಾಲ ಇಷ್ಟಿಷ್ಟೇ ಸವೆದು ಮನುಷ್ಯನಾದವನೇ ಹೌದಷ್ಟೇ. ಆದರೆ ಅವನು ಪ್ರಾಣಿಸಹಜವಾಗಿ ವರ್ತಿಸುತ್ತಲೂ ಯೋಚಿಸುತ್ತಲೂ ಇದ್ದುದರಿಂದ ಮೆದುಳಿನ ಪರಿಣಾಮ ದೇಹದ ಮೇಲೆ ಆಗಿ ಅದು ಹಿಮ್ಮುಖ ಸಾಗಿ ಅವನ ಅಂಡಿನ ಮೇಲೆ ಬಾಲ ಬೆಳೆಯಲು ಪ್ರಾರಂಭವಾಗಿತ್ತು. ಪರಿಣಾಮವಾಗಿ ಅವನಿಗೆ ಅರೆಕ್ಷಣಕ್ಕಿಂತ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಅದನ್ನು ಸರಿಪಡಿಸಲೆಂದು ಅವನು ಬೇರೆ ಬೇರೆ ವೈದ್ಯರನ್ನು, ಮಂತ್ರವಾದಿಗಳನ್ನು, ತೀರ್ಥಕ್ಷೇತ್ರಗಳನ್ನು ಭೇಟಿ ಮಾಡಿದ್ದನು. ಕೆಲವರು ಸಹಾನುಭೂತಿ ತೋರಿಸಿದರೆ, ಔಷಧಿಯನ್ನೋ ಪರಿಹಾರವನ್ನೋ ಹೇಳಿದರೆ, ಇನ್ನು ಕೆಲವರು ಬಾಲ ಬೆಳೆಯುವುದು ತಿಳಿಯುತ್ತಲೇ ನಗಲು ಸುರು ಮಾಡುವರು, ಬೇರೆಯವರ ಕರೆದು ವಿಷಯ ತಿಳಿಸುವರು, ಬಾಲ ತೋರಿಸು ಎನ್ನುವರು. ಇವನಿಗೆ ಇದರಿಂದ ಸಿಟ್ಟು ಬಂದು ಬೈಯ್ಯಲು, ಕಿರುಚಾಡಲು, ಹೊಡೆಯಲು ಮೊದಲಾಗುವನು. ಇವನು ಹೀಗೆ ಹೆಂಡ ಕುಡಿದ ಮಂಗನ ಹಾಗೆ ಆಡಲು ಸುರು ಮಾಡಿದೊಡನೆ ಬಾಲ ಮತ್ತೊಂದಿಂಚು ಬೆಳೆಯುವುದು. ಆದರೆ ಕೆಲವರು ಹೀಗೆ ಬಾಲ ಬೆಳೆಯುವುದು ಪವಾಡವೆಂದೂ ಹನುಮಂತ ದೇವರ ಕೃಪೆಯೆಂದೂ ತಿಳಿದು ಡೊಂಕುವನ್ನು ಭಕ್ತಿಯಿಂದ ಕಾಣುತ್ತಿದ್ದರು. ಅಂಥವರಲ್ಲಿ ಗೋಜೇಂದ್ರನೂ ಒಬ್ಬ. ಅದೆಂತೆಂದರೆ--
ಗೋಜೇಂದ್ರ ಜೊತೆಗೆ ಇದ್ದ ಖೋಜೇಂದ್ರ ಜೊತೆಗೆ ಇದ್ದ
ಡೊಂಕು ಹೂಸಿ ಮೂಸಿ ಮೂಸಿ ಹಿಂದೆ ಹಿಂದೆ ಬರುತಲಿದ್ದ
ದೇವರನ್ನು ಬೇಡುತಿದ್ದ--ನನಗೆ ಒಂದು ಬಾಲ ಕೊಡು
ಡೊಂಕುವಂಥ ಬುದ್ಧಿ ಕೊಡು, ಅಂಕು ಡೊಂಕು ಮಾಡಿ ಬಿಡು
ಡೊಂಕು ಮರಿಯ ಮಾಡು ನನ್ನ ಕಪ್ಪು ಕುರಿಯ ಮಾಡು ನನ್ನ
ಡೊಂಕು ಸೇವೆಯಲ್ಲಿ ಮನಸ ಸದಾ ಇರಿಸು ದೇವರೇ
ಗೋಜೇಂದ್ರನಿಗು ಒಂದು ಬಾಲ ಬಂದಿತೋ--ಸಣ್ಣ
ಬಾಲ ಬಂದಿತೋ
ಖೋಜೇಂದ್ರನಿಗು ಒಂದು ಬಾಲ ಬಂದಿತೋ--ಚೆನ್ನ
ಬಾಲ ಬಂದಿತೋ
ಹೆಂಡತಿಯು ನೋಡಿದಳು ಖೋಜೇಂದ್ರನಾ ಬಾಲ
ಕೈಯ್ಯಲ್ಲಿ ಅದುಮುತ್ತ ಸುಖ ಪಟ್ಟಳು:
ಮುಂದೆ ಇರೊದಕ್ಕಿಂತ ಹಿಂದೆ
ಇರೋದೇ ಚೆಂದ
ಮನುಷ್ಯರಂತೆ ನಡೆಯೋಕಿಂತ
ಕುಣಿಯೋದೇ ಅಂದ
ಸೂಟು ಬೂಟು ಹಾಕ್ಕೊಂಡು ಹೋಗಿ
ದೊಡ್ಡವ ಅಂತಾರೆ
ಮಾರ್ಕ್ಸ್ ಕಾರ್ಡು ಹಿಡ್ಕೊಂಡು ಹೋಗಿ
ಜೀನಿಯಸ್ ಅಂತಾರೆ
ಪ್ಯಾಂಟಿನೊಳಗೆ ಬಾಲ ಇರಲಿ ಕೋತಿ ಆಗಲಿ
ನಾನು ಇದನೆ ಬಳಸಿಕೊಳುವೆ ಹೀಗೇ ಇರಲಿ
ಕೋತಿ ನಾನು ನೀನು ಜೊತೆಲಿ ಹೇನು ತಿನ್ನೋಣ
ರಾತ್ರಿಯಲ್ಲಿ ಮರವ ಹತ್ತಿ ಹಲ್ಲು ಕಿರಿಯೋಣ
ನೀನು ಖೋಜು ನಾನು ರೋಜು
ಎಂಥಾ ಗೌಜು
ನಿನಗೆ ಬಾಲ ಬಂದ ಮೇಲೆ
ಎಂಥಾ ಮೋಜು
ಹೀಗೇ ಕಾಲ ಕುಣಿದು ಶ್ರೀ ಮತ್ತು ಶ್ರೀಮತಿ ಗೋಜೇಂದ್ರರಿಗೆ ಮಕ್ಕಳು ಹುಟ್ಟಲು ಪ್ರಾರಂಭವಾದವು. ಹುಟ್ಟಿದ ಹತ್ತು ಮಕ್ಕಳಲ್ಲಿ ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ಬಾಲ. ಇವರು ಕಿರುಚಿದರೆ, ಸಿಟ್ಟು ಮಾಡಿಕೊಂಡರೆ, ಇನ್ನೊಬ್ಬರನ್ನು ದ್ವೇಷಿಸಿದರೆ, ಹೊಡೆದರೆ, ಬೈದರೆ ಬಾಲ ಒಂದೊಂದಿಂಚು ಬೆಳೆಯುವುದು. ಇನ್ನೊಬ್ಬರನ್ನು ಪ್ರೀತಿಯಿಂದ ಕಂಡೊಡನೆ ಬಾಲ ಚಿಕ್ಕದಾಗುವುದು. ಇವರಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೂ ಹೀಗೇ ಬಾಲ. ಜೊತೆಗೆ ಡೊಂಕುವಿಗೆ ಬಾಲ ಬಂದಂತೆ ಅನೇಕರಿಗೆ ಇದ್ದಕ್ಕಿದ್ದಂತೆ ಬಾಲ ಬೆಳೆಯಲು ಪ್ರಾರಂಭವಾಯಿತು. ಇಂತಾಗಿ ಮೂರು ನಾಲ್ಕು ಜನರೇಷನ್ನು ಕಳೆಯುವುದರೊಳಗೆ ವಿಕಾಸವಾದದ ವಿರುದ್ಧವಾಗಿ ಈ ನಾಗರಿಕತೆ ಹಿಮ್ಮುಖ ಸಾಗಿ ಬಾಲವಿದ್ದ ಸಾಕಷ್ಟು ಸಂಖ್ಯೆಯ ಜನಗಳು ಈ ನಾಡಿನಲ್ಲಿ ತುಂಬಿಕೊಂಡರು. ಆದಿಮ ಜನಾಂಗದ ರೀತಿಯಲ್ಲಿ ಹೊಡೆದಾಡುತ್ತಿದ್ದವರು ಇದ್ದಕ್ಕಿದ್ದಂತೆ ಬಾಲ ಬೆಳೆದು ಅನಿಯಂತ್ರಿತವಾಗಿ ಮರದ ಮೇಲೆ ನೆಗೆದು ಕೂತು ಹಲ್ಲು ಕಿರಿಯುವುದು ಸಾಮಾನ್ಯವಾಗಿತ್ತು. ಬಾಲವಿದ್ದವರೇ ಹೆಚ್ಚಿದ್ದರಿಂದ ಚುನಾವಣೆಯಲ್ಲಿ ಅವರೇ ಗೆದ್ದು ಬರುತ್ತಿದ್ದರು. ಬಾಲವಿದ್ದವರಿಗೆ ಇದ್ದ ಬೆಲೆ, ಸವಲತ್ತು ಇಲ್ಲದವರಿಗೆ ಇಲ್ಲದ್ದರಿಂದ ಬಾಲವಿಲ್ಲದವರು ತಮಗೂ ಬಾಲ ಬರಲಿ ಎಂದು ಹಂಬಲಿಸುವಂತಾಯಿತು. ನಾಗರಿಕತೆ ಮತ್ತೆ ಪ್ರಾಣಿ ಸ್ಥಿತಿಗೆ ಹಿಂದಿರುಗುತ್ತಿರುವ ಇಂಥಾ ಸಂದರ್ಭದಲ್ಲಿ ಡೊಂಕುವೇ ಈ ಜನಾಂಗದ ಪ್ರಧಾನ ಪಿತೃ ಎನಿಸಿದನು ಎಂಬಲ್ಲಿಗೆ--
ಮಂಗಲಂ ಜಯ ಮಂಗಲಂ---ಶುಭ
ಮಂಗಲಂ
ಸಹಜ ಮಾನವರಂತೆ ಓಡಾಡುವ ಜನರಿಗೆ
ಮಂಗಲಂ ಜಯ ಮಂಗಲಂ
ಸಹಜ ಉಣ್ಣುವ ತಿನ್ನುವ ಹೆಂಡತಿ ಮಕ್ಕಳ ಜೊತೆಗೆ
ಕಾಲ ಕಳೆಯುವ ಜನಕೆ ಮಂಗಲಂ
ಸಹಜ ಜೀವನ ಗತಿಯ ಅನುಸರಿಸುವವ ಯಾರೊ
ಸಹಜ ನಗೆ ಮಾತುಗಳ ಮನುಷ್ಯ ಯಾರೋ
ಕೊಂಕುವಲ್ಲ ಡೊಂಕುವಲ್ಲ ವಂಕಿ ಮಂಕಿಗಳಲ್ಲ
ಸಹಜ ಮನುಷ್ಯನ ಬದುಕ ಸಹಜತೆಗೋ
ತೆವಳದೆ ಹಾರದೆ ನಡೆವವಗೋ
ಮಂಗಲಂ ಜಯ ಮಂಗಲಂ--ಶುಭ
ಮಂಗಲಂ.
(1990)